ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ನಡೆದ 94 ಕೋಟಿ ಹಗರಣ ಪ್ರಕರಣದಲ್ಲಿ ಇದೀಗ ಶಾಸಕ ಬಸನಗೌಡ ದದ್ದಲ್ ಹೆಸರು ಕೂಡ ಕೇಳಿ ಬರ್ತಿದೆ. ನಾಗೇಂದ್ರ, ಶರಣಪ್ರಕಾಶ್ ಬೆನ್ನಲ್ಲೇ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ಗೂ ಸಂಕಷ್ಟ ಎದುರಾಗಿದೆ.
ವಾಲ್ಮೀಕಿ ನಿಗಮದ ಅಧ್ಯಕ್ಷರಾದ ಬಳಿಕ ಬಸನಗೌಡ ದದ್ದಲ್ ಆರೋಪಿ ನಂ.8 ಪರಶುರಾಮ ಜೊತೆ ವಾಟ್ಸಪ್ ಚಾಟಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪಿ ನಂ 8 ಪರ ವಕೀಲ ಪರಶುರಾಮ ಸಲ್ಲಿಸಿದ 3 ಪುಟಗಳ ಹೇಳಿಕೆಯಲ್ಲಿ ಪ್ರಸ್ತಾಪ ಮಾಡಲಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ವಕೀಲ ಪರಶುರಾಮ ಕೋರಿದ್ದಾರೆ.
ಈಗಾಗಲೇ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವ-ಇಚ್ಛೆಯಿಂದಲೆ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ನೀಡುವಂತೆ ಯಾರೂ ನನಗೆ ಒತ್ತಡ ಹಾಕಿಲ್ಲ. ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾಡುಗೋಡಿಯಲ್ಲಿ ಯುವಕನ ಮೇಲೆ ಹ*ಲ್ಲೆ ಕೇಸ್ – 7 ಮಂದಿ ಅರೆಸ್ಟ್..!