ಬಾಲಿವುಡ್ ಬಿಗ್ ಬಿ ಕುಟುಂಬದಲ್ಲಿ ಬಿರುಕು ಮೂಡಿದೆ ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಅಲ್ಲದೆ, ಇದರ ನಡುವೆ ನಟ ಅಭಿಷೇಕ್ ಜೊತೆಗಿನ ಐಶ್ವರ್ಯ ಡಿವೋರ್ಸ್ ಸುದ್ದಿ ಕೂಡ ಹರಿದಾಡುತ್ತಿದೆ. ಇದೇ ವೇಳೆ, ಅತ್ತೆ-ಸೊಸೆ ಜಗಳ ಬಹಿರಂಗವಾಗಿದೆ. ಈ ಸುದ್ದಿಗೆ ಪುಷ್ಟಿಕೊಡುವ ಮತ್ತೊಂದು ವಿಚಾರ ಇದೀಗ ಬೆಳಕಿಗೆ ಬಂದಿದೆ.
ಹೌದು, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ʼಪ್ರತೀಕ್ಷಾʼ ಮನೆಯನ್ನು ತಮ್ಮ ಮಗಳು ಶ್ವೇತಾಗೆ ಉಡುಗೊರೆಯಾಗಿ ನೀಡಿದ್ದಾರೆ. ಇದರ ನಂತರ ಬಚ್ಚನ್ ಕುಟುಂಬದಲ್ಲಿ ಒಳ ಜಗಳ ಶುರುವಾಯಿತು ಎಂದು ಹೇಳಲಾಗುತ್ತಿದೆ. ಅಲ್ಲದೆ, ಅಭಿಷೇಕ್-ಐಶ್ವರ್ಯಾ ನಡುವಿನ ಜಗಳಕ್ಕೆ ಅತ್ತೆ ಜಯಾ ಬಚ್ಚನ್ ಕಾರಣ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ನಟಿ ಐಶ್ವರ್ಯಾ ಬಚ್ಚನ್ ಕುಟುಂಬದಿಂದ ಬೇರೆಯಾಗಿ ಮಗಳೊಂದಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೀಗ ಇದಕ್ಕೆ ಸಂಬಂಧಪಟ್ಟ ಸಾಕ್ಷ್ಯ ಒಂದು ಹೊರಬಿದ್ದಿದೆ. ಕೆಲವು ವರ್ಷಗಳ ಹಿಂದೆ ಐಶ್ವರ್ಯಾ-ಜಯಾ ಸಂಬಂಧ ತುಂಬಾ ಚೆನ್ನಾಗಿತ್ತು. ಹಲವಾರು ಸಂದರ್ಶನ, ಕಾರ್ಯಕ್ರಮಗಳಲ್ಲಿ ಐಶ್ವರ್ಯ ಅತ್ತೆಯನ್ನು ಕೊಂಡಾಡಿದ್ದರು. ಆದರೆ ಸದ್ಯ ಇಬ್ಬರ ಸಂಬಂಧ ಸರಿಯಾಗಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇದಕ್ಕೆ ಸಾಕ್ಷಿಯೂ ದೊರೆತಿದೆ ಎನ್ನುತ್ತಿದ್ದಾರೆ ನೆಟ್ಟಿಗರು.
ಕಳೆದ ಕೆಲವು ದಿನಗಳ ಹಿಂದೆ ಐಶ್ವರ್ಯ ಕುಟುಂಬದ ಜೊತೆ ಹೋಳಿ ಆಚರಿಸಿದ್ದರು. ಆದರೆ ಈ ವೇಳೆ ನಟಿ ಅತ್ತೆಯ ಜೊತೆ ದೂರ ಕಾಯ್ದುಕೊಂಡಿದ್ದರು. ಇದೀಗ ಅತ್ತೆಯ ಹುಟ್ಟುಹಬ್ಬವನ್ನೇ ಮರೆತಿರುವ ಮಾಜಿ ವಿಶ್ವ ಸುಂದರಿ, ಸೋಶಿಯಲ್ ಮೀಡಿಯಾದಲ್ಲೇ ಒಂದೇ ಒಂದು ಪೋಸ್ಟ್ ಸಹ ಹಾಕಿಲ್ಲ. ಇದರಿಂದ ಅತ್ತೆ ಸೊಸೆ ಜಗಳ ಜೋರಾಗಿದೆ ಅಂತ ನೆಟ್ಟಿಗರಿಗೆ ಕನ್ಫರ್ಮ್ ಆಗಿದೆ.
ಇದನ್ನೂ ಓದಿ : ಬೆಂಗಳೂರು : ನಿವೃತ್ತ ಪೊಲೀಸ್ ಅಧಿಕಾರಿ ಮನೆ ದೋಚಿದ್ದ ನಾಲ್ವರು ಅರೆಸ್ಟ್..!