ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿ ಪ್ರಮುಖ ಇಬ್ಬರು ಆರೋಪಿಗಳನ್ನು ಕಡೆಗೂ ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿಸಿದ ಆರೋಪಿಗಳಾದ ಮುಸಾವಿರ್ ಹುಸೇನ್ ಮತ್ತು ಅಬ್ದುಲ್ ಮತೀನ್ ತಾಹಮನನ್ನು ಮಿಡ್ನಾಪುರದ ನ್ಯೂ ದಿಗಾ ಪ್ರದೇಶದ ಲಾಡ್ಜ್ನಲ್ಲಿ ಬಂಧಿಸಿದ NIA ಅಧಿಕಾರಿಗಳು ಮಿಡ್ನೈಟ್ನಲ್ಲೇ ಕೋಲ್ಕತ್ತಾದಿಂದ ಬೆಂಗಳೂರಿಗೆ ಕರೆತಂದು ಇಂದು ಬೆಳಗ್ಗೆ ಕೋರ್ಟ್ ಮುಂದೆ ಹಾಜರು ಪಡೆಸಿದ್ದಾರೆ.
ಬಾಂಬರ್ಸ್ಗಳನ್ನು ಮಡಿವಾಳದ FSL ಸೆಂಟರ್ನಿಂದ ಬಿಗಿ ಭದ್ರತೆಯಲ್ಲಿ ಕೋರಮಂಗಲದ ಜಡ್ಜ್ ನಿವಾಸಕ್ಕೆ ಕರೆದೊಯ್ಯಲಾಗಿತ್ತು. ಬಳಿಕ ಎನ್ಐಎ ಅಧಿಕಾರಿಗಳು ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರು ಪಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಮತ್ತು ಸ್ಥಳ ಮಹಜರು ಮಾಡಲು ಬಾಂಬರ್ಸ್ಗಳನ್ನು ಎನ್ಐಎ ವಶಕ್ಕೆ ನೀಡುವಂತೆ ಕೇಳಿಕೊಂಡಿತ್ತು.
ಹೀಗಾಗಿ, ರಾಮೇಶ್ವರ ಕೆಫೆ ಬಾಂಬರ್ಸ್ಗಳನ್ನು 10 ದಿನಗಳ ಕಾಲ ಎನ್ಐಎ ಕಸ್ಟಡಿಗೆ ನೀಡಿ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ. ಏಪ್ರಿಲ್ 22ರವರೆಗೂ ಮುಸಾವಿರ್ ಶಾಜೀಬ್ ಮತ್ತು ಅಬ್ದುಲ್ ಮತೀನ್ ತಾಹನನ್ನು ನ್ಯಾಯಾಧೀಶರು NIA ಕಸ್ಟಡಿಗೆ ನೀಡಿದ್ದಾರೆ.
ಇನ್ನು ಮೈಸೂರಿನಲ್ಲಿ ಕೆಫೆ ಬಾಂಬರ್ಗಳ ಅರೆಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಅವರು, ಎನ್ಐಎ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಬಂಧಿತರ ವಿಚಾರಣೆ ಮಾಡಿ ಎಲ್ಲವನ್ನೂ ಬಾಯ್ ಬಿಡಿಸಲಿ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಬೈಕ್ಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ : ಡಿಕ್ಕಿಯ ರಭಸಕ್ಕೆ ಫ್ಲೈ ಓವರ್ ಮೇಲಿನಿಂದ ಕೆಳಗೆ ಬಿದ್ದು ಸವಾರ ಸಾ*ವು..!