Download Our App

Follow us

Home » ಮೆಟ್ರೋ » ವಾಹನಗಳಿಂದ ವಾಕಿಂಗ್​​​​ಗೆ ಅಡ್ಡಿಯಾಗುತ್ತೆ ಎಂದು ರಸ್ತೆಯನ್ನೇ ಬಂದ್ ಮಾಡಿದ ನಿವೃತ್ತ, ಹಾಲಿ IAS, IPS ಅಧಿಕಾರಿಗಳು..!

ವಾಹನಗಳಿಂದ ವಾಕಿಂಗ್​​​​ಗೆ ಅಡ್ಡಿಯಾಗುತ್ತೆ ಎಂದು ರಸ್ತೆಯನ್ನೇ ಬಂದ್ ಮಾಡಿದ ನಿವೃತ್ತ, ಹಾಲಿ IAS, IPS ಅಧಿಕಾರಿಗಳು..!

ಬೆಂಗಳೂರು : ವಾಹನ ದಟ್ಟಣೆಯಿಂದ ವಾಕಿಂಗ್​​​​ಗೆ ಅಡ್ಡಿ ಆಗುತ್ತೆ ಅಂತಾ ನಿವೃತ್ತ ಹಾಗೂ ಹಾಲಿ IAS, IPS ಅಧಿಕಾರಿಗಳು ಸರ್ವಿಸ್​ ರಸ್ತೆಯನ್ನೇ ಕ್ಲೋಸ್​ ಮಾಡಿದ್ದಾರೆ. ಇವರು ಮರದ ದಿಮ್ಮಿ, ವಿದ್ಯುತ್ ಕಂಬ, ಸ್ಯಾನಿಟರಿ ಪೈಪ್ ಇಟ್ಟು ಸಿಲ್ಕ್ ಬೋರ್ಡ್ ಸಮೀಪ‌ ಇರುವ ಸರ್ವಿಸ್ ರಸ್ತೆ ಬಂದ್ ಮಾಡಿರುವ ಆರೋಪ ಕೇಳಿಬಂದಿದೆ. ನಿವೃತ್ತ ಮತ್ತು ಹಾಲಿ IAS, IPS ಅಧಿಕಾರಿಗಳ ವಿರುದ್ಧ ಇದೀಗ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

HSR ಲೇಔಟ್​ನ 6ನೇ ಸೆಕ್ಟರ್​ನಲ್ಲಿರುವ ನಿವೃತ್ತ & ಹಾಲಿ IAS, IPS ಅಧಿಕಾರಿಗಳು ವಾಹನಗಳು ಸಂಚರಿಸುವುದರಿಂದ ತಮಗೆ ವಾಕ್ ಮಾಡಲು ಸಮಸ್ಯೆ ಆಗುತ್ತೆ ಎಂದು ಸ್ವತಃ ರಸ್ತೆ ಕ್ಲೋಸ್ ಮಾಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ. ಸರ್ವಿಸ್​ ರಸ್ತೆ ಬಂದ್ ಮಾಡಿದ್ರಿಂದ ವಾಹನ ಸವಾರರು 4 ಕಿ.ಮೀ ಸುತ್ತಾಡಬೇಕು.
ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್​ ವಾಹನಗಳೂ ಸುತ್ತಾಡಿಯೇ ಬರ್ಬೇಕು.

ಸರ್ಕಾರ, BBMP ಅನುಮತಿ ಇಲ್ಲದೇ ತಾವೆ ರಸ್ತೆ ಬಂದ್ ಮಾಡಿದ್ದಾರೆ, ರಸ್ತೆ ಮುಚ್ಚಿಸಿರೋದ್ರಿಂದ ಸಾರ್ವಜನಿಕರ‌ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ.
ಡೆಲಿವರಿ ಬಾಯ್ಸ್, ಟ್ಯಾಕ್ಸಿ ಚಾಲಕರಿಗೂ ಪ್ರತಿ ನಿತ್ಯ ನರಕ ದರ್ಶನವಾಗಿದೆ.

ಟ್ರಾಫಿಕ್​​ ಪೊಲೀಸರಿಗೆ ಎಲ್ಲಾ ಗೊತ್ತಿದ್ದೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಕೂಡಲೇ ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸೋಷಿಯಲ್​ ಮೀಡಿಯಾಗಳಲ್ಲಿ ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ.

ಇದನ್ನೂ ಓದಿ : ಲೋಕಸಭೆ ಚುನಾವಣೆ : ಮೂರು ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಫಿಕ್ಸ್?

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here