Download Our App

Follow us

Home » ಅಪರಾಧ » ರೇಣುಕಾಸ್ವಾಮಿ ಹತ್ಯೆ ಕೇಸ್​​ : ದರ್ಶನ್​​​ಗೆ ಮುಳುವಾಗುತ್ತಾ ಆ 8 ಹೊಸ ಸೆಕ್ಷನ್?

ರೇಣುಕಾಸ್ವಾಮಿ ಹತ್ಯೆ ಕೇಸ್​​ : ದರ್ಶನ್​​​ಗೆ ಮುಳುವಾಗುತ್ತಾ ಆ 8 ಹೊಸ ಸೆಕ್ಷನ್?

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಸ್ವಾಮಿ ಶವ ಪತ್ತೆಯಾದಾಗ ಪೊಲೀಸರು 2 ಸೆಕ್ಷನ್​​ ಹಾಕಿದ್ದರು. ಇದೀಗ ಈ ಪ್ರಕರಣದ ವಿಚಾರಣೆ, ಮಹಜರ್​ ನಂತರ ಪೊಲೀಸರು ದರ್ಶನ್ ವಿರುದ್ಧ 8 ಅಡಿಷನಲ್ ಸೆಕ್ಷನ್ ಸೇರಿಸಿದ್ದಾರೆ.

ರೇಣುಕಾಸ್ವಾಮಿ ಶವ ಸಿಕ್ಕಾಗ 302- ಕೊಲೆ, 201-ಸಾಕ್ಷಿನಾಶರಡಿ FIR ಕೂಡ ದಾಖಲಾಗಿತ್ತು. ಇದೀಗ IPC 302, 201,120-ಬಿ, 355, 384, 143,147,148, R/W 149ರಡಿ ಕೇಸ್ ದಾಖಲಾಗಿದೆ. 364- ಕಿಡ್ನಾಪ್, 384-ಸುಲಿಗೆ, 355- ಕ್ರಿಮಿನಲ್ ಬಲ ಪ್ರಯೋಗ, IPC-148 ಮಾರಕ ಆಯುಧಗಳ ಬಳಕೆ, 120(B), ಒಳ ಸಂಚು ಮಾಡಿರೊ ಆರೋಪ ಕೂಡ ಸೇರಿಕೊಂಡಿದೆ.

ಕಾಮಾಕ್ಷಿಪಾಳ್ಯ ಪೊಲೀಸರು ರಿಮ್ಯಾಂಡ್ ಅಪ್ಲಿಕೇಷನ್​​ ಸಲ್ಲಿಸಿದ್ದು, ಅದರಲ್ಲಿ ಹೆಚ್ಚುವರಿ ಸೆಕ್ಷನ್​​ನ ಬಗ್ಗೆ ಮಾಹಿತಿಯಿದೆ. ಇದೀಗ ಈ  8 ಹೊಸ ಸೆಕ್ಷನ್​​ಗಳೇ ರೇಣುಕಾಸ್ವಾಮಿ ಹತ್ಯೆ ಕೇಸ್​​ನ A2  ಆರೋಪಿ ದರ್ಶನ್​ಗೆ ಮುಳುವಾಗುತ್ತಾ ಎಂಬುದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ : ಮೈಸೂರಿನಲ್ಲಿ ಡಾಲಿ ಧನಂಜಯ್‌ ನಟನೆಯ ‘ಕೋಟಿ’ ಸಿನಿಮಾ ವೀಕ್ಷಿಸಲಿರುವ ಪ್ರತಾಪ್ ಸಿಂಹ..!

Leave a Comment

DG Ad

RELATED LATEST NEWS

Top Headlines

ಸಿಎಂ ಸಿದ್ದರಾಮಯ್ಯಗೆ ಸದ್ಯಕ್ಕಿಲ್ಲ CBI ಸಂಕಷ್ಟ – ಮುಡಾ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್​!

ಧಾರವಾಡ : ಇಂದು ಧಾರವಾಡ ಹೈಕೋರ್ಟ್​ನಲ್ಲಿ ಮುಡಾ ಕೇಸ್ ತನಿಖೆ ಸಿಬಿಐಗೆ ನೀಡುವಂತೆ ಕೋರಿ​ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆದಿದ್ದು, ವಾದ-ಪ್ರತಿವಾದ ಆಲಿಸಿದ  ಧಾರವಾಡ ಹೈಕೋರ್ಟ್​

Live Cricket

Add Your Heading Text Here