Download Our App

Follow us

Home » ರಾಷ್ಟ್ರೀಯ » ಸಿಎಂಗಾಗಿ ತಂದಿದ್ದ ಸಮೋಸಾ, ಕೇಕ್​ ತಿಂದಿದ್ಯಾರು? – CID ತನಿಖೆಗೆ ಆದೇಶಿಸಿದ ಹಿಮಾಚಲ ಸರ್ಕಾರ..!

ಸಿಎಂಗಾಗಿ ತಂದಿದ್ದ ಸಮೋಸಾ, ಕೇಕ್​ ತಿಂದಿದ್ಯಾರು? – CID ತನಿಖೆಗೆ ಆದೇಶಿಸಿದ ಹಿಮಾಚಲ ಸರ್ಕಾರ..!

ಶಿಮ್ಲಾ : ಕೋಟ್ಯಂತರ ರೂಪಾಯಿ ಹಗರಣ, ಭ್ರಷ್ಟಾಚಾರ ಸೇರಿದಂತೆ ಹಲವು ಗಂಭೀರ ಪ್ರಕರಣಗಳ ತನಿಖೆಯನ್ನು ತನಿಖಾ ಸಂಸ್ಥೆಗಳಿಗೆ ವಹಿಸುವುದು ಸಾಮಾನ್ಯ. ಆದರೆ, ನಾಪತ್ತೆಯಾದ ಸಮೋಸಾಗಾಗಿ ಸಿಐಡಿ ತನಿಖೆ ನಡೆದಿರುವ ಪ್ರಸಂಗ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಸದ್ಯ ಸಮೋಸಾ ಕುರಿತ ತನಿಖೆ ದೇಶಾದ್ಯಂತ ಭಾರೀ ಸುದ್ದಿಯಾಗುತ್ತಿದೆ.

ಅ.21ರಂದು ಹಿಮಾಚಲ ಸಿಎಂ ಸುಖ್ವಿಂದರ್ ಸಿಂಗ್​ ಆಗಮನದ ಕಾರಣ ಚಹಾ ಕೂಟಕ್ಕೆ ಶಿಮ್ಲಾದ ಪ್ರಸಿದ್ಧ ಹೋಟೆಲ್​ನಿಂದ ಸಮೋಸಾ ಆರ್ಡರ್ ಮಾಡಲಾಗಿತ್ತು. ಅದರಂತೆ ಮೂರು ಬಾಕ್ಸ್​ಗಳಲ್ಲಿ ಸಮೋಸಾ ಮತ್ತು ಕೇಕ್​ ತರಿಸಲಾಗಿತ್ತು. ಅದನ್ನು ಸಿಐಡಿ ಕಚೇರಿಯಲ್ಲಿ ಇಡುವಂತೆ ಸೂಚಿಸಲಾಗಿತ್ತು. ಆದರೆ ಆ ಬಳಿಕ ಸಮೋಸಾಗಳು ಸಿಎಂ ಚಹಾ ಕೂಟಕ್ಕೆ ತಲುಪಿಲ್ಲ. ಈ ಸಂಬಂಧ ಸಿಐಡಿ ಪೊಲೀಸರು ಅ.21ರಂದು ತನಿಖೆಗೆ ಆದೇಶಿಸಿದ್ದರು.

ಡಿಎಸ್​ಪಿ ಶ್ರೇಣಿಯ ಅಧಿಕಾರಿ ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ಐಜಿಗೆ ಸಲ್ಲಿಸಿದ್ದರು. ವರದಿಯಲ್ಲಿ ಎಸ್‌ಐ ಮತ್ತು ಹೆಡ್​ಕಾನ್‌ಸ್ಟೆಬಲ್ ಎಡವಟ್ಟು ಮಾಡಿಕೊಂಡು ಐಜಿ, ಸಿಐಡಿ ಕಚೇರಿಯಲ್ಲಿದ್ದ ಭದ್ರತಾ ಸಿಬ್ಬಂದಿಗೆ ಸಮೋಸಾ ಹಂಚಿರುವ ಅಂಶ ಗೊತ್ತಾಗಿದೆ. ಜೊತೆಗೆ ಸಿಐಡಿ ಈ ಘಟನೆಯನ್ನ ಸರ್ಕಾರಿ ವಿರೋಧಿ ಕೃತ್ಯ ಎಂದು ಹೇಳಿ ಮತ್ತಷ್ಟು ಅಚ್ಚರಿ ಮೂಡಿಸಿದೆ. ಇದೀಗ  ಬಿಜೆಪಿ ನಾಯಕರು “ಸುಖು ಸರ್ಕಾರಕ್ಕೆ ಜನರು ಮತ್ತು ರಾಜ್ಯದ ಅಭಿವೃದ್ಧಿಗಿಂತ ಸಮೋಸಾಗಳ ಬಗ್ಗೆ ಹೆಚ್ಚು ಕಾಳಜಿ ಇದೆ” ಎಂದು ಲೇವಡಿ ಮಾಡುತ್ತಿದ್ದಾರೆ.

ಈ ಸಂಬಂಧ ಹಿಮಾಚಲದ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಪ್ರತಿಕ್ರಿಯಿಸಿ , “ಸಮೊಸಾಗಳು ತಲುಪಬೇಕಾದ ಸ್ಥಳಕ್ಕೆ ತಲುಪಲಿಲ್ಲ, ಇದು ಬಹುಶಃ ಸರ್ಕಾರಕ್ಕೆ ಗಂಭೀರ ವಿಷಯವಾಗಿದೆ, ಆದ್ದರಿಂದ ತನಿಖೆ ನಡೆಸಲಾಗಿದೆ. ಹಿಮಾಚಲದಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಆದರೆ ಆ ಬಗ್ಗೆ ತನಿಖೆ ನಡೆಯುತ್ತಿಲ್ಲ, ಸಮೋಸಾಗಳ ಬಗ್ಗೆ ಮಾತ್ರ ತನಿಖೆ ನಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಇದನ್ನೂ ಓದಿ : ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಡೆಡ್ಲಿ ಆ್ಯಕ್ಸಿಡೆಂಟ್..​​ ನಾಲ್ವರು ಸ್ಥಳದಲ್ಲೇ ದುರ್ಮರಣ..!

Leave a Comment

DG Ad

RELATED LATEST NEWS

Top Headlines

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಇನ್ಸ್​ಪೆಕ್ಟರ್​ ಅಯ್ಯಣ್ಣ ರೆಡ್ಡಿ ಅರೆಸ್ಟ್..!

ಬೆಂಗಳೂರು : ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಅಯ್ಯಣ್ಣ ರೆಡ್ಡಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಶಾಸಕ ಮುನಿರತ್ನ ಮಾಡಿರೋ ಹನಿಟ್ರ್ಯಾಪ್​​ಗೆ ಇನ್ಸ್ಪೆಕ್ಟರ್

Live Cricket

Add Your Heading Text Here