Download Our App

Follow us

Home » ಸಿನಿಮಾ » ಬಿಗ್​ಬಾಸ್ ಮನೆಗೆ​ ವೈಲ್ಡ್​ಕಾರ್ಡ್ ಎಂಟ್ರಿ ಕೊಡ್ತಾರಾ ರಂಜಿತ್​.. ಈ ಬಗ್ಗೆ ಹೇಳಿದ್ದೇನು?

ಬಿಗ್​ಬಾಸ್ ಮನೆಗೆ​ ವೈಲ್ಡ್​ಕಾರ್ಡ್ ಎಂಟ್ರಿ ಕೊಡ್ತಾರಾ ರಂಜಿತ್​.. ಈ ಬಗ್ಗೆ ಹೇಳಿದ್ದೇನು?

ಈ ಹಿಂದಿನ ಸೀಸನ್​ಗಳಿಗಿಂತಲೂ ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಹೆಚ್ಚು ವಿವಾದಕ್ಕೆ ಕಾರಣವಾಗಿತ್ತು. ಹೆಣ್ಣು ಮಕ್ಕಳ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ ಜಗದೀಶ್ ಅವರನ್ನು ಮನೆಯಿಂದ ಹೊರಗಡೆ ಕಳುಹಿಸಲಾಗಿತ್ತು. ಇದರೊಂದಿಗೆ ಜಗದೀಶ್ ಅವರನ್ನು ತಳ್ಳಿದ್ದಕ್ಕೆ ರಂಜಿತ್ ಕೂಡ ಮನೆಯಿಂದ ಎಲಿಮಿನೇಟ್ ಆಗಿದ್ದರು. ದೊಡ್ಮನೆಯಿಂದ ರಂಜಿತ್‌ ಹೊರ ಬಂದ ನಂತರ ಮತ್ತೆ ಬಿಗ್​ ಬಾಸ್‌ ಮನೆಗೆ ಮರಳಿ ಹೋಗ್ತಾರಾ ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದೀಗ ಈ ಬಗ್ಗೆ ಬಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಂಜಿತ್ ಅವರು, ಕನಸು ಎಲ್ಲರೂ ಇರುತ್ತೆ. ಎಲ್ಲರೂ ಅವರ ಪ್ರೋಫೆಷನ್​​ ಅಂತ ಬಂದಾಗ , ದೊಡ್ಡ ಆಫೀಸರ್​​ ಆಗ್ಬೇಕು, ನಾನ್​​ ದೊಡ್ಡ ಪೈಲೆಟ್​​ ಆಗ್ಬೇಕು ಹೀಗೆ ಅನೇಕ ಕನಸುಗಳು ಇರುತ್ತೆ.

ಇವಾಗ ನಾನೂ ಕೂಡ ಏರ್ಲೈನ್ಸ್​​​​​ ಇಂಡಸ್ಟ್ರಿಯಲ್ಲಿ ಇದ್ದವನು. ಆದ್ರಿಂದ ಹೊರಗಡೆ ಬಂದ ನಂತ್ರ, ಸಿನಿಮಾವನ್ನು ಒಂದು ಪಾರ್ಟ್​ ಟೈಮ್​​, ಫ್ಯಾಷನೇಟ್​​ ಆಗಿ ತೆಗೆದುಕೊಂಡೆ. ನಂತರ ಫುಲ್​​ ಟೈಮ್ ಆಗಿ ತೆಗೆದುಕೊಂಡಾಗ ಅಲ್ಲಿ ಎಲ್ಲ ಕಷ್ಟಗಳನ್ನು ನೋಡಿರ್ತಿವಿ.​​ ಒಂದು ಶೋ ಅಂತ ಬಂದಾಗ ಆವಾಗ್ಲೇ ಒಂದು ಆಸೆ ಬರೋದು, ಯಾಕಂದ್ರೆ ಹಿಂದಿಯಲ್ಲಿ ಬರ್ತಾ ಇತ್ತು. ಈಗ ಕನ್ನಡದಲ್ಲಿ ಬರ್ತಾ ಇದೆ. ನಮಗೂ ಒಂದು ಚಾನ್ಸ್ ಸಿಗುತ್ತೇನೋ ಅಂತ ಅನ್ಕೊಂಡಿದ್ದೆ.

ಇನ್ನು ನನ್ನ ತಾಯಿ ಕೂಡ 5-6 ಸೀಸನ್​​ ಬರ್ಬೆಕಾದ್ರೆ ಹೇಳ್ತಾ ಇರ್ದು, ಎಲ್ಲರೂ ಬಿಗ್​​ ಮನೆಗೆ ಹೋಗ್ತಾ ಇದ್ದಾರೆ. ನಿನ್ಗೆ ಯಾಕೆ ಹೋಗೋಕೆ ಆಗ್ತಾ ಇಲ್ಲಾ ಅಂತ. ಆಗ ನಾನು ಹೇತ್ತಿದ್ದೆ. ನನ್ಗೂ ಒಂದು ಟೈಮ್​​ ಬರುತ್ತೆ. ಅಲ್ಲಿವರೆಗೂ ಬಾನು ಕಾಯ್ಬೇಕು ಅಂತ.

ಇವಾಗ 11ನೇ ಸೀಸನ್​​​ಗೆ ನನ್ಗೆ ಟೈಮ್​​ ಬಂದಾಗ ಅದೂ ಯುಟೈಲೇಜ್​​​ ಅಂತ ಆಗುತ್ತಿತ್ತು. ಆದ್ರೆ 15 ದಿವಸದಲ್ಲಿ ಏನೂ ಪ್ರೀತಿ ವಿಶ್ವಾಸ ಗಳಿಸಿದ್ದೆನ್ನಲ್ಲ ಅದು ಖುಷಿ ಇದ್ರು, ಅದನ್ನು ಕಾಂಪ್ಲೀಟ್​​ ​​ ಮಾಡೋಕೆ ಆಗಿಲ್ಲ ಅಂತ ಬೇಜಾರ್​​ ಇದ್ದೇ ಇದೆ.

ಬಿಗ್​​ ಬಾಸ್​​ ಮನೆಯಲ್ಲಿ ನಾನು ಒಂದು ವಿನ್ನಿಂಗ್​​ ಕ್ಯಾಂಡಿಡೇಟ್​​​​ ಆಗಿ ನಿಂತು ಕೊಂಡಿದ್ದವನು. ಪ್ರತಿ ಟಾಸ್ಕ್​​ನಲ್ಲಿ ವಿನ್​​ ಆಗುತ್ತಿದ್ದೆ. ಎಲ್ಲೂ ನಾಮಿನೇಟ್ ಆಗ್ತಿರ್ಲಿಲ್ಲ.​​ ಇನ್ನೂ ಮೂರನೇ ವಿಕ್​​​​ನಲ್ಲಿ ನನ್ನ ಗೇಮ್​​ ಸ್ಟಾರ್ಟ್​ ಆಗಿತ್ತು ಅಷ್ಟೇ. ಅದು ಬಂದು ಬೇಜಾರಿದೆ ಕಾಂಪ್ಲಿಟ್​​ ಆಗಿಲ್ಲ ಅಂತ. ಮುಂದೆ ಗೊತ್ತಲ್ಲ ಏನು ಅಂತ. ಮತ್ತೆ ಬಿಗ್​​ ಬಾಸ್​​ಗೆ ಎಂಟ್ರಿ ಕೊಟ್ರೆ, ಹೋಗ್ಬೇಕು ಅಂತನೂ ಒಂದು ಆಸೆ ಇದೆ. ಹೋದ್ರೆ ಬೆಸ್ಟ್​​ ಕೊಡ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್​​ಗೆ ಸೇರ್ಪಡೆಯಾದ ಸಿ.ಪಿ ಯೋಗೇಶ್ವರ್ – ‘ಕೈ’​ಗೆ ಸೈನಿಕನ ಕಂಡೀಷನ್​ ಏನೇನು..?

Leave a Comment

DG Ad

RELATED LATEST NEWS

Top Headlines

ಕಾಂಗ್ರೆಸ್​ ಸೇರಿದ ಯೋಗೇಶ್ವರ್​​ ಅಭ್ಯರ್ಥಿ ಆಗೋದು ಫಿಕ್ಸ್​.. ಡಿಕೆಶಿ ಚೆಕ್​ಮೇಟ್​ಗೆ ಹೆಚ್​ಡಿಕೆ ರಣತಂತ್ರ ಏನು..?

ಬೆಂಗಳೂರು : ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್​​ ಸಮ್ಮುಖದಲ್ಲಿ ಸಿ.ಪಿ.ಯೋಗೇಶ್ವರ್​ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿದರು. ಈ ಮೂಲಕ

Live Cricket

Add Your Heading Text Here