ಬೆಂಗಳೂರು : ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಈಗಾಗಲೇ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇನ್ನೂ ಈ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ FSL ರಿಪೋರ್ಟ್ ಇದೇ ವಾರ ಪೊಲೀಸರ ಕೈಸೇರಲಿದೆ. ಒಂದು ತಿಂಗಳ ಹಿಂದೆ ಪೊಲೀಸರು ಹಲವು ಮಾದರಿ ಸ್ಯಾಂಪಲ್ ಕಳಿಸಿದ್ದರು. ಬಹುತೇಕ ಎಲ್ಲಾ ಸ್ಯಾಂಪಲ್ಗಳ ಪರೀಕ್ಷೆ ಮುಕ್ತಾಯವಾಗಿತ್ತು, ಆದರೆ ಆರೋಪಿಗಳ DNA ಟೆಸ್ಟ್ ರಿಪೋರ್ಟ್ ಬರೋದು ಬಾಕಿ ಇದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರು ಬ್ಲಡ್ ಸ್ಯಾಂಪಲ್, ಹೇರ್ ಸ್ಯಾಂಪಲ್, ಉಗುರಿನ ಚೂರು ಸಂಗ್ರಹಿಸಿದ್ದರು.
ಕೃತ್ಯಕ್ಕೆ ಬಳಸಿದ್ದ ವಸ್ತುಗಳ ರಿಪೋರ್ಟ್ಸ್, ವಸ್ತುಗಳ ಮೇಲಿದ್ದ ರಕ್ತದ ಕಲೆ, ಘಟನಾ ಸ್ಥಳದಲ್ಲಿ ಪತ್ತೆಯಾಗಿದ್ದ ಬ್ಲಡ್ ಸ್ಯಾಂಪಲ್ಸ್, ಆರೋಪಿಗಳು ಕೃತ್ಯ ಎಸಗಿದ್ದ ವೇಳೆ ಧರಿಸಿದ್ದ ಬಟ್ಟೆಗಳ ರಿಪೋರ್ಟ್ ಬರಲಿದೆ. ಅಷ್ಟೆ ಅಲ್ಲದೆ ಆರೋಪಿಗಳ ಚಪ್ಪಲಿ, ಶೂಗಳ ಫುಟ್ ಪ್ರಿಂಟ್ ರಿಪೋರ್ಟ್ ಬರ್ಬೇಕಿದೆ.
ಪಟ್ಟಣಗೆರೆ ಶೆಡ್, ದರ್ಶನ್, ಪವಿತ್ರಾಗೌಡ ಮನೆ CCTV ದೃಶ್ಯದ ರಿಪೋರ್ಟ್, ಸ್ಟೋನಿ ಬ್ರೂಕ್ ರೆಸ್ಟೋರೆಂಟ್ ಸಿಸಿಟಿವಿಗಳ ರಿಪೋರ್ಟ್, ಮೃತದೇಹ ಪತ್ತೆಯಾದ ರಾಜಕಾಲುವೆ ಸಮೀಪದ ಸಿಸಿಟಿವಿ ರಿಪೋರ್ಟ್ DVR ಸಮೇತ ಕಾಮಾಕ್ಷಿಪಾಳ್ಯ ಪೊಲೀಸರು ಎಫ್ಎಸ್ಎಲ್ ಗೆ ರವಾನಿಸಿದ್ದಾರೆ. ದರ್ಶನ್ ಸೇರಿ 17 ಆರೋಪಿಗಳ ಮೊಬೈಲ್ ಫೋನ್ FSL ರಿಪೋರ್ಟ್ ಬಾಕಿಯಿದ್ದು, ಪೊಲೀಸರು ಸುಮಾರು 66 ವಸ್ತುಗಳನ್ನು ವಿಧಿ ವಿಜ್ಞಾನ ಪರೀಕ್ಷೆಗೆ ಕಳಿಸಿದ್ದರು.
ಬೆಂಗಳೂರು, ಹೈದರಾಬಾದ್ FSL ಲ್ಯಾಬ್ಗಳಲ್ಲಿ ವಿವಿಧ ಹಂತದ ಪರೀಕ್ಷೆ ನಡೆಯಲಿದ್ದು, ಬಹುತೇಕ ಎಲ್ಲಾ ಸ್ಯಾಂಪಲ್ಸ್ ಪರೀಕ್ಷೆ ಮುಗಿದಿದ್ದು ರಿಪೋರ್ಟ್ ಇದೇ ವಾರ ಪೊಲೀಸರ ಕೈಸೇರಬಹುದು. ಇದೀಗ FSL ಲ್ಯಾಬ್ ರಿಪೋರ್ಟ್ ದರ್ಶನ್ಗೆ ಮತ್ತಷ್ಟು ಕಂಟಕ ತರುತ್ತಾ ಅನ್ನೊ ಪ್ರಶ್ನೆ ಎದುರಾಗಿದೆ.
ಇದನ್ನೂ ಓದಿ : ಶಿರೂರು ಗುಡ್ಡ ಕುಸಿತದ ಬೆನ್ನಲ್ಲೇ ಕಾರವಾರದ ಕಾಳಿ ಸೇತುವೆ ಕುಸಿತ – ನದಿಗೆ ಬಿದ್ದ ಟ್ರಕ್, ಅದೃಷ್ಟವಶಾತ್ ಚಾಲಕ ಪಾರು…!