ಬೆಂಗಳೂರು : ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯ ಕಸವನಹಳ್ಳಿ ಬಳಿ ನಡೆದಿದ್ದ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಸೌರವ್ ಪಾಂಡ(34) ಹಾಗೂ ಕೃಷ್ಣಮೂರ್ತಿ (24) ಬಂಧಿತ ಆರೋಪಿಗಳು.
ಪ್ರಕರಣದ ಹಿನ್ನೆಲೆ : ಅಕ್ಟೋಬರ್ 30ರಂದು ಕಸವನಹಳ್ಳಿ ಅಮೃತ ಕಾಲೇಜು ಬಳಿ ರಾತ್ರಿ 9.30 ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದ ಕುಟುಂಬದ ಮೇಲೆ ಇಬ್ಬರು ಪುಂಡರು ಗೂಂಡಾ ವರ್ತನೆ ತೋರಿದ್ದರು. ಕಾರನ್ನು ಫಾಲೋ ಮಾಡಿಕೊಂಡು ಬಂದು ಕಿರಿಕ್ ಮಾಡಿದ್ದರು. ಅಷ್ಟೇ ಅಲ್ಲದೆ ಕಾರನ್ನ ಅಡ್ಡಗಟ್ಟಿ ಕಾರು ಗ್ಲಾಸ್ ಓಪನ್ ಮಾಡುವಂತೆ ಅವಾಜ್ ಹಾಕಿದ್ದರು. ಪುಂಡರ ರೋಡ್ ರೇಜ್ಗೆ ಕಾರಿನಲ್ಲಿದ್ದ ಐದು ವರ್ಷದ ಮಗುವಿನ ತಲೆಗೆ ಗಾಯವಾಗಿತ್ತು. ದಂಪತಿಗಳು ಬೆಚ್ಚಿಬಿದ್ದಿದ್ದರು. ಈ ರೋಡ್ ರೇಜ್ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಸದ್ಯ ಇಬ್ಬರನ್ನು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಹಾಸನಾಂಬೆ ದರ್ಶನಕ್ಕೆ ಇಂದು ಕೊನೆಯ ದಿನ.. ನಾಳೆ ದೇಗುಲದ ಬಾಗಿಲು ಕ್ಲೋಸ್..!