Download Our App

Follow us

Home » ಅಪರಾಧ » ಪತ್ನಿಯನ್ನು ಕಟ್ಟಿ ಹಾಕಿ, ಪತಿಗೆ ಚೂರಿ ಇರಿದು ಮನೆ ದರೋಡೆ – ನಗದು, ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಎಸ್ಕೇಪ್..!

ಪತ್ನಿಯನ್ನು ಕಟ್ಟಿ ಹಾಕಿ, ಪತಿಗೆ ಚೂರಿ ಇರಿದು ಮನೆ ದರೋಡೆ – ನಗದು, ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಎಸ್ಕೇಪ್..!

ಮಂಗಳೂರು : ದುಷ್ಕರ್ಮಿಗಳು ಉದ್ಯಮಿಗೆ ಚೂರಿಯಿಂದ ಇರಿದು ಮನೆ ದರೋಡೆ ಮಾಡಿದ ಘಟನೆ ಮಂಗಳೂರು ಹೊರವಲಯದ ಪೆರ್ಮಂಕಿ ಎಂಬಲ್ಲಿ ನಡೆದ ನಡೆದಿದೆ. ಉದ್ಯಮಿ ಪದ್ಮನಾಭ ಕೊಟ್ಯಾನ್ ಮನೆಯಲ್ಲಿ ದರೋಡೆ ನಡೆದಿದೆ.

ಪದ್ಮನಾಭ ಕೊಟ್ಯಾನ್ ಸಿವಿಲ್ ಕಾಂಟ್ರಾಕ್ಟ್ ಆಗಿದ್ದಾರೆ. 8 ದುಷ್ಕರ್ಮಿಗಳ ತಂಡ ಮಾಸ್ಕ್‌ ಇನ್ನೊವಾ ಕಾರಿನಲ್ಲಿ ಬಂದಿದ್ದರು. ಪದ್ಮನಾಭ ಅವರ ಉಳಾಯಿಬೆಟ್ಟಿನ ಮನೆಗೆ‌ ನುಗ್ಗಿ ಮನೆ ಮಂದಿಗೆ ಚೂರಿ ತೋರಿಸಿ ಬೆದರಿಸಿ ಮನೆಯಲ್ಲಿದ್ದ ಉದ್ಯಮಿ ಪದ್ಮನಾಭ ಅವರ ಭುಜಕ್ಕೆ ಚೂರಿಯಿಂದ ಇರಿದಿದ್ದಾರೆ. ಪದ್ಮನಾಭ ಅವರ ಪತ್ನಿಯನ್ನು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. ನಗದು ಸೇರಿದಂತೆ ಚಿನ್ನಾಭರಣ, ದೋಚಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳೂ ಕೂಡ ತೆರಳಿದ್ದಾರೆ. FSL ತಂಡದಿಂದಲೂ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಪದ್ಮನಾಭ ಕೊಟ್ಯಾನ್ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆಕೋರರು ಹಿಂದಿ ಭಾಷೆ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ. ದರೋಡೆಕೋರರ ಚಹರೆ ಎಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

ಇದನ್ನೂ ಓದಿ : ದರ್ಶನ್ ಗ್ಯಾಂಗ್​ನ ಹೆಡೆಮುರಿಕಟ್ಟಿದ್ದೇ ಕಮಿಷನರ್​​ ಬಿ.ದಯಾನಂದ್​​..!

 

 

 

 

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here