ಬೆಂಗಳೂರು : PSI ಪುಟ್ಟಸ್ವಾಮಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ತನಿಖೆಯಲ್ಲಿ ಸ್ಟೋಟಕ ಮಾಹಿತಿಯೊಂದು ಬಯಲಾಗಿದೆ. PSI ಮನೆಯ ದರೋಡೆ ಬೋಗಸ್ ಕೇಸ್ ಎಂದು ಪೊಲೀಸ್ ಕಮಿಷನರ್ಗೆ DCP ವರದಿ ನೀಡಿದ್ದು, ಈ ಮೂಲಕ ದರೋಡೆ ದೂರು ನೀಡಿ PSI ಪುಟ್ಟಸ್ವಾಮಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕೋರಮಂಗಲ ಠಾಣಾ ವ್ಯಾಪ್ತಿಯ ಮನೆಯಲ್ಲಿ ಲಕ್ಷ-ಲಕ್ಷ ಕಳುವಾಯ್ತು ಎಂದು PSI ಪತ್ನಿ ಬೋಗಸ್ ಕೇಸ್ ನೀಡಿದ್ದರು. ಅಪರಿಚಿತ ವ್ಯಕ್ತಿಗಳು ಬಂದು ಕೈಕಾಲು ಕಟ್ಟಿ ದರೋಡೆ ಮಾಡಿದ್ದರೆಂದು PSI ಪುಟ್ಟಸ್ವಾಮಿ ಪತ್ನಿ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣದ ತನಿಖೆ ನಡೆಸಿದ್ದ ಆಗ್ನೇಯ ವಿಭಾಗ ಪೊಲೀಸರು ದರೋಡೆ ಆಯ್ತೆಂದು ಸುಳ್ಳು ದೂರು ನೀಡಲಾಗಿದೆ ಎಂದು ವರದಿ ನೀಡಿದ್ದಾರೆ. ತನಿಖೆ ವೇಳೆ ಪೊಲೀಸರು PSI ಪುಟ್ಟಸ್ವಾಮಿ ಮನೆ ಬಳಿಯ ಎಲ್ಲಾ CCTV ಕ್ಯಾಮೆರಾ ದೃಶ್ಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಗಳು ಬಂದು ದರೋಡೆ ಮಾಡಿರುವ ಯಾವುದೇ ದೃಶ್ಯಗಳು ಕಂಡು ಬಂದಿಲ್ಲ. ಇದರ ಜೊತೆಗೆ ಮನೆಯಲ್ಲಿದ್ದ ಹಣವನ್ನು PSI ಪುಟ್ಟಸ್ವಾಮಿ ಪತ್ನಿ ತವರು ಮನೆಗೆ ನೀಡಿದ್ದರು ಎಂದು ತಿಳಿದು ಬಂದಿದೆ.
ಹೀಗಾಗಿ PSI ಮನೆಯ ದರೋಡೆ ಬೋಗಸ್ ಕೇಸ್ ಎಂದು ಪೊಲೀಸ್ ಕಮಿಷನರ್ಗೆ DCP ವರದಿ ನೀಡಿದ್ದಾರೆ. ಇನ್ನು ಬೋಗಸ್ ದೂರು ರಿಪೋರ್ಟ್ ಬೆನ್ನಲ್ಲೇ ಬೆಂಗಳೂರಿನ ಅಶೋಕ್ನಗರ ಠಾಣೆಯಲ್ಲಿ PSI ಆಗಿರುವ ಪುಟ್ಟಸ್ವಾಮಿ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಇದನ್ನೂ ಓದಿ : ಜಮ್ಮುಕಾಶ್ಮೀರ, ಮಹಾರಾಷ್ಟ್ರ, ಹರಿಯಾಣ ವಿಧಾನಸಭೆ ಚುನಾವಣೆ ಇಂದು ಪ್ರಕಟ ಸಾಧ್ಯತೆ..!