Download Our App

Follow us

Home » ಅಪರಾಧ » ರಾಮೇಶ್ವರಂ ಕೆಫೆ ಬಾಂಬರ್​ಗಳ ಮೊದಲ ದೃಶ್ಯ : NIAಗೆ ಲಾಕ್ ಆಗಿದ್ದೇಗೆ ಶಂಕಿತ ಉಗ್ರರು..!

ರಾಮೇಶ್ವರಂ ಕೆಫೆ ಬಾಂಬರ್​ಗಳ ಮೊದಲ ದೃಶ್ಯ : NIAಗೆ ಲಾಕ್ ಆಗಿದ್ದೇಗೆ ಶಂಕಿತ ಉಗ್ರರು..!

ಬೆಂಗಳೂರು : ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ಶಂಕಿತ ಬಾಂಬರ್​​ಗಳನ್ನು NIA ಅಧಿಕಾರಿಗಳು ಅರೆಸ್ಟ್ ಮಾಡಿದ್ದು, ಇದೀಗ ಕೆಫೆ ಬಾಂಬರ್​ಗಳ ಮೊದಲ ದೃಶ್ಯ ಲಭ್ಯವಾಗಿದೆ. ಮೆಡಿಕಲ್​ ತಪಾಸಣೆ ಬಳಿಕ ಶಂಕಿತ ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ.

NIA ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಶಂಕಿತ ಬಾಂಬರ್​​ಗಳನ್ನು ಅರೆಸ್ಟ್ ಮಾಡಿದ್ದಾರೆ. NIA ಅಧಿಕಾರಿಗಳು ಮುಸ್ಸಾವೀರ್ ಮತ್ತು ಅಬ್ದುಲ್ ಮತೀನ್​​ನ್ನು ಕೊಲ್ಕತ್ತಾದಲ್ಲಿ ಬಂಧಿಸಿದ್ದು, ಸಂಜೆ ಬೆಂಗಳೂರಿಗೆ ಕರೆತರಲಿದ್ದಾರೆ.

 

ಬಂಧಿತರ ಸುಳಿವು ಕೊಟ್ಟಿದ್ದೇ ಮಹಾರಾಷ್ಟ್ರದ ಆ ಒಂದು ರೇಡ್​..?

ಮೂರು ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಎನ್​ಐಎ ದಾಳಿ ನಡೆಸಿತ್ತು. ಎನ್​ಐಎ ಜೊತೆಗೆ ದೆಹಲಿ ಪೊಲೀಸರು ಮೂವರನ್ನು ಹೆಡೆಮುರಿ ಕಟ್ಟಿದ್ರು. ಮೂವರು ಯುವಕರ ಬಳಿ ಇದ್ದ ಲ್ಯಾಪ್​ಟಾಪ್​, ಮೊಬೈಲ್​ಗಳು ವಶಕ್ಕೆ ಪಡೆದಿದ್ದರು. ಈ ವೇಳೆ ರಾಮೇಶ್ವರಂ ಕೆಫೆ ಬಾಂಬರ್ ಕುರಿತು ಮಹತ್ವದ ಸುಳಿವು ಸಿಕ್ಕಿದೆ. ಬಾಂಬರ್​ ಜೊತೆ ಕ್ರಿಪ್ಟೋ ಕರೆನ್ಸಿ ಮೂಲಕ ಯುವಕರಿಗೆ ಲಿಂಕ್​ ಇರೋದು ತಿಳಿದುಬಂದಿದೆ.

ಕಳೆದ ಎರಡು ವರ್ಷಗಳಿಂದ ಬಾಂಬರ್​ ಜೊತೆ ಯುವಕರಿಗೆ ಲಿಂಕ್​ ಇದ್ದು, ಕೆಲಸವಿಲ್ಲದಿದ್ದರೂ ಯುವಕರು ಐಷಾರಾಮಿ ಜೀವನ ನಡೆಸುತ್ತಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದ ಕುರಿತು ಎನ್​ಐಎಗೆ ಮಾಹಿತಿ ಲಭ್ಯವಾಗಿತ್ತು. ಈ ಆಧಾರದ ಮೇಲೆ ಎನ್​ಐಎ ತಂಡ ಮೂವರನ್ನು ವಿಚಾರಣೆ ನಡೆಸಿತ್ತು. ಎನ್​ಐಎ ಜೊತೆಗೆ ದೆಹಲಿ ಪೊಲೀಸರಿಂದ ಸುಮಾರು 8 ಗಂಟೆ ತನಿಖೆ ನಡೆಸಿದ್ದು,
ಇದಾದ ಬಳಿಕ ಕೆಫೆ ಬಾಂಬರ್​ ಜಾಗದ ಕುರಿತು ಸುಳಿವು ಸಿಕ್ಕಿತ್ತು. ಈ ರೇಡ್ ಆಧಾರದ ಮೇಲೆ ಕೋಲ್ಕತ್ತಾದಲ್ಲಿ ಭೂಗತವಾಗಿದ್ದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ : ಫೋನ್ ಪೇ, ಗೂಗಲ್ ಪೇನಲ್ಲಿ ಹಣ ವರ್ಗಾವಣೆ ಮಾಡೋರು ಹುಷಾರ್ : ಆನ್​​ಲೈನ್ ಪೇಮೆಂಟ್ ಮೇಲೆ ಚುನಾವಣಾ ಅಧಿಕಾರಿಗಳ ಕಣ್ಣು..!

Leave a Comment

DG Ad

RELATED LATEST NEWS

Top Headlines

ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ವಿಧಿವಶ..!

ನವದೆಹಲಿ : ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ನಿಧನರಾಗಿದ್ದಾರೆ. 92 ವರ್ಷದ ಮನಮೋಹನ್ ಸಿಂಗ್ ಅವರು ದೆಹಲಿಯ ಏಮ್ಸ್‌ ಆಸ್ಪತ್ರೆಯ್ಲಲಿ ಇಂದು ಕೊನೆಯುಸಿರೆಳೆದಿದ್ದಾರೆ. ರಾತ್ರಿ 8

Live Cricket

Add Your Heading Text Here