Download Our App

Follow us

Home » ಅಪರಾಧ » ಅಕ್ರಮವಾಗಿ ವಿದೇಶಿ ಚಾಕಲೇಟ್ ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ದಾಳಿ..!

ಅಕ್ರಮವಾಗಿ ವಿದೇಶಿ ಚಾಕಲೇಟ್ ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ದಾಳಿ..!

ಬೆಂಗಳೂರು : ಅಕ್ರಮವಾಗಿ ವಿದೇಶಿ ಚಾಕಲೇಟ್ ಮಾರಾಟ ಮಾಡುತ್ತಿದ್ದ ಗೋಡೌನ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನ ಸುಧಾಮನಗರದಲ್ಲಿರುವ ನರೇಂದರ್ ಸಿಂಗ್ ಎಂಬಾತನ ಮಾಲೀಕತ್ವದ ಮಮತ ಏಜೇನ್ಸಿ ಮೇಲೆ ದಾಳಿ ಮಾಡಿದ್ದಾರೆ.

ಬೆಂಗಳೂರಿನ ಸುಧಾಮನಗರದಲ್ಲಿರುವ ಮಮತಾ ಏಜೇನ್ಸಿಗೆ ನರೇಂದರ್ ಸಿಂಗ್ ವಿದೇಶಿ ಚಾಕಲೇಟ್​​​ಗಳನ್ನು ಅಕ್ರಮವಾಗಿ ತರಿಸುತ್ತಿದ್ದನು. ನಂತರ ನಕಲಿ ರ್ಯಾಪರ್ ಹಾಕಿ ಮಾಲ್ ಹಾಗು ಸೂಪರ್ ಮಾರ್ಕೆಟ್ ಗಳಿಗೆ ಸಪ್ಲೈ ಮಾಡುತ್ತಿದ್ದನು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ತಂಡ ಗೋಡೌನ್ ಮೇಲೆ ರೇಡ್​​ ಮಾಡಿದೆ. ದಾಳಿ ನಡೆದ ನಂತರ ಮಾಲೀಕ ನರೇಂದರ್ ಸಿಂಗ್ ಎಸ್ಕೇಪ್ ಆಗಿದ್ದಾನೆ. ಇನ್ನು ದಾಳಿ​​ ವೇಳೆ ಗೋಡೌನ್​​ನಲ್ಲಿ ಲಕ್ಷಾಂತರ ರೂ ಮೌಲ್ಯದ ಮಾಲು ಪತ್ತೆಯಾಗಿದೆ. ಇನ್ನು ನರೇಂದರ್ ಸಿಂಗ್ ವಿರುದ್ದ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ನರೇಂದರ್ ಸಿಂಗ್​ಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಉಡುಪಿಯ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಭೇಟಿ..!

Leave a Comment

DG Ad

RELATED LATEST NEWS

Top Headlines

ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಡ್ರೆಸ್ ಕೋಡ್ ಜಾರಿ – ದೇವರ ದರ್ಶನಕ್ಕೆ ಸಾಂಪ್ರದಾಯಿಕ ಉಡುಗೆ ಕಡ್ಡಾಯ..!

ಚಿಕ್ಕಮಗಳೂರು : ಇತ್ತೀಚೆಗೆ ಶೃಂಗೇರಿಯ ಶ್ರೀ ಶಾರದಾಂಬೆ ಸನ್ನಿಧಾನದಲ್ಲಿ ಹಾಗೂ ಸುತ್ತಲಿನ ದೇವಸ್ಥಾನಗಳಲ್ಲಿ ಡ್ರೆಸ್ ಕೋಡ್ ಜಾರಿಯಾಗಿತ್ತು. ಇದೀಗ ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹೊರನಾಡು ಶ್ರೀ

Live Cricket

Add Your Heading Text Here