ಬೆಂಗಳೂರು : ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಶಂಕಿತ ಉಗ್ರ ಮುಸಾವಿರ್ ಹುಸೇನ್ ಶಾಜಿಬ್ ನನ್ನು NIA ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಉಗ್ರ ಮುಸಾವಿರ್ ಹುಸೇನ್ ಶಾಜಿಬ್ ಜೊತೆ ಮತ್ತೊಬ್ಬ ಉಗ್ರನ ಬಂಧನ ಆಗಿದೆ ಎನ್ನಲಾಗಿದೆ. NIA ತಂಡದಿಂದ ಕಾರ್ಯಾಚರಣೆ ನಡೆಸಿ ಇಬ್ಬರು ಶಂಕಿತ ಉಗ್ರರನ್ನು ಬಂಧನ ಮಾಡಲಾಗಿದೆ.
ಶಂಕಿತ ಉಗ್ರರು ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಕಡೆ ತಲೆಮರೆಸಿಕೊಂಡು ಓಡಾಡುತ್ತಿದ್ದರು ಎನ್ನಲಾಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್ಐಎ ತಂಡ ಶಂಕಿತ ಉಗ್ರರನ್ನು ಬಂಧನ ಮಾಡಿದೆ.
ಮಾರ್ಚ್ 1ರಂದು ಕೆಫೆ ಬಾಂಬ್ ಸ್ಫೋಟ ನಡೆದಿತ್ತು. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮುಜಾವಿರ್ ಹುಸೇನ್ ನ್ನು ತನಿಖೆ ವೇಳೆ ಸಿಕ್ಕ ಮಾಹಿತಿ ಆಧರಿಸಿ ಅರೆಸ್ಟ್ ಮಾಡಿರುವ ಮಾಹಿತಿ ಲಭ್ಯವಾಗಿದೆ. ಶಂಕಿತ ಉಗ್ರರನ್ನು ಅರೆಸ್ಟ್ ಮಾಡಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಮುಜಾವಿರ್ ಜೊತೆ ಮತೀನ್ ತಾಹ ಬಂಧಿಸಿದ್ದು, ಇಬ್ಬರು ಶಂಕಿತರನ್ನೂ ರಹಸ್ಯ ಸ್ಥಳದಲ್ಲಿಟ್ಟು ವಿಚಾರಣೆ ನಡೆಸುತ್ತಿದ್ದಾರೆ. ಅಬ್ದುಲ್ ಮತೀನ್ ತಾಹ ಸ್ಫೋಟಕ್ಕೆ ಸಹಕರಿಸಿದ ಆರೋಪ ಕೇಳಿಬಂದಿದೆ. ಶಂಕಿತ ಉಗ್ರರು ಬೇರೆ-ಬೇರೆ ಮಾರ್ಗಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಹೋಗಿದ್ದು, NIA ತಂಡ ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ಶೋಧ ನಡೆಸಿದೆ.
NIA ಟೀಂ ನಿನ್ನೆ ರಾತ್ರಿ ಪಶ್ಚಿಮ ಬಂಗಾಳದಲ್ಲಿ ದಾಳಿ ಮಾಡಿದ್ದು, ಮನೆಯೊಂದರಲ್ಲಿ ಅಡಗಿದ್ದ ಮುಜಾವಿರ್ ಹುಸೇನ್ ಮತ್ತು ತಾಹ ನನ್ನು NIA ವಶಕ್ಕೆ ಪಡೆದಿದೆ.
ಇದನ್ನೂ ಓದಿ : ಮೈಸೂರು, ಚಾಮರಾಜನಗರ ಗೆಲ್ಲಲು ಸಿಎಂ ಸಿದ್ದು ವಿಶ್ವಪ್ರಯತ್ನ – ಇಂದು ಮತ್ತೆ ಎರಡೂ ಕ್ಷೇತ್ರಗಳಿಗೆ ಭೇಟಿ..!