Download Our App

Follow us

Home » ರಾಜ್ಯ » ಎಲೆಕ್ಷನ್ ಇತಿಹಾಸದಲ್ಲೇ ರೆಕಾರ್ಡ್ ಬ್ರೇಕ್ : 6 ತಿಂಗಳಲ್ಲಿ ಸೀಜ್ ಆಗಿದ್ದು ಎಷ್ಟು ಕೋಟಿ ಗೊತ್ತಾ?

ಎಲೆಕ್ಷನ್ ಇತಿಹಾಸದಲ್ಲೇ ರೆಕಾರ್ಡ್ ಬ್ರೇಕ್ : 6 ತಿಂಗಳಲ್ಲಿ ಸೀಜ್ ಆಗಿದ್ದು ಎಷ್ಟು ಕೋಟಿ ಗೊತ್ತಾ?

ಬೆಂಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೂಕ್ತ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣ, ಮದ್ಯ, ಚಿನ್ನಾಭರಣ ಹಾಗೂ ಉಚಿತ ಉಡುಗೊರೆಗಳನ್ನು ಎಲೆಕ್ಷನ್​ ಆಯೋಗ ಸೀಜ್ ಮಾಡುತ್ತಿದೆ. ಎಲೆಕ್ಷನ್​ ಇತಿಹಾಸದಲ್ಲೇ ರೆಕಾರ್ಡ್​ ಬ್ರೇಕ್ ಆಗಿದೆ.

75 ವರ್ಷದಲ್ಲೇ ಈ ಬಾರಿಯ ಎಲೆಕ್ಷನ್​ ಆಯೋಗದ ಅಖಾಡದಲ್ಲಿ ಅತೀ ಹೆಚ್ಚು ಹಣ, ಆಭರಣ ಸೀಜ್ ಆಗಿದ್ದು, 6 ತಿಂಗಳಲ್ಲಿ 12 ಸಾವಿರ ಕೋಟಿ ಮೌಲ್ಯದ ವಸ್ತುಗಳನ್ನು ಸೀಜ್​ ಮಾಡಲಾಗಿದೆ. ಮಾರ್ಚ್​ನಲ್ಲೇ 4,650 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದು, ಮಾರ್ಚ್​ 1 ರ ನಂತರ ಈವರೆಗೆ 100 ಕೋಟಿ ಹಣ ಸೀಜ್​ ಆಗಿದೆ.

2024ರಲ್ಲಿ ಈವರೆಗೆ 395 ಕೋಟಿ ನಗದು ವಶಕ್ಕೆ ಪಡೆದಿದ್ದು, 2019ರಲ್ಲಿ ಒಟ್ಟಾರೆ 844 ಕೋಟಿ ನಗದು ಪತ್ತೆಯಾಗಿತ್ತು. ಈ ಬಾರಿ ಏಪ್ರಿಲ್​ 1ರವರೆಗೆ 489 ಕೋಟಿ ಮೌಲ್ಯದ ಲಿಕ್ಕರ್​ ವಶ ಪಡಿಸಿಕೊಂಡಿದ್ದಾರೆ. 2019ರಲ್ಲಿ ಒಟ್ಟಾರೆ 304 ಕೋಟಿ ಮೌಲ್ಯದ ಮದ್ಯ ಸಿಕ್ಕಿತ್ತು. ಏಪ್ರಿಲ್​ 1ರವರೆಗೆ 2068 ಕೋಟಿ ಮೌಲ್ಯದ ಡ್ರಗ್ಸ್​, 2019ರಲ್ಲಿ ಒಟ್ಟಾರೆ ಸಿಕ್ಕಿದ್ದು 1279 ಕೋಟಿ ಮೌಲ್ಯದ ಡ್ರಗ್ಸ್​ ವಶಕ್ಕೆ ಪಡೆದಿದ್ದಾರೆ.

ಏಪ್ರಿಲ್​ 13ರವರೆಗೆ 562 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದು, 2019ರಲ್ಲಿ 987 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು. ಈ ಬಾರಿ ಉಚಿತ ಉಡುಗೊರೆಯಲ್ಲೂ 2024ರ ಚುನಾವಣೆ ದಾಖಲೆ ಬರೆಯುತ್ತಿದೆ. ಏಪ್ರಿಲ್​ 13 ರವರೆಗೆ ಆಯೋಗ 1142 ಉಚಿತ ಉಡುಗೊರೆಗಳನ್ನ ವಶಕ್ಕೆ ಪಡೆದಿದ್ದು, 2019ರಲ್ಲಿ 60 ಕೋಟಿ ಮೌಲ್ಯದ ಉಚಿತ ಉಡುಗೊರೆ ಪತ್ತೆಯಾಗಿತ್ತು.

ರಾಜ್ಯದಲ್ಲಿ ಸಿಕ್ಕಿದ್ದು ಎಷ್ಟು ಗೊತ್ತಾ..?

  • 43 ದಿನಗಳಲ್ಲಿ 281 ಕೋಟಿ ಮೌಲ್ಯದ ವಸ್ತುಗಳು ವಶ
  • ನಗದು ರೂಪದಲ್ಲಿ ಸಿಕ್ಕಿದ್ದು 35 ಕೋಟಿ
  • 1 ಕೋಟಿ 30 ಲಕ್ಷ ಲೀಟರ್​ ಮದ್ಯ ವಶ
  • ಬರೋಬ್ಬರಿ 124 ಕೋಟಿ ಮೌಲ್ಯದ ಲಿಕ್ಕರ್ ವಶಕ್ಕೆ
  • 18.75 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್
  • 41.93 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ
  • 60.86 ಕೋಟಿ ಮೌಲ್ಯದ ಉಚಿತ ಉಡುಗೊರೆ ಸೀಜ್
  • ರಾಜಸ್ಥಾನ- 778 ಕೋಟಿ, ಗುಜರಾತ್ – 605 ಕೋಟಿ
  • ತಮಿಳುನಾಡು – 460 ಕೋಟಿ, ಮಹಾರಾಷ್ಟ್ರ – 431 ಕೋಟಿ
  • ಪಂಜಾಬ್  -311 ಕೋಟಿ, ಆಂಧ್ರ ಪ್ರದೇಶ – 125 ಕೋಟಿ
  • ತೆಲಂಗಾಣ – 212 ಕೋಟಿ ಮೌಲ್ಯದ ವಸ್ತು, ಹಣ ವಶ

ಇದನ್ನೂ ಓದಿ : ಕೋಮುಲ್ ನೇಮಕಾತಿ ಹಗರಣ – FIR ದಾಖಲಿಸಿ ಸ್ವತಂತ್ರ ತನಿಖೆ ನಡೆಸುವಂತೆ ED ಮನವಿ..!

 

 

Leave a Comment

DG Ad

RELATED LATEST NEWS

Top Headlines

ರವಿಶಂಕರ್ ಪುತ್ರ ಅದ್ವೈ ನಟನೆಯ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ – ಸಾಥ್ ಕೊಟ್ಟ ಶಿವಣ್ಣ..!

ಬಹುಭಾಷಾ ನಟ ಪಿ. ರವಿಶಂಕರ್​ ಅವರ ಪುತ್ರ ಅದ್ವೈ ಅಭಿನಯದ ಮೊದಲ ಸಿನಿಮಾ ‘ಸುಬ್ರಹ್ಮಣ್ಯ’ ಫಸ್ಟ್ ಲುಕ್ ರಿಲೀಸ್ ಆಗಿದೆ. ಗಣೇಶ ಚತುರ್ಥಿಯ ಶುಭ ದಿನವಾದ ಇಂದು

Live Cricket

Add Your Heading Text Here