ಕಳೆದ ಕೆಲವು ತಿಂಗಳಿಂದ ಬಾಲಿವುಡ್ ಸೂಪರ್ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಡಿವೋರ್ಸ್ ರೂಮರ್ಸ್ ಹರಿದಾಡ್ತಾಲೇ ಇದೆ. ಇದರ ನಡುವೆ ಇದೀಗ ನಟ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಮಾಜಿ ಪ್ರಿಯತಮೆ ಬಗ್ಗೆ ಮಾತಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಂದರ್ಶನವೊಂದರಲ್ಲಿ ಮಾಜಿ ಪ್ರಿಯತಮೆ ಬಗ್ಗೆ ಮಾತನಾಡಿದ ನಟ ಸಲ್ಮಾನ್ ಖಾನ್, ಕೆಲ ವಿಚಾರ ನಡೆದು ಎಷ್ಟೋ ವರ್ಷಗಳು ಕಳೆದಿದೆ. ಆಕೆ ಈಗ ಬೇರೊಬ್ಬರ ಹೆಂಡತಿ ಎಂದು ಎಲ್ಲರಿಗೂ ತಿಳಿದಿದೆ. ಆಕೆ ದೊಡ್ಡ ಕುಟುಂಬಕ್ಕೆ ಸೇರಿದ್ದಾರೆ. ಐಶ್ವರ್ಯಾ, ಅಭಿಷೇಕ್ ಅವರನ್ನು ಮದುವೆಯಾಗಿದ್ದು ನನಗೆ ತುಂಬಾ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಅಭಿಷೇಕ್ ಬಚ್ಚನ್ರನ್ನು ಕೊಂಡಾಡಿದ ಸಲ್ಲು, ಅಭಿಷೇಕ್ ಒಬ್ಬ ಶ್ರೇಷ್ಠ ವ್ಯಕ್ತಿ ಎಂದು ನಾನು ಅಂದುಕೊಂಡಿದ್ದೇನೆ. ಯಾವುದೇ ಮಾಜಿ ಪ್ರೇಮಿ ಬಯಸುವುದು ತಾನು ಪ್ರೀತಿಸಿದ ವ್ಯಕ್ತಿ ಸಂತೋಷವಾಗಿರಬೇಕು ಅಂತ ಅಷ್ಟೇ. ನಮ್ಮ ಸ್ನೇಹವು ಕೊನೆಗೊಂಡ ನಂತರ ನಾವು ಇಲ್ಲದೆ ಆ ವ್ಯಕ್ತಿಯು ದುಃಖಿತನಾಗಿರಲು ನಾನು ಬಯಸುವುದಿಲ್ಲ. ನಾನು ಇಲ್ಲದೆಯೂ ಆ ವ್ಯಕ್ತಿ ನಿಜವಾಗಿಯೂ ಸಂತೋಷವಾಗಿದ್ರೆ ಅದೇ ಖುಷಿ ಎಂದಿದ್ದಾರೆ.
ಅಭಿಷೇಕ್ ಒಳ್ಳೆಯ ಕುಟುಂಬದಲ್ಲಿ ಬೆಳೆದ ಹುಡುಗ. ಐಶ್ವರ್ಯಾ ಅಭಿಷೇಕ್ ಅವರನ್ನು ಮದುವೆಯಾದದ್ದು ನನಗೆ ಖುಷಿ ತಂದಿದೆ ಎಂದಿದ್ದಾರೆ. ಇದೀಗ ಸಲ್ಲು ಮಾತು ಕೇಳಿದ ಭಗ್ನ ಪ್ರೇಮಿಗಳೆಲ್ಲಾ ಇದಪ್ಪಾ ಪ್ರೀತಿ ಅಂದ್ರೆ ಅಂತಿದ್ದಾರೆ.
ಇದನ್ನೂ ಓದಿ : ಸೂಪರ್ ಹೀರೋ ಆಗಿ ಬರಲಿದ್ದಾರೆ ಕಿರಣ್ ರಾಜ್.. ಮತ್ತೊಮ್ಮೆ ತೆರೆಮೇಲೆ ‘ರಾನಿ’ ಚಿತ್ರದ ನಾಯಕ-ನಿರ್ದೇಶಕರ ಜುಗಲ್ ಬಂದಿ..!
Post Views: 181