Download Our App

Follow us

Home » ರಾಷ್ಟ್ರೀಯ » ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾದ ಸದ್ಗುರು ಜಗ್ಗಿ ವಾಸುದೇವ್ – ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾದ ಸದ್ಗುರು ಜಗ್ಗಿ ವಾಸುದೇವ್ – ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

ಆಧ್ಯಾತ್ಮಿಕ ಗುರು ಇಶಾ ಫೌಂಡೇಶನ್‌ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಮೆದುಳಿನಲ್ಲಿ ‌ರಕ್ತಸ್ರಾವ ಉಂಟಾಗಿದ್ದು, ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಸದ್ಯ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕಳೆದ ಕೆಲ ದಿನಗಳಿಂದ ತಲೆನೋವಿನಿಂದ ಬಳಲುತ್ತಿದ್ದ ಸದ್ಗುರು ಮೆದಳಿನಲ್ಲಿ ರಕ್ತ ಸ್ರಾವವಾಗಿದೆ. ಜೊತೆಗೆ ಮೆದುಳಿನಲ್ಲಿ ಊತವಾಗಿದೆ. ತೀವ್ರ ನೋವಿನಿಂದ ಆಸ್ಪತ್ರೆ ದಾಖಲಾದ ಸದ್ಗುರುವಿನ ತಪಾಸಣೆ ನಡೆಸಿದ ವೈದ್ಯರು ತುರ್ತು ಮೆದುಳು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಮಾಹಿತಿ ಹೊರಬೀಳುತ್ತಿದ್ದಂತೆ ದೇಶ ವಿದೇಶದಲ್ಲಿರುವ ಸದ್ಗುರು ಅನುಯಾಯಿಗಳು, ಶಿಷ್ಯರು, ಬೆಂಬಲಿಗರು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ.

 

ಕಳೆದ ಎರಡು ವಾರದಿಂದ ಸದ್ಗುರು ತೀವ್ರ ತಲೆನೋವಿನಿಂದ ಬಳಲಿದ್ದರು. ಮಾರ್ಚ್ 14 ರಂದು ವೈದ್ಯ ವಿನಿತ್ ಸುರಿ ಸೂಚನೆ ಪ್ರಕಾರ ಎಂಆರ್‌ಐ ಸ್ಕ್ರಾನ್‌ಗೆ ಒಳಗಾಗಿದ್ದಾರೆ. ಈ ವೇಳೆ ಮತ್ತಷ್ಟು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸದ್ಗುರು ಮೆದಳಿನಲ್ಲಿ ರಕ್ತಸ್ರಾವವಾಗಿ ಊದಿಕೊಂಡಿರುವುದು ಪತ್ತೆಯಾಗಿದೆ. ಮಾರ್ಚ್ 17ರಂದು ಸದ್ಗುರು ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಇತ್ತ ಪ್ರಜ್ಞಾಹೀನರಾಗುತ್ತಾ ಬಂದ ಸದ್ಗುರು ತೀವ್ರ ತಲೆನೋವು ಹಾಗೂ ವಾಂತಿಯಿಂದ ಮತ್ತಷ್ಟು ಬಳಲಿದ್ದಾರೆ.

ಸದ್ಗುರು ಆರೋಗ್ಯ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮದೆಳಿನ ರಕ್ತಸ್ರಾವ ಹಾಗೂ ಊತ ಜೀವಕ್ಕೆ ಅಪಾಯ ತಬರಲ್ಲ ಸಾಧ್ಯತೆಗಳನ್ನು ಹೆಚ್ಚಿಸಿತ್ತು. ಹೀಗಾಗಿ ಅಪೋಲೋ ವೈದ್ಯರ ತಂಡ ತುರ್ತು ಕಾರ್ಯಪ್ರವೃತ್ತಗೊಂಡಿತ್ತು. ಈ ಮೂಲಕ ಎಮರ್ಜೆನ್ಸಿ ಮೆದಳು ಸರ್ಜರಿ ಮಾಡಲಾಗಿದೆ.

ಅಪೋಲೋ ವೈದ್ಯರಾದ ಡಾ ವಿನಿತ್ ಸುರಿ, ಡಾ. ಪ್ರಣವ್ ಕುಮಾರ್, ಡಾ. ಸುಧೀರ್ ತ್ಯಾಗಿ ಹಾಗೂ ಡಾ. ಎಸ್ ಚಟರ್ಜಿ ನೇತೃತ್ವದ ತಂಡ ಸದ್ಗುರುವಿಗೆ ಮೆದಳು ಸರ್ಜರಿ ಮಾಡಲಾಗಿದೆ. ಶಸ್ತ್ರಚಿಕಿತ್ಸೆ ಬಳಿಕ ಸದ್ಗುರುವಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ಮುಂದುವರಿದಿದೆ.

ಸದ್ಯ ವೈದ್ಯರ ಪ್ರಕಾರ ಸದ್ಗುರುಗಳ ಚೇತರಿಕೆ ನಿರೀಕ್ಷೆಗಿಂತ ಉತ್ತಮವಾಗಿದೆ. “ನಾವು ಸ್ಥಾಪಿಸಿದ ವೈದ್ಯಕೀಯ ಕ್ರಮಗಳ ಹೊರತಾಗಿ ಸದ್ಗುರುಗಳು ತಮ್ಮನ್ನು ತಾವು ಗುಣಪಡಿಸಿಕೊಳ್ಳುತ್ತಿದ್ದಾರೆ” ಎಂದು ವೈದ್ಯರು ಹೇಳಿದ್ದಾರೆ.

ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಸದ್ಗುರು ಮೊದಲ ಬಾರಿಗೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಆಸ್ಪತ್ರೆಯ ಬೆಡ್​ ಮೇಲೆ ಮಲಗಿಕೊಂಡು ಸ್ವತಹ ತಾವೇ ಮಾತನಾಡಿದ್ದಾರೆ. ಅಫೋಲೋ ಆಸ್ಪತ್ರೆಯ ವೈದ್ಯರು ನನ್ನ ಬ್ರೇನ್​ ಅನ್ನು ಸರ್ಜರಿ ಮಾಡಿದ್ದಾರೆ. ತಲೆ ಬುರುಡೆಯಲ್ಲಿ ಆಗಿದ್ದ ಸಮಸ್ಯೆಯನ್ನು ಡಾಕ್ಟರ್ಸ್ ಸರಿ ಮಾಡಿ ತಲೆ ಮೇಲೆ ಪ್ಯಾಚ್ ಮಾಡಿದ್ದಾರೆ. ಸದ್ಯ ನಾನು ಈಗ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿದ್ದೇನೆ. ಯಾವುದೇ ಸಮಸ್ಯೆ ಇಲ್ಲ, ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ನಾಯಿ ಬೊಗಳಿದ್ದಕ್ಕೆ ನಟಿ ಅನಿತಾ ಭಟ್ ಜೊತೆ ಕಿರಿಕ್ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ..!

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here