Download Our App

Follow us

Home » ಸಿನಿಮಾ » ಅದ್ದೂರಿಯಾಗಿ ಸೆಟ್ಟೇರಿದ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ..!

ಅದ್ದೂರಿಯಾಗಿ ಸೆಟ್ಟೇರಿದ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ..!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನೀರಿಕ್ಷಿತ ‘ಟಾಕ್ಸಿಕ್‌’ ಸಿನಿಮಾದ ಮುಹೂರ್ತ ಇಂದು ನೆರವೇರಿದೆ. HMT ಫ್ಯಾಕ್ಟರಿ ಬಳಿ ಸಿದ್ದವಾಗಿರುವ ಟಾಕ್ಸಿಕ್ ಸೆಟ್​ನಲ್ಲೇ ಇಂದು ಬೆಳಗಿನ ಜಾವ ಬ್ರಾಹ್ಮೀ  ಮುಹೂರ್ತದಲ್ಲಿ ಸಿನಿಮಾಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ.

ಸಹಜವಾಗಿ ಸಿನಿಮಾ ಮುಹೂರ್ತವನ್ನು ಗಣ್ಯ ವ್ಯಕ್ತಿಗಳ ಕೈಯಿಂದಲೋ, ರಾಜಕಾರಣಿಗಳಿಂದ ಅಥವಾ ಸ್ಟಾರ್‌ ನಟರಿಂದಲೋ ಕ್ಲಾಪ್‌ ಮಾಡಿಸುವುದು ಸಹಜ. ಆದರೆ, 200 ಕೋಟಿ ಬಜೆಟ್​​​ನ ಟಾಕ್ಸಿಕ್‌ ಸಿನಿಮಾಗೆ ಸೆಟ್‌ ಬಾಯ್​​ಯಿಂದ ಕ್ಲಾಪ್‌ ಮಾಡಿಸಿ ಚಿತ್ರತಂಡ ಸರಳತೆ ಮೆರೆದಿದೆ. ಈ ಮೂಲಕ ಯಶ್​​ ಸಿನಿಮಾ ತಂತ್ರಜ್ಞರು ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ತೋರಿಸಿದ್ದಾರೆ.

ಮೊನ್ನೆಯಷ್ಟೇ ಯಶ್ ದಂಪತಿ ಮತ್ತು ಕೋ ಪ್ರೊಡ್ಯೂಸರ್ ವೆಂಕಟ್ ಕೋಣಂಕಿ, ಸುರ್ಯ ಸದಾಶಿವ ರುದ್ರ, ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದಿದ್ದರು. ಈ ಬೆನ್ನಲ್ಲೇ ಸರಳವಾಗಿ ಟಾಕ್ಸಿಕ್‌ ಸಿನಿಮಾದ ಮುಹೂರ್ತ ನೆರವೇರಿದೆ. ಈ ಮೂಲಕ ಮೂರು ವರ್ಷಗಳ ನಂತರ ಯಶ್ 19ನೇ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಇಂದಿನಿಂದಲೇ ಟಾಕ್ಸಿಕ್ ಶೂಟಿಂಗ್​ನಲ್ಲಿ ರಾಕಿಭಾಯ್ ಪಾಲ್ಗೊಳ್ತಿದ್ದಾರೆ.

ಇನ್ನು ಈ ಚಿತ್ರಕ್ಕೆ ಗೀತು ಮೋಹನ್ ದಾಸ್ ನಿರ್ದೇಶನ ಮಾಡಲಿದ್ದಾರೆ. ಯಶ್ ನಟನೆಯ ಈ ಸಿನಿಮಾವನ್ನು ಕೆವಿಎನ್‌ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸದ್ಯ ಯಶ್ ಹೊಸ ಸಿನಿಮಾದ ಶೂಟಿಂಗ್‌ಗೆ ಚಾಲನೆ ಸಿಕ್ಕಿರುವ ವಿಷ್ಯ ತಿಳಿದು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

ಇದನ್ನೂ ಓದಿ : ಪೊಲೀಸರನ್ನ ಬಳಸಿ ಕಾಂಗ್ರೆಸ್​ MLAಯಿಂದ ಅಧಿಕಾರ ದುರ್ಬಳಕೆ ಆರೋಪ – ಹೈಕೋರ್ಟ್ ಮೆಟ್ಟಿಲೇರಿ ಕಣ್ಣೀರಿಟ್ಟ ಅಧಿಕಾರಿ..!

Leave a Comment

DG Ad

RELATED LATEST NEWS

Top Headlines

ಸರ್ಜರಿ ಬಳಿಕ ನಟ ಶಿವಣ್ಣ ರಿಲ್ಯಾಕ್ಸ್ – ಸಮುದ್ರ ತಟದಲ್ಲಿ ಪತ್ನಿ ಜೊತೆ ಜಾಲಿ ರೌಂಡ್ಸ್​​!

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಸರ್ಜರಿ ಬಳಿಕ ಅಮೆರಿಕಾದಲ್ಲಿ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಶಸ್ತ್ರಚಿಕಿತ್ಸೆ ನಂತ್ರ ಚೇತರಿಕೆ ಕಂಡಿರುವ ಹ್ಯಾಟ್ರಿಕ್ ಹೀರೋ ಪತ್ನಿ ಜೊತೆ ಅಮೆರಿಕದ ಕಡಲ

Live Cricket

Add Your Heading Text Here