ಟಾಲಿವುಡ್ ನಟ ನಾಗ ಚೈತನ್ಯ ಮತ್ತು ಸಮಂತಾ ಡಿವೋರ್ಸ್ಗೆ ಮಾಜಿ ಸಚಿವ ಕೆಟಿಆರ್ ಕಾರಣ ಎಂದು ತೆಲಂಗಾಣ ಸಚಿವೆ ಕೊಂಡ ಸುರೇಖಾ ಹೇಳಿದ್ದಾರೆ. ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಅಷ್ಟೇ ಅಲ್ಲ ಸಮಂತಾ ಮಾತ್ರವಲ್ಲ ಹಲವು ನಟಿಯರು ಬೇಗ ಮದುವೆಯಾಗಲು ಹಾಗೂ ಅನೇಕ ನಟಿಯರು ಸಿನಿಮಾ ರಂಗ ಬಿಡಲು ಕೆಟಿಆರ್ ಕಾರಣ ಎಂದಿದ್ದಾರೆ.
ರಾಜಕೀಯ ವಲಯದಲ್ಲಿ ಕೊಂಡಾ ಸುರೇಖಾ ಅವರ ಹೇಳಿಕೆ ಈಗ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ನಿನ್ನೆಯವರೆಗೂ ಇವರಿಬ್ಬರ ವಿಚ್ಛೇದನ ಚಿತ್ರರಂಗದಲ್ಲಿ ಮಾತ್ರ ಚರ್ಚೆಯ ವಿಷಯವಾಗಿತ್ತು. ಮೂರು ವರ್ಷಗಳಿಂದ ನಡೆಯುತ್ತಿರುವ ಸ್ಯಾಮ್ ಚೈತು ವಿಚ್ಛೇದನದ ಸುದ್ದಿ ಇದೀಗ ರಾಜಕೀಯ ತಿರುವು ಪಡೆದುಕೊಂಡಿದೆ.
ನಾಗ ಚೈತನ್ಯ ಟಾಲಿವುಡ್ ಸ್ಟಾರ್ ಹೀರೋಯಿನ್ ಶೋಭಿತಾ ಧೂಳಿಪಾಲ ಜೊತೆ ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ. ಇದೀಗ ಇದರ ನಡುವೆ ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿಆರ್ ಹೆಸರು ಕೇಳಿ ಬಂದಿದ್ದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಪ್ರವಾಹ ಪೀಡಿತ ರಾಜ್ಯಗಳಿಗೆ ಗೃಹ ಇಲಾಖೆಯಿಂದ 5858.60 ಕೋಟಿ ರೂ. ಪರಿಹಾರ ಬಿಡುಗಡೆ..!