ಉಡುಪಿ : ಎರಡು ದಿನಗಳಿಂದ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ದೊಡ್ಡಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಕುಸಿದಿದೆ. ವಿದ್ಯಾರ್ಥಿಗಳ ಬಿಸಿಯೂಟ ಬಡಿಸುವ ಕೋಣೆಯ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಅನಾಹುತದಿಂದ ಪಾರಾಗಿದ್ದಾರೆ.
ಎರಡು ವರ್ಷದ ಹಿಂದಷ್ಟೇ ಶಾಲಾ ಕಟ್ಟಡ ದುರಸ್ತಿಗೊಂಡಿತ್ತು. ಶಿಥಿಲಗೊಂಡಿದ್ದ ಗೋಡೆ ನಿನ್ನೆ ರಾತ್ರಿ ಏಕಾಏಕಿ ಕುಸಿದಿದೆ. ಗೋಡೆ ಕುಸಿದ ಪರಿಣಾಮ ಅಡುಗೆ ಸಾಮಗ್ರಿಗಳು, ಗ್ಯಾಸ್ ಸಿಲಿಂಡರ್‌ಗಳು, ವಿದ್ಯಾರ್ಥಿಗಳ ಊಟಕ್ಕೆ ಬಳಸುತ್ತಿದ್ದ 40ಕ್ಕೂ ಹೆಚ್ಚು ಸ್ಟೀಲ್ ಪ್ಲೇಟ್‌ಗಳು ಮಣ್ಣಿನಡಿಯಲ್ಲಿ ಹೂತು ಹೋಗಿವೆ.
ಇದನ್ನೂ ಓದಿ : ಒಂದೇ ಠಾಣೆಯಲ್ಲಿ 5 ವರ್ಷ ಪೂರೈಸಿರೋ ಸಿಬ್ಬಂದಿಗಳಿಗೆ ವರ್ಗಾವಣೆಗೆ ಸೂಚನೆ ನೀಡಿದ DG-IGP ಅಲೋಕ್ ಮೋಹನ್..!
Post Views: 325