ಚಿತ್ರದುರ್ಗ : ಬಿಜೆಪಿ ಹಗರಣ ತನಿಖೆ ಮಾಡಿಸೋ ಸಿದ್ದು ಇಲ್ಲೀವರೆಗೂ ಯಾಕೆ ಸುಮ್ಮನಿದ್ರಿ. ನೀವು ವಿಪಕ್ಷ ನಾಯಕರಾಗಿದ್ದಾಗ ಇದೆಲ್ಲವೂ ಕಂಡಿರಲಿಲ್ಲವೇ. ಈಗ ನಿಮ್ಮ ತಪ್ಪು ಮುಚ್ಚಿ ಹಾಕಿಕೊಳ್ಳೋಕೆ ಸುಳ್ಳು ಆರೋಪ ಮಾಡ್ತಿದ್ದೀರಾ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಗುಡುಗಿದ್ದಾರೆ.
ಬಿಜೆಪಿ ಅಧಿಕಾರಾವಧಿಯ 21 ಹಗರಣಗಳ ತನಿಖೆಗೆ ಸೂಚನೆ ನೀಡಿರುವ ಸಿಎಂ ಸಿದ್ದರಾಮಯ್ಯ ವಿರುದ್ದ ಚಿತ್ರದುರ್ಗದಲ್ಲಿ ಕಿಡಿಕಾರಿದ ಪ್ರಲ್ಹಾದ್ ಜೋಶಿ ಅವರು, ಅಧಿಕಾರಕ್ಕೆ ಬಂದು ಒಂದು ವರ್ಷವಾದ್ರೂ ಯಾಕೆ ಸುಮ್ಮನಿದ್ರಿ. ಬಿಜೆಪಿ ಹಗರಣಗಳ ತನಿಖೆ ಬಗ್ಗೆ ಯಾಕೆ ಕ್ರಮ ಕೈಗೊಳ್ಳಲಿಲ್ಲ. ವಾಲ್ಮೀಕಿ, ಮುಡಾ ಕೇಸ್ನಲ್ಲಿ ಸಿಕ್ಕಿ ಬೀಳೋ ಭಯಾನಾ ಎಂದು ಪ್ರಶ್ನಿಸಿದ್ದಾರೆ.
ಇನ್ನು ವಾಲ್ಮೀಕಿ ಹಗರಣದಲ್ಲಿ ಮಂತ್ರಿ ಅರೆಸ್ಟ್ ಆದ್ಮೇಲೆ ಇದೆಲ್ಲಾ ಹೇಳ್ತಿದ್ದಾರೆ. ಬಳ್ಳಾರಿ, ತೆಲಂಗಾಣ ಎಲೆಕ್ಷನ್ಗೆ ವಾಲ್ಮೀಕಿ ನಿಗಮದ ಹಣ ಬಳಕೆ ಆಗಿದೆ. ದಪ್ಪ ಚರ್ಮದ ಸರ್ಕಾರ ಇದೆಲ್ಲವನ್ನೂ ಮುಚ್ಚೋ ಪ್ರಯತ್ನ ಮಾಡ್ತಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಬಿಜೆಪಿ ಕಾಲದಲ್ಲಿ ನಿಗಮ-ಮಂಡಳಿಗಳಲ್ಲಿ ಅಕ್ರಮಗಳು ನಡೆದಿವೆ – ಡಿಸಿಎಂ ಡಿ.ಕೆ.ಶಿವಕುಮಾರ್..!