Download Our App

Follow us

Home » ಸಿನಿಮಾ » ಕಲ್ಕಿ ಚಿತ್ರತಂಡಕ್ಕೆ ಡಿವೈನ್ ಸ್ಟಾರ್ ಸಾಥ್​ – ಭೈರವನ ಆಪ್ತ ‘ಬುಜ್ಜಿ’ಯಲ್ಲಿ ರಿಷಬ್ ಶೆಟ್ಟಿ ಸವಾರಿ..!

ಕಲ್ಕಿ ಚಿತ್ರತಂಡಕ್ಕೆ ಡಿವೈನ್ ಸ್ಟಾರ್ ಸಾಥ್​ – ಭೈರವನ ಆಪ್ತ ‘ಬುಜ್ಜಿ’ಯಲ್ಲಿ ರಿಷಬ್ ಶೆಟ್ಟಿ ಸವಾರಿ..!

ಕಲ್ಕಿ 2898 AD ಸಿನಿಮಾ ಬಹುನಿರೀಕ್ಷೆ ಹುಟ್ಟುಹಾಕಿರುವ ಸಿನಿಮಾ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ, ಮೇಕಿಂಗ್‌ನಿಂದಲೇ ಹೈಪ್‌ ಕ್ರಿಯೇಟ್‌ ಮಾಡಿದೆ. ಇದೀಗ ಇದೇ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಸಾಥ್‌ ನೀಡಿದ್ದಾರೆ. ಅಂದರೆ, ಕಲ್ಕಿ ಸಿನಿಮಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದ ಬುಜ್ಜಿ ವಾಹನವನ್ನು ರೈಡ್‌ ಮಾಡಿದ್ದಾರೆ. ಅದೂ ಕುಂದಾಪುರದಲ್ಲಿ ಎಂಬುದು ವಿಶೇಷ.

ಭೈರವನ ಆಪ್ತ ಬುಜ್ಜಿ ವಾಹನವನ್ನು ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಓಡಿಸಿದ್ದಾರೆ. ಇದನ್ನು ತಯಾರಿಸಿದ ಮಹೀಂದ್ರಾ ಕಂಪನಿಯ ಆನಂದ್‌ ಮಹೀಂದ್ರ ಸಹ ಇತ್ತೀಚೆಗಷ್ಟೇ ಈ ವಾಹನ ಏರಿದ್ದರು. ಇದೀಗ ಇದೇ ವಾಹನ ಕುಂದಾಪುರಕ್ಕೆ ಬಂದಿದೆ. ರಿಷಬ್ ಸ್ಟೈಲಿಶ್‌ ಲುಕ್‌ನಲ್ಲಿ ಬುಜ್ಜಿಯನ್ನು ರೈಡ್‌ ಮಾಡಿದ್ದಾರೆ. ಈ ರೈಡ್‌ನ ಕಿರು ವಿಡಿಯೋವನ್ನು ವೈಜಯಂತಿ ಮೂವೀಸ್‌ ತನ್ನ ಅಧಿಕೃತ ಟ್ವಿಟರ್‌ ಪುಟದಲ್ಲಿ ಶೇರ್‌ ಮಾಡಿದ್ದು, ಕಲ್ಕಿ X ಕಾಂತಾರ ಎಂಬ ಕ್ಯಾಪ್ಷನ್‌ ನೀಡಿದೆ.

ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್‌ ಸಾಕಷ್ಟು ಸದ್ದು ಮಾಡುತ್ತಿದೆ. ವಿಭಿನ್ನ ಬಗೆಯ ಪ್ರಪಂಚವನ್ನೇ ತೋರಿಸಿದ್ದಾರೆ ನಿರ್ದೇಶಕರು. ಕಾಶಿಯನ್ನು ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ಅದರ ಉಳಿವಿಗಾಗಿ ನಡೆಯುವ ಹೋರಾಟವಿದು. ದೃಶ್ಯವೈಭವವೇ ಇಡೀ ಟ್ರೇಲರ್‌ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್.‌ ಅತ್ಯುತ್ತಮ ಹಿನ್ನೆಲೆ ಸ್ಕೋರ್, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ, ಈ ಸಿನಿಮಾ ಮೂಡಿಬಂದಿದೆ.

‘ಕಲ್ಕಿ 2898 AD’ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಈ ಬಹುಭಾಷಾ, ಪುರಾಣ- ಪ್ರೇರಿತ ವೈಜ್ಞಾನಿಕ ಕಥೆಯುಳ್ಳ ಸಿನಿಮಾ, ಜೂನ್ 27ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ‌ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್​​ನ ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಫ್ಟ್..!

 

 

 

 

 

Leave a Comment

DG Ad

RELATED LATEST NEWS

Top Headlines

‘ರಿದಂ’ ಕಿಂಗ್ ಬಾಲಸುಬ್ರಹ್ಮಣ್ಯಂ ವಿಧಿವಶ – ಸಂಗೀತ ಕ್ಷೇತ್ರದ ದಿಗ್ಗಜನಿಗೆ ಕೆ.ಎಫ್.ಎಂ.ಎ ವತಿಯಿಂದ ತೀವ್ರ ಸಂತಾಪ!

ಬೆಂಗಳೂರು : ಜನಪ್ರಿಯ ಮೃದಂಗ ವಾದಕ ‘ಬಾಲಿ’ ಎಂದೇ ಪ್ರಸಿದ್ದರಾಗಿದ್ದ ರಿದಂ ಕಿಂಗ್ ಎಸ್​.ಬಾಲಸುಬ್ರಹ್ಮಣ್ಯಂ ಅವರು ಇಂದು  ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಬಾಲಸುಬ್ರಹ್ಮಣ್ಯಂ ಅವರಿಗೆ 80 ವರ್ಷ ವಯಸ್ಸಾಗಿತ್ತು. ಬಾಲಿ

Live Cricket

Add Your Heading Text Here