Download Our App

Follow us

Home » ರಾಜಕೀಯ » ರೇಪ್ ಕೇಸ್ : ಪರಪ್ಪನ ಅಗ್ರಹಾರದಿಂದ MLA ಮುನಿರತ್ನರನ್ನ ವಶಕ್ಕೆ ಪಡೆದ ಎಸ್ಐಟಿ..!

ರೇಪ್ ಕೇಸ್ : ಪರಪ್ಪನ ಅಗ್ರಹಾರದಿಂದ MLA ಮುನಿರತ್ನರನ್ನ ವಶಕ್ಕೆ ಪಡೆದ ಎಸ್ಐಟಿ..!

ಬೆಂಗಳೂರು : ಅತ್ಯಾಚಾರ ಆರೋಪ ಪ್ರಕರಣ ಎದುರಿಸುತ್ತಿರುವ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನರನ್ನ ನಿನ್ನೆ SIT ಕಸ್ಟಡಿಗೆ ಪಡೆದಿದೆ. ಹೌದು, ಅಕ್ಟೋಬರ್​ 5ರವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ಕೋರ್ಟ್ ಆದೇಶಿಸಿದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಿಂದ ಮುನಿರತ್ನರನ್ನ SIT ವಶಕ್ಕೆ ಪಡೆದು ಸಿಐಡಿ ಕಚೇರಿಗೆ ಕರೆದುಕೊಂಡು ಬಂದಿದೆ. ಇಂದಿನಿಂದ ಅಕ್ಟೋಬರ್ 5ರವರೆಗೂ ಶಾಸಕ ಮುನಿರತ್ನಗೆ ಸಿಐಡಿ ಕಚೇರಿಯಲ್ಲಿ ದಾಖಲಾದ ಪ್ರಕರಣದ ಕುರಿತು ವಿಚಾರಣೆ ನಡೆಯಲಿದೆ.

ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್​ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ದ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಮುನಿರತ್ನ ಅವರನ್ನು ಕಳೆದ ಶುಕ್ರವಾರ ಬೆಳಿಗ್ಗೆ ಬಂಧಿಸಲಾಗಿದ್ದು, ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಇದರ ಬೆನ್ನಲ್ಲೆ ಹೆಚ್ಚಿನ ತನಿಖೆಗಾಗಿ ನಿನ್ನೆ ಅವರನ್ನು ಎಸ್ಐಟಿ ಕಸ್ಟಡಿಗೆ ನೀಡಿ ಕೋರ್ಟ್​ ಆದೇಶಿಸಿದೆ.

ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಕಿದ, ಜಾತಿ ನಿಂದನೆ ಹಾಗೂ ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಒಂದೊಂದೇ ವಿಚಾರಗಳು ಬೆಳಕಿಗೆ ಬರುತ್ತಿದೆ. ಅದರಂತೆ ಮುನಿರತ್ನ ಬಳಿ ಹಲವಾರು ಖಾಸಗಿ ಅಶ್ಲೀಲ ವಿಡಿಯೋಗಳಿವೆ. ರಾಜಕೀಯ ಎದುರಾಳಿಗಳನ್ನು ಹಣಿಯಲು ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ಹೂಡುತ್ತಿದ್ದರು ಎಂಬ ಗಂಭೀರ ಆರೋಪಗಳು ಕೂಡ ಕೇಳಿಬಂದಿದ್ದು, ಈ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ದೊಡ್ಡಬಳ್ಳಾಪುರದಲ್ಲಿ ಆಕ್ರಮವಾಗಿ ಗಾಂಜಾ ಬೆಳೆದು ಮಾರಾಟ ಮಾಡಿದ ವ್ಯಕ್ತಿ ಅರೆಸ್ಟ್​​..!

Leave a Comment

DG Ad

RELATED LATEST NEWS

Top Headlines

ತಾಯಿಗೆ ಮರು ಪ್ರೀತಿ, ಹೊಸ ಜೀವನ.. ಹೆತ್ತಮ್ಮನಿಗೇ 2ನೇ ಮದುವೆ ಮಾಡಿಸಿದ ಪುತ್ರ..!

ಪತಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ತಾಯಿಗೆ ಮಗನೇ ಮುಂದೆ ನಿಂತು ಮದುವೆ ಮಾಡಿಸಿದ ಅಚ್ಚರಿಯ ಘಟನೆಯೊಂದು ನಡೆದಿದೆ. 18 ವರ್ಷ ತಾಯಿ ಜೊತೆಗಿದ್ದ ಮಗ ಅಬ್ದುಲ್ ಅಹಾದ್ ಬಹಳ

Live Cricket

Add Your Heading Text Here