Download Our App

Follow us

Home » ಸಿನಿಮಾ » ರೇವ್​ ಪಾರ್ಟಿ ಕೇಸ್ – ಪರಪ್ಪನ ಅಗ್ರಹಾರ ಜೈಲಿಂದ ತೆಲುಗು ನಟಿ ಹೇಮಾ ರಿಲೀಸ್..!

ರೇವ್​ ಪಾರ್ಟಿ ಕೇಸ್ – ಪರಪ್ಪನ ಅಗ್ರಹಾರ ಜೈಲಿಂದ ತೆಲುಗು ನಟಿ ಹೇಮಾ ರಿಲೀಸ್..!

ಬೆಂಗಳೂರು : ರೇವ್ ಪಾರ್ಟಿಯಲ್ಲಿ ಭಾಗಿಯಾಗಿ ಜೈಲು ಪಾಲಾಗಿದ್ದ ನಟಿ ಹೇಮಾ ಇದೀಗ ರಿಲೀಸ್ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಎನ್‌ಡಿಪಿಎಸ್ ವಿಶೇಷ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಪಡೆದಿರುವ ಹೇಮಾ ಇಂದು ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಎನ್‌ಡಿಪಿಎಸ್ ವಿಶೇಷ ಕೋರ್ಟ್ ಜೂನ್ 12ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಸಿಕ್ಕ ಎರಡು ದಿನಗಳ ಬಳಿಕ ನಟಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಜಾಮೀನು ಪ್ರಕ್ರಿಯೆ ವಿಳಂಬ ಆದ ಹಿನ್ನೆಲೆ ಇಂದು ಹೇಮಾರನ್ನು ಬಿಡುಗಡೆ ಮಾಡಲಾಯಿತು.

ಇತ್ತೀಚೆಗೆ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ನಟಿ ಭಾಗಿಯಾಗಿದ್ದರು. ನಾನು ಬೆಂಗಳೂರಿನಲ್ಲಿ ಇಲ್ಲ, ಹೈದರಾಬಾದ್‌ನಲ್ಲಿರೋದಾಗಿ ವಿಡಿಯೋ ಮಾಡಿ ಹೇಮಾ ದಿಕ್ಕು ತಪ್ಪಿಸಿ ನಾಟಕವಾಡಿದ್ದರು. ಬಳಿಕ ಡ್ರಗ್ಸ್ ಪಡೆದಿರುವ ಬಗ್ಗೆ ಪಾಸಿಟಿವ್ ರಿಪೋರ್ಟ್ ಬಂದ ಬೆನ್ನಲ್ಲೇ ನಟಿಗೆ 2 ಬಾರಿ ಪೊಲೀಸರು ನೋಟಿಸ್ ನೀಡಿದ್ದರು.‌ ಬಳಿಕ ವಿಚಾರಣೆಗೆ ಬಂದ ಹೇಮಾರನ್ನು ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ : ಕಿರುತೆರೆಗೆ ಬರ್ತಿದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ “ಯುವ” – ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶ..!

 

 

Leave a Comment

DG Ad

RELATED LATEST NEWS

Top Headlines

ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಕನ್ನಡ ಮನಸ್ಸುಗಳೆಲ್ಲಾ ಒಂದಾಗಬೇಕು : ಸಚಿವ ಎನ್.ಚಲುವರಾಯಸ್ವಾಮಿ..!

ಬೆಂಗಳೂರು : ಮಂಡ್ಯ ಜಿಲ್ಲೆಯಲ್ಲಿ ಡಿ.20 ರಿಂದ 22ರವರಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಡೆಯಲು ಕನ್ನಡದ ಎಲ್ಲಾ ಮನಸ್ಸುಗಳು

Live Cricket

Add Your Heading Text Here