ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣದ ತನಿಖೆ ನಡೆಸಿ ರಾಷ್ಟ್ರೀಯ ತನಿಖಾ ದಳ (NIA) ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದು, ದೋಷಾರೋಪ ಪಟ್ಟಯಿಂದ ಇದೀಗ ಮತ್ತೊಂದು ಸ್ಪೋಟಕ ವಿಚಾರ ಬಯಲಾಗಿದೆ.
ಸ್ಪೋಟ ಪ್ರಕರಣದಲ್ಲಿ ಒಟ್ಟು ಆರು ಜನರ ಕೈವಾಡವಿದ್ದು, ಇವರು ISIS ಜೊತೆ ನಂಟು ಹೊಂದಿದ್ದಾರೆ ಎಂದು ತಿಳಿದುಬಂದಿತ್ತು. ಇದೀಗ, IED ಬಾಂಬ್ ಸ್ಪೋಟಗೊಳಿಸಲು ಯಾರಿಗೆಲ್ಲ ತರಬೇತಿ ನೀಡಲಾಗಿತ್ತು? IED ಬಾಂಬ್ ತಯಾರಿಕೆಗೆ ಎಷ್ಟು ದಿನಗಳ ಟ್ರೈನಿಂಗ್ ನೀಡಲಾಗಿತ್ತು? ಎಂಬೆಲ್ಲ ವಿಚಾರ ಹೊರಬಿದ್ದಿದೆ.
ಪ್ರಕರಣದ ಆರೋಪಿಗಳಾದ ಅಬ್ದುಲ್ ಮತೀನ್ ತಾಹ, ಮುಸಾವೀರ್ ಹುಸೇನ್, ಶಾರಿಕ್, ಅರಾಫತ್ ಅಲಿ, ಮಾಜ್ ಮುನೀರ್ ಹಾಗೂ ಮುಜಾಮಿಲ್ ಷರೀಫ್ ಐಸಿಸ್ ಜೊತೆ ನಂಟು ಇಟ್ಟುಕೊಂಡಿದ್ದರು. ಈ ಆರು ಜನ ಉಗ್ರರ ಪೈಕಿ ನಾಲ್ವರಿಗೆ ISIS ಬಾಂಬ್ ತಯಾರಿಕೆಯ ತರಬೇತಿ ನೀಡಿದೆ. ಆನ್ಲೈನ್ ಮೂಲಕ ಅಬ್ದುಲ್ ಮತೀನ್ ತಾಹ, ಮುಸಾವೀರ್, ಶಾರಿಕ್ ಹಾಗೂ ಮಾಜ್ ಮುನೀರ್ ಬಾಂಬ್ ತಯಾರಿಸುವ ತರಬೇತಿ ಪಡೆದಿದ್ದಾರೆ.
ಇವರುಗಳು ಕೇವಲ ಒಂದು ವಾರದಲ್ಲೇ ಸಂಪೂರ್ಣ ತರಬೇತಿ ಪಡೆದಿದ್ದು, ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನು ಆನ್ಲೈನ್ ಮೂಲಕ ಖರೀದಿಸಿ ಒಂದು ವಾರದಲ್ಲಿ ಬಾಂಬ್ ತಯಾರಿಸಿದ್ದರು. ಮಂಗಳೂರು ಕುಕ್ಕರ್ ಬಾಂಬ್, ಬಿಜೆಪಿ ಕಚೇರಿ ಬಳಿ ಇಟ್ಟಿದ್ದ ಬಾಂಬ್, ರಾಮೇಶ್ವರಂ ಕೆಫೆಯಲ್ಲಿ ಇಟ್ಟಿದ್ದ ಬಾಂಬ್ಗಳನ್ನು ಕೇವಲ ಒಂದು ವಾರದಲ್ಲಿ ತಯಾರಿಸಿದ್ದರು ಎಂದು ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಬಾಂಬ್ ಎಲ್ಲಿ ಇಡಬೇಕು ಅಂತ ಫ್ಲಾನ್ ಫೈನಲ್ ಆದ ಮೇಲೆ, ಬಾಂಬ್ ತಯಾರಿಕೆಗೆ ಮುಂದಾಗುತ್ತಿದ್ದರು. ಈ ನಾಲ್ವರು ತಯಾರು ಮಾಡುವ ಬಾಂಬ್ಗಳಿಗೆ 90 ನಿಮಿಷಗಳ ಟ್ರೈಮರ್ ಇಡುತ್ತಿದ್ದರು. ಮಂಗಳೂರು, ಬಿಜೆಪಿ ಕಚೇರಿ ಹಾಗೂ ರಾಮೇಶ್ವರಂ ಕೆಫೆ ಈ ಮೂರು ಕಡೆಗಳಲ್ಲಿ 90 ನಿಮಿಷಗಳ ಟ್ರೈಮರ್ ಸೆಟ್ ಮಾಡಿದ್ದರು. ಆದರೆ, ಎರಡು ಕಡೆ ಇಟ್ಟಿದ್ದ ಬಾಂಬ್ ಫೇಲ್ ಆಗಿದ್ದು, ರಾಮೇಶ್ವರಂ ಕೆಫೆ ಮಾತ್ರ ಸಕ್ಸಸ್ ಆಗಿತ್ತು. ಈ ಎಲ್ಲ ಅಂಶಗಳು ದೋಷಾರೋಪ ಪಟ್ಟಿಯಲ್ಲಿ ಎನ್ಐಎ ಉಲ್ಲೇಖ ಮಾಡಿದೆ.
ಇದನ್ನೂ ಓದಿ : ಇಂದಿನಿಂದ ಬೆಳ್ಳಿತೆರೆ ಮೇಲೆ ‘ಭೈರತಿ ರಣಗಲ್’ ಅಬ್ಬರ.. ಶಿವಣ್ಣನ ಖಡಕ್ ಅವತಾರ ಕಂಡು ಹುಚ್ಚೆದ್ದು ಕುಣಿದ ಫ್ಯಾನ್ಸ್..!