Download Our App

Follow us

Home » ಜಿಲ್ಲೆ » ಮಂಗಳೂರಲ್ಲಿ ತೀವ್ರಗೊಂಡ ಕಡಲ್ಕೊರೆತ : ನೋಡ ನೋಡುತ್ತಿದ್ದಂತೆ ಮನೆ ಸಮುದ್ರಪಾಲು, ದೃಶ್ಯ ಮೊಬೈಲ್​ನಲ್ಲಿ ಸೆರೆ..!

ಮಂಗಳೂರಲ್ಲಿ ತೀವ್ರಗೊಂಡ ಕಡಲ್ಕೊರೆತ : ನೋಡ ನೋಡುತ್ತಿದ್ದಂತೆ ಮನೆ ಸಮುದ್ರಪಾಲು, ದೃಶ್ಯ ಮೊಬೈಲ್​ನಲ್ಲಿ ಸೆರೆ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಮನೆಗಳಿಗೆ ನೀರು ನುಗ್ಗಿದೆ.

ಇನ್ನು ಸೋಮೇಶ್ವರದ ಉಚ್ಚಿಲ ಬಟ್ಟಪ್ಪಾಡಿ ಎಂಬ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಅಪಾಯಕ್ಕೀಡಾದ ಮನೆಯಲ್ಲಿದ್ದ ಕುಟುಂಬವನ್ನು ಸ್ಥಳಾಂತರಿಸಿದ ಬೆನ್ನಲ್ಲೇ ಆ ಮನೆಯನ್ನು ಕಡಲಿನ ರಕ್ಕಸ ಅಲೆಗಳು ನುಂಗಿ ಹಾಕಿವೆ. ಅಲೆಗಳ ಆರ್ಭಟಕ್ಕೆ ಮನೆ ಕುಸಿದು ಬೀಳುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ. ಮತ್ತೆ ಅಪಾಯ ಎದುರಿಸುತ್ತಿರುವ ಮೂರು ಮನೆಗಳ ಕುಟುಂಬ ಸದಸ್ಯರನ್ನ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.

ಸೋಮೇಶ್ವರ ಪುರಸಭೆ ಮುಖ್ಯಾಧಿಕಾರಿಗಳಾದ ಮತ್ತಡಿ, ತಹಶೀಲ್ದಾ‌ರ್ ಪ್ರದೀಪ್ ಕೊರ್ಡೆಕರ್ ಸಹಿತ ಹಲವು ಅಧಿಕಾರಿಗಳು ಬಟ್ಟಪ್ಪಾಡಿಗೆ ತೆರಳಿ ಅಪಾಯದಲ್ಲಿರುವ ಮನೆಗಳ ಕುಟುಂಬವರನ್ನು ತೆರವುಗೊಳಿಸಿದ್ದಾರೆ.

ಇದನ್ನೂ ಓದಿ : ಚಿಕ್ಕ ಮಗುವಿನಿಂದಲೂ ಅಮೂಲ್ಯಳನ್ನು ಎತ್ತಿ ಆಡಿಸಿದ್ದೇನೆ, ಆಕೆಯ ಜೊತೆ ರೊಮ್ಯಾಂಟಿಕ್ ಸೀನ್ ಸಾಧ್ಯವಿಲ್ಲ : ನಟ ದರ್ಶನ್..!

 

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here