Download Our App

Follow us

Home » ಜಿಲ್ಲೆ » ಸಾತ್ವಿಕ್ ಯಶಸ್ವಿ ರಕ್ಷಣಾ ಕಾರ್ಯಚರಣೆ ತಂಡಕ್ಕೆ ವಿಜಯಪುರ ಜಿಲ್ಲಾಡಳಿತದಿಂದ ಸನ್ಮಾನ..!

ಸಾತ್ವಿಕ್ ಯಶಸ್ವಿ ರಕ್ಷಣಾ ಕಾರ್ಯಚರಣೆ ತಂಡಕ್ಕೆ ವಿಜಯಪುರ ಜಿಲ್ಲಾಡಳಿತದಿಂದ ಸನ್ಮಾನ..!

ವಿಜಯಪುರ : ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್​ನ ರಕ್ಷಣಾ ಕಾರ್ಯಾಚರಣೆ ಯಶಸ್ವಿಗೊಳಿಸಿದ ತಂಡಕ್ಕೆ ವಿಜಯಪುರ ಜಿಲ್ಲಾಡಳಿತ ಕೃತಜ್ಞತೆ ಸಲ್ಲಿಸಿ ಸನ್ಮಾನಿಸಿದೆ.

ಬುಧವಾರ ಸಂಜೆ ಲಚ್ಯಾಣ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಮಗು ಸಾತ್ವಿಕನನ್ನು 20 ಗಂಟೆಗಳಲ್ಲಿ ಸುರಕ್ಷಿತವಾಗಿ ಮೇಲೆತ್ತುವ ಕಾರ್ಯಾಚರಣೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಸ್ಥಳೀಯ ಅಗ್ನಿಶಾಮಕ ಸೇವೆ ದಳ, ಕಲಬುರಗಿ, ಬೆಳಗಾವಿಯ ಎಸ್.ಡಿ.ಆರ್.ಎಫ್, ಹೈದರಾಬಾದ್ ಎನ್.ಡಿ.ಆರ್.ಎಫ್. ತಂಡಗಳ ಅಧಿಕಾರಿಗಳು-ಸಿಬ್ಬಂದಿಯನ್ನು ವಿಜಯಪುರ ಜಿಲ್ಲಾಡಳಿತ ಕೃತಜ್ಞತಾ ಪೂರ್ವಕವಾಗಿ ಗೌರವಿಸಿದೆ.

ಸಾತ್ವಿಕ ರಕ್ಷಣಾ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡ ತಂಡಗಳ ಮುಖಸ್ಥರು, ಸದಸ್ಯರನ್ನು ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸರಳ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿ.ಪಂ. ಸಿಇಓ ರಿಷಿ ಆನಂದ್, ಎಸ್​ಪಿ ಹೃಷಿಕೇಶ್ ಸೋನಾವಣೆ ಜಂಟಿಯಾಗಿ ಸನ್ಮಾನಿಸಿ ಗೌರವಿಸಿ, ಬೀಳ್ಕೊಟ್ಟರು.

ಸದ್ಯ, ಸಾತ್ವಿಕ್ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿ 14 ಗಂಟೆಗಳು ಕಳೆದಿದ್ದು, ಆರೋಗ್ಯವಾಗಿದ್ದಾನೆ. ಇಂಡಿ ತಾಲೂಕು ಆಸ್ಪತ್ರೆಯಿಂದ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ನಿನ್ನೆ ಸಾಯಂಕಾಲ 5 ಗಂಟೆಗೆ ದಾಖಲು ಮಾಡಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದ ವೇಳೆ ಸಿಟಿ ಸ್ಕ್ಯಾನ್ ಸೇರಿದಂತೆ ಹಲವು ಪರೀಕ್ಷೆಗಳನ್ನು ವೈದ್ಯರು ನಡೆಸಿದ್ದಾರೆ.

ಇದನ್ನೂ ಓದಿ : ಹನುಮಾನ್​​ ಚಾಲೀಸಾ ಕೇಸ್​ಗೆ ಬಿಗ್​ ಟ್ವಿಸ್ಟ್​ : ಹಲ್ಲೆಗೊಳಗಾಗಿದ್ದ ಮುಖೇಶ್​ ಮೇಲೆಯೇ FIR ದಾಖಲು..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಲ್ಲಿ ಕಾರು-ಆಟೋ ನಡುವೆ ಭೀಕರ ಅಪಘಾತ – ಆಟೋ ಚಾಲಕ ದುರ್ಮರಣ..!

ಬೆಂಗಳೂರು : ನಗರದಲ್ಲಿ ಸೆ.6ರ ತಡರಾತ್ರಿ ಕಾರು ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಸಾವನ್ನಪಿರುವ ಘಟನೆ ಜ್ಞಾನಭಾರತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ. ಕಿರಣ್(32) ಅಪಘಾತದಲ್ಲಿ ಮೃತನಾದ

Live Cricket

Add Your Heading Text Here