Download Our App

Follow us

Home » ಸಿನಿಮಾ » ಕನ್ನಡ ಸೆಲೆಬ್ರಿಟಿಗಳ “ಮಾರ್ಯಾದೆ ಪ್ರಶ್ನೆ”ಗೆ ಉತ್ತರ ಕೊಟ್ಟ ಆರ್.ಜೆ ಪ್ರದೀಪ್..!

ಕನ್ನಡ ಸೆಲೆಬ್ರಿಟಿಗಳ “ಮಾರ್ಯಾದೆ ಪ್ರಶ್ನೆ”ಗೆ ಉತ್ತರ ಕೊಟ್ಟ ಆರ್.ಜೆ ಪ್ರದೀಪ್..!

ಸ್ಯಾಂಡಲ್ ವುಡ್ ಅಂಗಳದಲ್ಲಿ ಕಳೆದ ಕೆಲ ದಿನಗಳಿಂದ ಸೆಲೆಬ್ರಿಟಿಗಳು ಹಾಕಿದ ಮಾರ್ಯಾದೆ ಪ್ರಶ್ನೆ ಪೋಸ್ಟ್ ಬಹಳ ಸದ್ದು ಮಾಡಿತ್ತು. ನಿರ್ದೇಶಕ ಸಿಂಪಲ್ ಸುನಿಯಿಂದ ಹಿಡಿದು ನಟಿ ನಿಶ್ವಿಕಾ ನಾಯ್ಡು, ಸಂಯುಕ್ತಾ ಹೊರನಾಡು, ಸೆಲೆಬ್ರಿಟಿ ಜಿಮ್ ಟ್ರೇನರ್ ಶ್ರಿನಿವಾಸ್ ಗೌಡ, ನಿರಂಜನ್ ದೇಶ್ಪಾಂಡೆ, ರುಕ್ಮಿಣಿ ವಸಂತ್, ನಾಗಭೂಷಣ, ಶೈನ್ ಶೆಟ್ಟಿ ಸೇರಿದಂತೆ ಬಹಳಷ್ಟು ತಾರೆಯರು ತಮ್ಮ ಪಾಲಿನ ಮರ್ಯಾದೆ ಪ್ರಶ್ನೆ ಏನು ಎಂಬುದನ್ನು ಪೋಸ್ಟ್ ಮಾಡಿದ್ದರು. ತಾರೆಯರೆಲ್ಲಾ ಹೀಗೆ ಮಾರ್ಯಾದೆ ಪ್ರಶ್ನೆ ಬಗ್ಗೆ ಧ್ವನಿ ಎತ್ತುತ್ತಿದ್ದಂತೆ ಎಲ್ಲರ ತಲೆಯಲ್ಲಿ ಏನಿದು ಎಂಬ ಕುತೂಹಲದ ಪ್ರಶ್ನೆ ಹುಟ್ಟಿಕೊಂಡಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ. ಮಾರ್ಯದೆ ಪ್ರಶ್ನೆ ಎಂಬ ಟೈಟಲ್ ನಡಿ ಸಿನಿಮಾ ಬರ್ತಿದೆ.

ಅಂದಹಾಗೇ ಮಾರ್ಯಾದೆ ಪ್ರಶ್ನೆ ಎಂಬ ಸಿನಿಮಾದ ಶಕ್ತಿ ಆರ್.ಜೆ.ಪ್ರದೀಪ್. ಸ್ಟಾರ್ ದಂಪತಿಗಳಾದ ಆರ್. ಜೆ. ಪ್ರದೀಪ್ ಮತ್ತು ಶ್ವೇತಾ ಆರ್ ಪ್ರಸಾದ್ ಅವರ ಸಾರಥ್ಯದ ಸಕ್ಕತ್ ಸ್ಟುಡಿಯೋ ಚೊಚ್ಚಲ ಸಿನಿಮಾವೇ ಮಾರ್ಯಾದೆ ಪ್ರಶ್ನೆ. ಕನ್ನಡ ಸೆಲೆಬ್ರಿಟಿಗಳಿಂದ ಮಾರ್ಯಾದೆ ಪ್ರಶ್ನೆ ಬಗ್ಗೆ ಧ್ವನಿ ಎತ್ತಿಸಿ ಚಿತ್ರತಂಡ ವಿಭಿನ್ನವಾಗಿ ತಮ್ಮ ಟೈಟಲ್ ಲಾಂಚ್ ಮಾಡಿದೆ.

ಸಕ್ಕತ್ ಸ್ಟುಡಿಯೋದ ಸಕ್ಕತ್ ಸಿನಿಮಾವಾಗಿರುವ ಈ ಚಿತ್ರಕ್ಕೆ ಪ್ರದೀಪ್ ಕಥೆ ಬರೆದು ಕ್ರಿಯೇಟಿವ್ ಹೆಡ್ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ದಕ್ಷಿಣ ಭಾರತದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸೇರಿದಂತೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ‘ದಿ ಬೆಸ್ಟ್ ಆಕ್ಟರ್’ ಮೈಕ್ರೊ ಮೂವಿ ನಿರ್ದೇಶನ ಸೇರಿದಂತೆ, ದಿವಂಗತ ಸಂಚಾರಿ ವಿಜಯ್ ನಟಿಸಿರುವ ‘ಪುಕ್ಸಟ್ಟೆ ಲೈಫ್ “ಚಿತ್ರವನ್ನು ನಿರ್ಮಿಸಿದ್ದ ನಾಗರಾಜ್ ಸೋಮಯಾಜಿ ಚಿತ್ರಕಥೆ ಸಂಭಾಷಣೆ ಬರೆದು ಮಾರ್ಯಾದೆ ಪ್ರಶ್ನೆ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮಾರ್ಯಾದೆ ಪ್ರಶ್ನೆ ಸಿನಿಮಾಗೆ ಸಂದೀಪ್ ವೆಲ್ಲುರಿ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ, ಗೌಡ ಅರ್ಜುನ್ ಸಂಕಲನ ಚಿತ್ರಕ್ಕಿದೆ. ಶೀರ್ಷಿಕೆಯನ್ನು ಮಾತ್ರ ಬಹಿರಂಗ ಪಡಿಸಿರುವ ಚಿತ್ರತಂಡ, ಮುಂದಿನ ದಿನಗಳಲ್ಲಿ ತಾರಾಗಣ ಹಾಗೂ ಮತ್ತಿತರ ವಿಷಯಗಳನ್ನು ಹಂಚಿಕೊಳ್ಳಲಿದೆ.

ಇದನ್ನೂ ಓದಿ : ಲೋಕಸಭೆ ಚುನಾವಣೆಗೆ ಡೇಟ್ ಫಿಕ್ಸ್ – ಏಪ್ರಿಲ್ 19 ರಿಂದ 7 ಹಂತಗಳಲ್ಲಿ ಎಲೆಕ್ಷನ್, ಜೂ. 4ಕ್ಕೆ ಫಲಿತಾಂಶ..!

Leave a Comment

DG Ad

RELATED LATEST NEWS

Top Headlines

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಮರು ಆಯ್ಕೆ..!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಸಿ.ಎಸ್.ಷಡಕ್ಷರಿ ಅವರು ಮರು ಆಯ್ಕೆಯಾಗಿದ್ದಾರೆ. 2024-29ನೇ ಅವಧಿಯ ಅಧ್ಯಕ್ಷ ಹಾಗೂ ರಾಜ್ಯ ಖಜಾಂಚಿ ಸ್ಥಾನಕ್ಕೆ ಇಂದು ಕಬ್ಬನ್‌ ಪಾರ್ಕ್‌ನ

Live Cricket

Add Your Heading Text Here