Download Our App

Follow us

Home » ಅಪರಾಧ » ರೇವ್​​ ಪಾರ್ಟಿ ಪ್ರಕರಣ – ತೆಲುಗು ನಟಿ ಹೇಮಾ ಸೇರಿ 6 ಜನರಿಗೆ ಸಿಸಿಬಿ ನೋಟಿಸ್..!

ರೇವ್​​ ಪಾರ್ಟಿ ಪ್ರಕರಣ – ತೆಲುಗು ನಟಿ ಹೇಮಾ ಸೇರಿ 6 ಜನರಿಗೆ ಸಿಸಿಬಿ ನೋಟಿಸ್..!

ಬೆಂಗಳೂರು : ಬೆಂಗಳೂರಿನ ಜಿ.ಆರ್​.ಫಾರ್ಮ್​ ಹೌಸ್​​​ನಲ್ಲಿ ನಡೆದಿದ್ದ ರೇವ್​ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ನಟಿ ಹೇಮಾ ಸೇರಿ 6 ಜನರಿಗೆ ಸಿಸಿಬಿ ನೋಟಿಸ್​​ ನೀಡಿದೆ. ಸದ್ಯ ಹೈದ್ರಬಾದ್​​ನಲ್ಲಿರುವ ನಟಿಗೆ ಮೇ 27 ರಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೊಲೀಸರು ನೋಟಿಸ್​​​ ನೀಡಿದ್ದಾರೆ.

ಎಲೆಕ್ಟ್ರಾನಿಕ್​ ಸಿಟಿ ಬಳಿಯ ಜಿ.ಆರ್​.ಫಾರ್ಮ್​ ಹೌಸ್​​​ನಲ್ಲಿ ನಡೆದಿದ್ದ ರೇವ್​ ಪಾರ್ಟಿಯಲ್ಲಿ ನಟ- ನಟಿಯರು ಹಾಗೂ ರಾಜಕಾರಣಿಗಳ ಮಕ್ಕಳು ಭಾಗಿಯಾಗಿದ್ದರು. ಈ ವೇಳೆ ಸಿಸಿಬಿ ಪೊಲೀಸರು  ದಾಳಿ ನಡೆಸಿದ್ದು, 100 ಕ್ಕೂ ಹೆಚ್ಚು ಮಂದಿ ಸಿಕ್ಕಿಬಿದಿದ್ದರು. ಇನ್ನು ಈ ಪ್ರಕಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಇಷ್ಟು ಮಾತ್ರವಲ್ಲದೇ ರೇವ್​​ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಜನರ ರಕ್ತದ ಮಾದರಿಯನ್ನು ಟೆಸ್ಟ್​​ ಮಾಡಲಾಗಿದ್ದು, ಅವರಲ್ಲಿ ಕೆಲವು ಮಂದಿ ಡ್ರಗ್ಸ್​​ ಸೇವಿಸಿರುವುದು ದೃಢವಾಗಿದ್ದು, ಹೇಮಾ ಬ್ಲಡ್​​ ರಿಪೋರ್ಟ್​ನಲ್ಲಿ ಡ್ರಗ್ಸ್ ಅಂಶ ಇರುವುದು ​​ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಸಿಸಿಬಿ ನಟಿ ಹೇಮಾ ಸೇರಿ 6 ಜನರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​​ ನೀಡಿದೆ.

ಇದನ್ನೂ ಓದಿ : ಇಂದು ಆರನೇ ಹಂತದ ಚುನಾವಣೆ – ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ ಹಲವು ಗಣ್ಯರಿಂದ ಮತದಾನ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here