ಬೆಂಗಳೂರು : ಯಾವುದೇ FIR, ಕೇಸ್ ಇಲ್ಲದೇ ವ್ಯಕ್ತಿಯ ಅಕೌಂಟ್ ಫ್ರೀಜ್ ಮಾಡಿ ಬಲವಂತವಾಗಿ ಸೆಟ್ಲಮೆಂಟ್ಗೆ ಯತ್ನಿಸಿದ ಹೆಬ್ಬಾಳ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಭೈರಾ ಹಾಗೂ ಪಿಎಸ್ಐ ಮಧು ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ರಾಘವೇಂದ್ರ ಎಂಬುವವರು ಶ್ರೀನಿವಾಸ್ ಮೂರ್ತಿ ಎಂಬುವವರಿಗೆ 47 ಲಕ್ಷ ಸಾಲ ನೀಡಿದ್ದರು. ಆ ಬಳಿಕ ಕೊಡಬೇಕಾದ ಸಾಲವನ್ನು ಮನೆ ಮಾರಾಟ ಮಾಡಿ ಕೊಡೋದಾಗಿ ಶ್ರೀನಿವಾಸ್ ಮೂರ್ತಿ ರಾಘವೇಂದ್ರ ಬಳಿ ಹೇಳಿದ್ದರು. ಅದೇ ರೀತಿ ಮನೆ ಮಾರಾಟ ಮಾಡಿ ರಾಘವೇಂದ್ರ ಅವರಿಗೆ 47 ಲಕ್ಷದ ಚೆಕ್ ನೀಡಿದ್ರು. ಹಣ ರಾಘವೇಂದ್ರ ಅಕೌಂಟ್ಗೆ ಟ್ರಾನ್ಸ್ಫರ್ ಆದ ನಂತ್ರ ಶ್ರೀನಿವಾಸ್ ಮೂರ್ತಿ ಹೈಡ್ರಾಮ ಶುರು ಮಾಡಿದ್ದರು.
ಹೆಬ್ಬಾಳ ಠಾಣೆಗೆ ಹೋಗಿ ರಾಘವೇಂದ್ರ ಬಲವಂತವಾಗಿ ನನ್ನ ಬಳಿ ಚೆಕ್ ಬರೆಸಿಕೊಂಡು ಹಣ ವರ್ಗವಣೆ ಮಾಡಿಕೊಂಡಿದ್ದಾರೆ ಎಂದು ದೂರು ನೀಡಿದ್ದರು. ಈ ವೇಳೆ ಯಾವುದೇ ಕೇಸ್, ಪಿಟಿಷನ್ ಕೂಡ ಮಾಡಿಕೊಳ್ಳದೇ ಹೆಬ್ಬಾಳ ಶಾಖೆಯ ಕೆನರಾ ಬ್ಯಾಂಕ್ಗೆ ಪತ್ರ ಬರೆದು ರಾಘವೇಂದ್ರ ಅಕೌಂಟ್ನ್ನು ಹೆಬ್ಬಾಳ ಪೊಲೀಸರು ಫ್ರೀಜ್ ಮಾಡಿಸಿದ್ದರು. ಸಿವಿಲ್ ವ್ಯವಹಾರ, ಹಣಕಾಸಿನ ವ್ಯವಹಾರ ಅಂತ ಗೊತ್ತಿದ್ರು ಹೆಬ್ಬಾಳ ಪೊಲೀಸರು ವಿಚಾರಣೆ ನಡೆಸದೆ ಅಕೌಂಟ್ ಫ್ರೀಜ್ ಮಾಡಿಸಿದ್ದರು.
ಇನ್ನು ಹೆಬ್ಬಾಳ ಪೊಲೀಸ್ ಇನ್ಸ್ಪೆಕ್ಟರ್ ಭೈರಾ ಹಾಗೂ PSI ಮಧು ರಾಘವೇಂದ್ರಗೆ ಕಿರುಕುಳ ನೀಡಿದ್ದು, ಠಾಣೆಗೆ ಬಂದು ಸೆಟ್ಲೆಮೆಂಟ್ ಮಾಡಿಕೊಳ್ಳುವಂತೆ ಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ. ಈ ಸಂಬಂಧ ಇದೀಗ ಇನ್ಸ್ಪೆಕ್ಟರ್ ಭೈರಾ ಹಾಗೂ PSI ಮಧು ವಿರುದ್ದ ಲೋಕಾಯುಕ್ತಗೆ ದೂರು ಸಲ್ಲಿಸಲಾಗಿದೆ.
ಇದನ್ನೂ ಓದಿ : ಬಿಜೆಪಿ ಸೋಲಿಸಿ ಬಳ್ಳಾರಿ ಉಳಿಸಿ – ಸಂಡೂರು ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ..!