ಬೆಳಕಿನ ಹಬ್ಬ ದೀಪಾವಳಿ ದಿನ ಬಾಲಿವುಡ್ ತಾರೆಯರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ತಮ್ಮ ಮಗಳ ಮೊದಲ ಫೋಟೋ ಶೇರ್ ಮಾಡಿ ಹೆಸರನ್ನು ರಿವೀಲ್ ಮಾಡಿದ್ದಾರೆ.
ಸೆಪ್ಟೆಂಬರ್ 9 ರಂದು ದೀಪಿಕಾ ಪಡುಕೋಣೆ ಮುದ್ದಾದ ಮಗಳಿಗೆ ಜನ್ಮ ನೀಡಿದ್ದರು. ಈ ಖುಷಿ ವಿಚಾರವನ್ನು ದೀಪಿಕಾ ಪಡುಕೋಣೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದ್ರೆ, ಮಗಳ ಪೋಟೋವನ್ನು ದೀಪಿಕಾ ದಂಪತಿ ಎಲ್ಲೂ ಹಂಚಿಕೊಂಡಿರಲಿಲ್ಲ. ಇದೀಗ ದೀಪಿಕಾ-ರಣವೀರ್ ಮಗಳಿಗೆ ‘ದುವಾ ಪಡುಕೋಣೆ ಸಿಂಗ್’ ಎಂದು ಚೆಂದದ ಹೆಸರಿಟ್ಟಿದ್ದಾರೆ. ಮಗಳ ಪುಟಾಣಿ ಕಾಲಿನ ಫೋಟೋ ಹಂಚಿಕೊಂಡ ದೀಪಿಕಾ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ.
ಇನ್ನು ದಂಪತಿ ಮಗಳ ಹೆಸರಿನ ಅರ್ಥವನ್ನು ಕೂಡ ವಿವರಿಸಿದ್ದಾರೆ. ‘ದುವಾ’ ಅಂದ್ರೆ ಪ್ರಾರ್ಥನೆ ಎಂದರ್ಥ. ಏಕೆಂದರೆ ಅವಳು ನಮ್ಮ ಪ್ರಾರ್ಥನೆಗಳಿಗೆ ಉತ್ತರವಾಗಿದ್ದಾಳೆ. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ. ‘ದೀಪಿಕಾ ಮತ್ತು ರಣವೀರ್” ಎಂದು ಅವರು ಬರೆದುಕೊಂಡಿದ್ದಾರೆ.
ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು 83 ನಂತಹ ಚಿತ್ರಗಳಲ್ಲಿ ಸಹ-ನಟರಾಗಿರುವ ಇವರಿಬ್ಬರು, ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು.
ಇದನ್ನೂ ಓದಿ : ಲಾಯರ್ ಜಗದೀಶ್ ಮಾತಿಗೆ ನಾಚಿ ನೀರಾದ ರಕ್ಷಿತಾ ಪ್ರೇಮ್.. ‘ನಾಟಿ ಎಟ್ 40 ಸರ್ ನೀವು’ ಎಂದ ಕ್ರೇಜಿ ಕ್ವೀನ್..!