Download Our App

Follow us

Home » ಅಪರಾಧ » ರೇಣುಕಾಸ್ವಾಮಿ ಮರ್ಡರ್ ಕೇಸ್ : ದರ್ಶನ್​​​​​ ರಾಕ್ಷಸ ಕೃತ್ಯ ಬಯಲು ಮಾಡಿದ ರಿಮ್ಯಾಂಡ್​ ಕಾಪಿ – ಇಂಚಿಂಚೂ ಡೀಟೇಲ್ಸ್​ ಇಲ್ಲಿದೆ..!

ರೇಣುಕಾಸ್ವಾಮಿ ಮರ್ಡರ್ ಕೇಸ್ : ದರ್ಶನ್​​​​​ ರಾಕ್ಷಸ ಕೃತ್ಯ ಬಯಲು ಮಾಡಿದ ರಿಮ್ಯಾಂಡ್​ ಕಾಪಿ – ಇಂಚಿಂಚೂ ಡೀಟೇಲ್ಸ್​ ಇಲ್ಲಿದೆ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ಕೊಲೆ ಕೇಸ್​ನಲ್ಲಿ ಅರೆಸ್ಟ್​ ಆಗಿರುವ ನಟ ದರ್ಶನ್​ ಮತ್ತು ಗ್ಯಾಂಗ್​ನ ಅಸಲಿ ಮುಖವಾಡ ಬಯಲಾಗುತ್ತಿದೆ. ಈ ಕೇಸ್​ನಲ್ಲಿ ಇದುವರೆಗೆ 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿ ಕ್ರೂರವಾಗಿ ಹತ್ಯೆ ಮಾಡಿದವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಬೆಂಗಳೂರು ಪೊಲೀಸ್​ ಕಮಿಷನರ್ ಬಿ.ದಯಾನಂದ್​​ ಅವರು ಈಗಾಗಲೇ ಭರವಸೆ ನೀಡಿದ್ದಾರೆ.

ಇನ್ನು, ದರ್ಶನ್ ಗ್ಯಾಂಗ್​ನ ​ ಕ್ರೂರತ್ವದ ಬಗ್ಗೆ ಒಂದೊಂದೇ ವಿಷ್ಯಗಳು ಹೊರಗೆ ಬರುತ್ತಿದ್ದು, ರೇಣುಕಾಸ್ವಾಮಿ ಹಂಕತರಿಗೆ ತಕ್ಕ ಶಿಕ್ಷೆ ಆಗಲೇ ಬೇಕು ಅನ್ನೋದು ಕರುನಾಡಿನ ಜನತೆಯ ಕೂಗಾಗಿದೆ. ಅದೇ ನಿಟ್ಟಿನಲ್ಲಿ ಪೊಲೀಸರು ಕೂಡ ಕಾರ್ಯ ನಿರತರಾಗಿದ್ದಾರೆ. ಇದೀಗ ರೇಣುಕಾಸ್ವಾಮಿ ಕೊಲೆ ಹಿಂದೆ ದರ್ಶನ್ ಗ್ಯಾಂಗ್ ಏನೆಲ್ಲ ಪ್ಲ್ಯಾನ್ ಮಾಡಿದ್ರು? ಹೇಗೆ ತಗ್ಲಾಕೊಂಡ್ರು ಎಂಬ ಬಿಗ್ ಎಕ್ಸ್‍ಕ್ಲೂಸೀವ್ ಮಾಹಿತಿ ಬಿಟಿವಿಗೆ ದೊರೆತಿದೆ.

ಹೌದು, ಕೋರ್ಟ್‍ಗೆ ಸಲ್ಲಿಸಿರುವ ಪೊಲೀಸ್ ರಿಮ್ಯಾಂಡ್ ಕಾಪಿ ಬಿಟಿವಿಗೆ ಲಭ್ಯವಾಗಿದೆ. ರೇಣುಕಾಸ್ವಾಮಿ ಸಾವಿಗೆ ಸ್ಫೋಟಕ ಕಾರಣ ಕೊಟ್ಟಿರುವ ವೈದ್ಯರ ವರದಿ, ದರ್ಶನ್ ವಿರುದ್ಧದ ಸಿಸಿಟಿವಿ ಸಾಕ್ಷ್ಯಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಷ್ಟೇ ಅಲ್ಲ ದರ್ಶನ್ ಹಾಕಿದ್ದ ಬಟ್ಟೆ ವಾಶ್ ಮಾಡಿದ್ದು ಎಲ್ಲಿ? ಮತ್ತು ಯಾರು? ದರ್ಶನ್ ಹಾಕಿದ್ದ ಶೂಗಳು ಸಿಕ್ಕಿದ್ದು ಎಲ್ಲಿ ಎಂಬ ಅಂಶಗಳು ರಿಮ್ಯಾಂಡ್ ಕಾಪಿಯಲ್ಲಿ ಬಯಲಾಗಿದೆ.

ರೇಣುಕಾಸ್ವಾಮಿ ಆಘಾತ ಮತ್ತು ಮೆದುಳಿನ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ರೇಣುಕಾಸ್ವಾಮಿ ದೇಹದ 32 ಕಡೆ ಗಾಯದ ಗುರುತುಗಳು ಪತ್ತೆಯಾಗಿವೆ. ತಲೆ ಬುರುಡೆಯಲ್ಲಿ 7ಕ್ಕೂ ಹೆಚ್ಚು ಗಾಯದ ಗುರುತುಗಳಿವೆ. ಮರ್ಮಾಂಗದಲ್ಲಿ ತೀವ್ರ ರಕ್ತಸ್ರಾವವಾಗಿರುವ ಭಯಾನಕ ಅಂಶ ಪೋಸ್ಟ್ ಮಾರ್ಟಂ ರಿಪೋರ್ಟ್‍ನಲ್ಲಿ ಬಹಿರಂಗವಾಗಿದೆ.

ದರ್ಶನ್ ವಿರುದ್ಧ ಸಿಸಿಟಿವಿ ಸಾಕ್ಷ್ಯ : ಇನ್ನು ಪಟ್ಟಣಗೆರೆ ಶೆಡ್‍ನಲ್ಲಿ ಮಹತ್ವದ ಸಾಕ್ಷಿ ಲಭ್ಯವಾಗಿದೆ. ಕೃತ್ಯಕ್ಕೆ ಬಳಸಿದ್ದ ಲಾಠಿ, ರಿಪೀಸ್ ಪಟ್ಟಿ ಮುಂತಾದ ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಕ್ತದ ಕಲೆಗಳು ಹಾಗೂ ಭೌತಿಕ ಕುರುಹುಗಳು ಕೂಡ ಪತ್ತೆಯಾಗಿದೆ. ಘಟನೆ ನಡೆದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ವಶಕ್ಕೆ ಪಡೆಯಲಾಗಿದ್ದು, 30 ನಿಮಿಷದ ಸಿಸಿಟಿವಿ ದೃಶ್ಯ ಕೇಸ್‍ನಲ್ಲಿ ಪ್ರಮುಖ ಸಾಕ್ಷ್ಯವಾಗೋ ಸಾಧ್ಯತೆಗಳಿವೆ.

ರೇಣುಕಾ ಸ್ವಾಮಿ ಕೊಲೆ ಬಳಿಕ ದರ್ಶನ್ ಮಾಡಿದ್ದೇನು ಗೊತ್ತಾ? ಕೃತ್ಯ ನಡೆದ ಬಳಿಕ ಆರ್.ಆರ್ ನಗರ ನಿವಾಸಕ್ಕೆ ದರ್ಶನ್ ಧಾವಿಸಿ, ಈ ಕೊಲೆ ಕೇಸ್​ನಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಲೂ ಪೊಲೀಸರು, ಲಾಯರ್​, ಶವ ಸಾಗಿಸುವ ವ್ಯಕ್ತಿಗಳಿಗೆ ನೀಡಲು ಎ14 ಆರೋಪಿ ಪ್ರದೋಷ್​ಗೆ 30 ಲಕ್ಷ ನೀಡಿದ್ರು. ಈ ಎಲ್ಲಾ ವಿಚಾರವನ್ನು ದರ್ಶನ್ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ. ಸದ್ಯ ದರ್ಶನ್​​​ ಕೊಟ್ಟಿರೋ 30 ಲಕ್ಷ ಹಣವನ್ನು ಪೊಲೀಸರು ಸೀಜ್​ ಮಾಡಿದ್ದಾರೆ.

ಕೃತ್ಯ ಎಸಗಿದ ವೇಳೆ ದರ್ಶನ್ ಟ್ರೂ ರಿಲಿಜನ್ ಬ್ರಾಂಡಿನ ಕಪ್ಪು ಜೀನ್ಸ್ ಪ್ಯಾಂಟ್, OPIUM VALLY ಬ್ರಾಂಡ್‌ನ ಟಿ-ಶರ್ಟ್ ಧರಿಸಿದ್ರು. ಪ್ರದೋಷ್​ಗೆ 30 ಲಕ್ಷ ಕೊಟ್ಟು ಬಳಿಕ ತಾನು ತೊಟ್ಟಿದ್ದ ಪ್ಯಾಂಟ್ ಮತ್ತು ಟೀ ಶರ್ಟ್ ಬದಲಾಯಿಸಿದ್ರು. ದರ್ಶನ್ ಬಿಚ್ಚಿ ಹಾಕಿದ್ದ ಬಟ್ಟೆಗಳನ್ನು ಮನೆ ಕೆಲಸದಾಕೆ ತೊಳೆದು ಒಣ ಹಾಕಿದ್ದಳು. ಈ ಬಗ್ಗೆ ದರ್ಶನ್ ಮಹಜರು ವೇಳೆ ಪೊಲೀಸರಿಗೆ ಬಟ್ಟೆಗಳನ್ನು ತೊರಿಸಿದ್ದು, ಪೊಲೀಸರು ಬಟ್ಟೆಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ. ಇನ್ನು ದರ್ಶನ್ ತನ್ನ ಶೂ, ವಾಚ್ ಸೇರಿ ಇತರ ಐಟಂ ವಿಜಯಲಕ್ಷ್ಮಿ ಮನೆಗೆ ಕೆಲಸದಾಕೆ ಮೂಲಕ ತಲುಪಿಸಿದ್ದರು ಎಂಬ ಮಾಹಿತಿಯನ್ನು ವಿಚಾರಣೆ ವೇಳೆ ದರ್ಶನ್​ ತಿಳಿಸಿದ್ದಾರೆ.

ಇಲ್ಲಿವರಗೆ ತನಿಖಾ ತಂಡ ನಡೆಸಿರೋ ಮಹಜರ್ ಸ್ಥಳಗಳ ಸಂಪೂರ್ಣ ವಿವರ..

  • ದರ್ಶನ್ ನಿಂದ 30ಲಕ್ಷ ಹಣ ಪಡೆದ ಪ್ರದೋಶ್ ಗಿರಿನಗರದ ನಿವಾಸದಲ್ಲಿ ಮಹಜರ್- ಹಣ ಹಾಗೂ ಸಿಸಿಟಿವಿ ಪೋಟೆಜ್ ವಶಕ್ಕೆ.
  • ರಾಘವೇಂದ್ರ, ಕಾರ್ತಿಕ್, ನಿಖಿಲ್, ವಿನಯ್, ನಾಗರಾಜು, ಲಕ್ಷ್ಮಣ್, ಪ್ರದೂಶ್ ಅವರನ್ನ ಕರದ್ಯೊದ್ದು ಶವ ಬೀಸಾಕಿದ್ದ ಸತ್ವ ಅನುಗ್ರಹ ಅಪರ್ಟ್ಮೆಂಟ್ ಬಳಿ ಮಹಜರ್.
  • ಪವಿತ್ರಗೌಡ, ದರ್ಶನ್, ಪವನ್, ರಾಘವೇಂದ್ರ, ನಂದೀಶ್ , ವಿನಯ್, ನಾಗರಾಜು, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತೀಕ್‌, ನಿಖಿಲ್ ಕರೆದೊಯ್ದು ಪಟ್ಟಣಗೆರೆ ಜಯಣ್ಣ ಫಾರ್ಂ ( ರೇಣುಕಾ ಸ್ವಾಮಿ ಕೊಲೆಯಾದ ಸ್ಥಳ) ನಲ್ಲಿ ಮಹಜರ್- ಕೃತ್ಯಕ್ಕೆ ಬಳಸಿದ್ದ ಲಾಠಿ, ಮರದ ಕೊಂಬೆಯ ಪೀಸ್, ವಾಟರ್ ಬಾಟಲ್, ಸೆಕ್ಯೂರಿಟಿ ರೂಮ್ ನಲ್ಲಿ ದೊರೆತ ರಕ್ತದ ಕಲೆಗಳು ಹಾಗೂ ಸಿಸಿಟಿವಿ ಪೋಟೆಜ್ ವಶಕ್ಕೆ.
  • ಎ11 ನಾಗರಾಜ್ ನಿಂದ‌ ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ವಾಹನ‌ ನಿಲ್ಲಿಸಿದ್ದ ಆರ್ ಆರ್ ನಗರದ ಐಡಿಯಲ್ ಹೋಮ್ಸ್ ಇ ಕ್ರಾಸ್ ನಲ್ಲಿ ಮಹಜರ್- ಕೆ‌ಎ ೦೩ ಎಂಯು ೮೮೨೧ ಸ್ಕಾರ್ಪಿಯೋ ಕಾರ್ ವಶಕ್ಕೆ- ಕಾರಿನ ಹಿಂಬದಿ ಸೀಟ್ ನಲ್ಲಿ ರಕ್ತದ ಕಲೆಗಳು ಪತ್ತೆ.
  • ಆರೋಪಿಗಳಾದ ರಾಘವೇಂದ್ರ @ರಾಘು ಜಗದೀಶ್, ರವಿ, ಅನು ಕರೆದುಕೊಂಡು ಹೋಗಿ ಚಿತ್ರದುರ್ಗದಲ್ಲಿ ಮಹಜರ್- ಇಟಿಯಸ್ ಕಾರ್‌ ಸೇರಿ ಕಾರಿನಲ್ಲಿ‌ ದೊರೆತ ರಕ್ತ, ಕೂದಲು, ಬೆರಳಚ್ಚು ಮಾದರಿ ಸಂಗ್ರಹ. ಸಾಂದರ್ಭಿಕ ಸಾಕ್ಷ್ಯವಾಗಿ ಚಿತ್ರದುರ್ಗ-ಬೆಂಗಳೂರು ಮಾರ್ಗದ ಟೋಲ್‌ಗಳ ಸಿಸಿಟಿವಿ ಪೋಟೆಜ್ ಸಂಗ್ರಹ. ಜೊತೆಗೆ ಆರೋಪಿ ಜಗದೀಶ್, ರವಿ ಹಾಗೂ ಅನುಕುಮಾರ್ ನಿವಾಸದಲ್ಲಿ ಮಹಜರ್- ಮೃತ ರೇಣುಕಾ ಸ್ವಾಮಿಯ ಚಿನ್ನದ ಸರ,‌ ಉಂಗುರ, ವಾಚ್ ವಶಕ್ಕೆ. ಮೃತದೇಹ ಸಾಗಿಸೋ ವೇಳೆ ರೇಣುಕಾ ಸ್ವಾಮಿಯ ಚಿನ್ನಾಭರಣವನ್ನ ತೆಗೆದುಕೊಂಡಿದ್ದ ಜಗದೀಶ್, ವಾಚ್ ತೆಗೆದುಕೊಂಡಿದ್ದ ಅನುಕುಮಾರ್.
  • ಎ14 ಪ್ರದೋಶ್ ಅನ್ನ ಕರೆದೊಯ್ದು ಸುಮ್ಮನಹಳ್ಳಿಯ ಮೋರಿ ಬಳಿ ಮೊಬೈಲ್ ಗಾಗಿ ಮಹಜರ್- ಮೃತ‌ ರೇಣುಕಾ ಸ್ವಾಮಿ ಮತ್ತು ಆರೋಪಿ ರಾಘವೇಂದ್ರ ಮೊಬೈಲ್ ಮೋರಿಗೆ ಎಸೆದಿದ್ದ ಪ್ರದೂಶ್.
  • ಆರೋಪಿ ರಾಘವೇಂದ್ರನನ್ನ ಕರೆದೊಯ್ದು ಆರ್ ಆರ್ ನಗರದ ೧೮ ನೇ ಕ್ರಾಸ್ ನ ಐಡಿಯಲ್ ಹೋಮ್ಸ್ ನಲ್ಲಿ ಮಹಜರ್- ಕೊಲೆಯ ವೇಳೆ ಧರಿಸಿದ್ದ ಬಟ್ಟೆ ಮತ್ತು ಚಪ್ಪಲಿ ಬದಲಾಯಿಸಿದ್ದ ಆರೋಪಿ
  • ಆರೋಪಿ ಕಾರ್ತಿಕ್ ನನ್ನ ಕರೆದೊಯ್ದು ಆರ್ ಆರ್ ನಗರದ ಟ್ರೋಬೋ‌ ಹೋಟಲ್ ೯೮ ಸ್ಟ್ರೀಟ್ ರೂಮ್ ನಂ ೨೦೩ ರಲ್ಲಿ ಮಹಜರ್- ಕೊಲೆಯ ನಂತರ ಹೋಟಲ್ ನಲ್ಲಿ‌ ಕಾರ್ತಿಕ್ ಜೊತೆಗೆ ಕೇಶವ್ ನಿಖಿಲ್ ತಂಗಿದ್ದ ಹೋಟೆಲ್- ಕೃತ್ಯದ ಸಮಯದಲ್ಲಿ ಧರಿಸಿದ್ದ ಬಟ್ಟೆಗಳನ್ನು ವಶಕ್ಕೆ ಪಡೆದಿರೋ ಪೊಲೀಸ್ರು.
  • ದರ್ಶನ್ ಮತ್ತು ಪವನ್ ಕರೆದೊಯ್ದು ಆರ್ ಆರ್ ನಗರದ ನಿವಾಸದಲ್ಲಿ ಮಹಜರ್- ಕೃತ್ಯದ ಸಮಯದಲ್ಲಿ ದರ್ಶನ್ ಧರಿಸಿದ್ದ ಬಟ್ಟೆಗಳು ಮನೆಯ ಟೇರೆಸ್ ನಲ್ಲಿ ಒಗೆದು ಒಣಗಲು ಹಾಕಿತ್ತು‌‌. ಪೊಲೀಸರು ದರ್ಶನ್ ನೀಡಿದ ಮಾಹಿತಿಯಂತೆ ಕೃತ್ಯದ ದಿನ ಧರಿಸಿದ್ದ ನೀಲಿ‌ ಬಣ್ಣದ True religion ಹೆಸರಿನ ಜೀನ್ಸ್ ಪ್ಯಾಂಟ್ ಹಾಗೂ opium velly ಹೆಸರಿನ ಕಪ್ಪು ಬಣ್ಣದ ರೌಂಡ್ ನೇಕ್‌ ಟೀ ಶಾರ್ಟ್ ಮತ್ತು ಸಿಸಿಟಿವಿ ಪೋಟೇಜ್ ಸೀಜ್- ದರ್ಶನ್ ಧರಿಸಿದ್ದ ಲೂಫರ್ಸ್ ಡಿಸೈನ್ ನೀಲಿ ಬಣ್ಣದ ಶೂ ಪತ್ನಿ ವಿಜಯಲಕ್ಷ್ಮಿ ವಾಸವಾಗಿರೋ ಹೊಸಕೆರೆಹಳ್ಳಿಯ ಪ್ರೆಸ್ಟೀಜ್ ಸೌತ್ ರಿಡ್ಜ್ ಅಪಾರ್ಟ್ಮೆಂಟ್ ನಿಂದ ವಶಕ್ಕೆ
  • ನಿಖಿಲ್ ನಾಯಕ್ ವಾಸವಾಗಿದ್ದ ಬನ್ನೇರುಘಟ್ಟ ರಸ್ತೆಯ ಕೆಂಬತ್ತಳ್ಳಿ ನಿವಾಸದಲ್ಲಿ ಮಹಜರ್- ಮನೆಯಲ್ಲಿದ್ದ ೪.೫ ಲಕ್ಷ ಹಣ ಹಾಗೂ ಮೊಬೈಲ್ ಪೋನ್ ವಶಕ್ಕೆ
  • ಎ೧ ಆರೋಪಿ ಪವಿತ್ರಗೌಡ ಕರೆದೊಯ್ದು ಆರ್ ಆರ್‌‌ನಗರದ ನಿವಾಸದಲ್ಲಿ ಮಹಜರ್- ಕೃತ್ಯದ ಸಮಯದಲ್ಲಿ ಧರಿಸಿದ್ದ ಬಟ್ಟೆ ಮತ್ತು ಚಪ್ಪಲಿ ವಶಕ್ಕೆ
  • ಎ೧೦ ಆರೋಪಿ ವಿನಯ್ ನನ್ನ ಕರೆದೊಯ್ದು ಆರ್ ಆರ್ ನಗರದ ಸ್ಟೋನಿ‌ಬ್ರೂಕ್ ನಲ್ಲಿ ಮಹಜರ್ ಸಿಸಿಟಿವಿ ವಶಕ್ಕೆ
  • ಕೃತ್ಯ ಎಸಗಿದ ನಂತರ ಆರೋಪಿಗಳು ಸಾಕ್ಷ್ಯ ನಾಶ, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನ ಮರೆಮಾಚೋ ಪ್ರಯತ್ನದ ಹಿನ್ನಲೆ ಎಲ್ಲ ಆರೋಪಿಗಳ‌ ನಿವಾಸದಲ್ಲೂ ಮಜಹರ್. ಮಹತ್ವದ ಸಾಕ್ಷಿಗಳು ವಶಕ್ಕೆ

ಇದನ್ನೂ ಓದಿ : ವಿಚಾರಣೆ ವೇಳೆ ತೀವ್ರ ಅಸ್ವಸ್ಥಗೊಂಡ A-1 ಆರೋಪಿ ಪವಿತ್ರಾ ಗೌಡ – ಸ್ಟೇಷನ್​​ನಿಂದ ಆಸ್ಪತ್ರೆಗೆ ಶಿಫ್ಟ್‌..!

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here