Download Our App

Follow us

Home » ಸಿನಿಮಾ » ನಾಳೆಗೆ ನಾವು ಇರ್ತಿವೋ ಇಲ್ಲವೋ ಗೊತ್ತಿಲ್ಲ – ಅಪಘಾತದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಪೋಸ್ಟ್​ ವೈರಲ್​..!

ನಾಳೆಗೆ ನಾವು ಇರ್ತಿವೋ ಇಲ್ಲವೋ ಗೊತ್ತಿಲ್ಲ – ಅಪಘಾತದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಪೋಸ್ಟ್​ ವೈರಲ್​..!

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚಿಗೆ ಹೆಚ್ಚು ಆ್ಯಕ್ಟೀವ್​ ಆಗಿರಲಿಲ್ಲ. ಈ ನಡುವೆ ಸೋಶಿಯಲ್​ ಮೀಡಿಯಾದಲ್ಲಿ ಮತ್ತು ಸಾರ್ವಜನಿಕವಾಗಿ ಅವರು ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಈಗ ಅವರು ತಿಳಿಸಿದ್ದಾರೆ.

‘ಕಳೆದ ತಿಂಗಳು ನನಗೆ ಚಿಕ್ಕ ಅಪಘಾತ ಆಯಿತು. ವೈದ್ಯರ ಸಲಹೆಯಂತೆ ನಾನು ಮನೆಯಲ್ಲೇ ಇದ್ದು ಚೇತರಿಸಿಕೊಂಡೆ. ಈಗ ನಾನು ಚೆನ್ನಾಗಿದ್ದೇನೆ’ ಎಂದು ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು, ‘ನಿಮ್ಮ ಬಗ್ಗೆ ಕಾಳಜಿ ವಹಿಸುವುದೇ ನಿಮ್ಮ ಮೊದಲ ಆದ್ಯತೆ ಆಗಿರಲಿ. ಯಾಕೆಂದರೆ ಜೀವನ ತುಂಬ ಕ್ಷಣಿಕ. ನಾಳೆಗೆ ನಾವು ಇರ್ತಿವೋ ಇಲ್ಲವೋ ಗೊತ್ತಿಲ್ಲ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ನ್ಯಾಷನಲ್​ ಕ್ರಶ್​ ನಟಿ ರಶ್ಮಿಕಾ ಬರೆದುಕೊಂಡಿದ್ದಾರೆ.

ಜೀವನ ಇಷ್ಟು ಕ್ಷಣಿಕ ಆದ್ದರಿಂದ ‘ಪ್ರತಿ ದಿನವೂ ಖುಷಿಯಾಗಿರಿ’ ಎಂದು ರಶ್ಮಿಕಾ ಮಂದಣ್ಣ ಅವರು ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ. ಅಪಘಾತ ಆಗಿದ್ದರೂ ಸದ್ಯಕ್ಕೆ ರಶ್ಮಿಕಾ ಚೇತರಿಸಿಕೊಂಡಿದ್ದು ನೋಡಿ ಫ್ಯಾನ್ಸ್​ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಹಲವು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಅವರು ಬ್ಯುಸಿ ಆಗಿದ್ದಾರೆ. ‘ಪುಷ್ಪ 2’, ‘ಸಿಕಂದರ್​’, ‘ಛಾವ’ ಮುಂತಾದ ಬಹುನಿರೀಕ್ಷಿತ ಸಿನಿಮಾಗಳು ಅವರ ಕೈಯಲ್ಲಿ ಇವೆ. ಹೊಸ ಹೊಸ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

ಇದನ್ನೂ ಓದಿ : 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ನಟ ಜಯಂ ರವಿ – ಕೊನೆಗೂ ನಿಜವಾಯ್ತು ವದಂತಿ..!

Leave a Comment

DG Ad

RELATED LATEST NEWS

Top Headlines

ಕಮಲ್ ಹಾಸನ್ ಅಭಿನಯದ ‘ಥಗ್ ಲೈಫ್’ ಚಿತ್ರದ ರಿಲೀಸ್​ ಡೇಟ್​​ ಅನೌನ್ಸ್..!

ಕಮಲ್ ಹಾಸನ್ ಅಭಿನಯದ ಮತ್ತು ಮಣಿರತ್ನಂ ನಿರ್ದೇಶನದ ‘ಥಗ್ ಲೈಫ್’ ಚಿತ್ರ ವಿಶ್ವದಾದ್ಯಂತ 2025ರ ಜೂನ್ 5ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಇಂದು ಕಮಲ್ ಹಾಸನ್ ಅವರ ಹುಟ್ಟುಹಬ್ಬದ

Live Cricket

Add Your Heading Text Here