Download Our App

Follow us

Home » ರಾಜಕೀಯ » ತಮಿಳುನಾಡಿಗೆ ಪ್ರತಿದಿನ 1TMC ನೀರು ಬಿಡಲು ಶಿಫಾರಸ್ಸು – ಸಿಎಂ ನೇತೃತ್ವದಲ್ಲಿ ತುರ್ತು ಸಭೆ ಕರೆದ ಡಿಕೆಶಿ..!

ತಮಿಳುನಾಡಿಗೆ ಪ್ರತಿದಿನ 1TMC ನೀರು ಬಿಡಲು ಶಿಫಾರಸ್ಸು – ಸಿಎಂ ನೇತೃತ್ವದಲ್ಲಿ ತುರ್ತು ಸಭೆ ಕರೆದ ಡಿಕೆಶಿ..!

ನವದೆಹಲಿ : ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಗಳಲ್ಲಿ ಜೀವ ಕಳೆ ಬಂದಿದೆ. ಕಳೆದ ಬಾರಿ ಮಳೆ ಕೈಕೊಟ್ಟಿದ್ದಕ್ಕೆ ಸಂಪೂರ್ಣವಾಗಿ ಖಾಲಿ ಡೆತ್​ ಸ್ಟೋರೇಜ್ ತಲುಪಿದ್ದ ಕಾವೇರಿಗೆ ನೀರು ಹರಿದುಬರುತ್ತಿದ್ದು, ಕೆಆರ್​​ಎಸ್ ಜಲಾಶಯ ಭರ್ತಿಯತ್ತ ಸಾಗುತ್ತಿದೆ. ಈ ಮಧ್ಯೆಯೇ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿ ಶಾಕ್ ನೀಡಿದೆ.

ಪ್ರತಿನಿತ್ಯ ತಮಿಳುನಾಡಿಗೆ 1 ಟಿಎಂಸಿ ನೀರು ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶಿಸಿದೆ. ಇದೀಗ ತಮಿಳುನಾಡಿಗೆ ಪ್ರತಿದಿನ 1TMC ನೀರು ಬಿಡಲು ಶಿಫಾರಸ್ಸು ಮಾಡಿದ ಹಿನ್ನೆಲೆ ಸಿಎಂ ನೇತೃತ್ವದಲ್ಲಿ ಜಲ‌ ಸಂಪನ್ಮೂಲ ಇಲಾಖೆಯ ಜೊತೆ ತುರ್ತು ಸಭೆ ನಡೆಸಲಿದ್ದಾರೆ.

ಶಿಫಾರಸ್ಸು ಮಾಡಿದ ಸಂಬಂಧ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿಸಿಎಂ ಡಿ.ಕೆ. ಶಿವಕುಮಾರ್, ಇಲಾಖೆಯ ಹಿರಿಯ ಅಧಿಕಾರಿಗಳು, ಕಾವೇರಿ ಕಣಿವೆ ಭಾಗದ ಸಚಿವರು ಸಭೆಯಲ್ಲಿ ಭಾಗಿಯಾಗಿಯಾಗಲಿದ್ದಾರೆ.

ಈಗಾಗಲೇ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಬೆಳಗ್ಗೆ ಲೀಗಲ್ ಟೀಂ ಜೊತೆ ಪೂರ್ವಭಾವಿಯಾಗಿ ಚರ್ಚೆ ನಡೆಸಿದ್ದಾರೆ.  ಇಂದಿನ ಸಭೆಯಲ್ಲಿ ಈ ಹಂತದಲ್ಲಿ ಸರ್ಕಾರ ಯಾವ ನಿರ್ಧಾರ ತಗೆದುಕೊಳ್ಳಬೇಕು ಕಾವೇರಿ ನಿಯಂತ್ರಣ ಸಮಿತಿಯ ಶಿಫಾರಸ್ಸನ್ನ ಪಾಲಿಸಬೇಕೋ ಅಥವಾ ಮೇಲ್ಮನವಿ ಸಲ್ಲಿಸಬೇಕೋ ಎಂಬುದುದರ ಬಗ್ಗೆ ಸಿಎಂ ಚರ್ಚೆ ನಡೆಸಲಿದ್ದಾರೆ.

ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ​​​ ಕೇಸ್​​ – ಕೃತ್ಯದ ವೇಳೆ ಕೊಟ್ಟಿದ್ದ 5 ಲಕ್ಷ ರೂ. ಹಣ ಪತ್ತೆ..!

Leave a Comment

DG Ad

RELATED LATEST NEWS

Top Headlines

‘ಲಕ್ಷ್ಮೀಪುತ್ರ’ನಾದ ಸ್ಯಾಂಡಲ್​ವುಡ್ ಉಪಾಧ್ಯಕ್ಷ ಚಿಕ್ಕಣ್ಣ – ಸಾಥ್ ಕೊಟ್ಟ ಎ.ಪಿ ಅರ್ಜುನ್..!

ಕಿಸ್, ಅದ್ಧೂರಿ ಲವರ್ಸ್​ನಂತಹ ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ಕೊಡುಗೆಯಾಗಿ ಕೊಟ್ಟ ಎಪಿ ಅರ್ಜುನ್ ಫಿಲ್ಮಂಸ್​​ನ ಮೂರನೇ ಸಿನಿಮಾ ಅನೌನ್ಸ್ ಆಗಿದೆ. ಎಪಿ ಅರ್ಜುನ್ ಒಡೆತನದ ಎಪಿ

Live Cricket

Add Your Heading Text Here