Download Our App

Follow us

Home » ಅಪರಾಧ » ರಾಮೇಶ್ವರಂ ಕೆಫೆ ಸ್ಫೋಟ : ಶಂಕಿತ ವ್ಯಕ್ತಿ ಬಸ್​​ನಿಂದ​ ಇಳಿದು ಹೋಗುವ ವಿಡಿಯೋ ಲಭ್ಯ..!

ರಾಮೇಶ್ವರಂ ಕೆಫೆ ಸ್ಫೋಟ : ಶಂಕಿತ ವ್ಯಕ್ತಿ ಬಸ್​​ನಿಂದ​ ಇಳಿದು ಹೋಗುವ ವಿಡಿಯೋ ಲಭ್ಯ..!

ಬೆಂಗಳೂರು : ರಾಮೇಶ್ವರಂ ಕೆಫೆ ಸ್ಫೋಟಕ ಪ್ರಕರಣದ ಮತ್ತೊಂದು ವಿಡಿಯೋ ಲಭ್ಯವಾಗಿದೆ. 2 ದಿನಗಳ ಹಿಂದೆ ಕುಂದಲಹಳ್ಳಿ ಮುಖ್ಯರಸ್ತೆ, ಕೆಫೆ ಒಳಗಿನ ದೃಶ್ಯ ಸಿಕ್ಕಿದ್ದವು, ಇದೀಗ ಶಂಕಿತ ವ್ಯಕ್ತಿ ಕೆಫೆ ಸಮೀಪದ ಬಸ್​ ನಿಲ್ದಾಣದಲ್ಲಿ ಬಸ್​​ನಿಂದ​ ಇಳಿಯುವ ದೃಶ್ಯ ಪತ್ತೆಯಾಗಿದೆ.

ಶಂಕಿತ BMTC ಬಸ್ ಇಳಿದು ನೇರವಾಗಿ ಕೆಫೆ ಕಡೆಗೆ ಮುಖ ಮಾಡಿ ಹೊರಟಿದ್ದ. BMTC ಬಸ್​ನಲ್ಲಿ ಶಂಕಿತ ವ್ಯಕ್ತಿ ಬಂದಿರುವ ಮಾಹಿತಿ ಇತ್ತು. ತಲೆಗೆ ಕ್ಯಾಪ್​​​, ಬೆನ್ನಿನ ಮೇಲೆ ಕಪ್ಪು ಬ್ಯಾಗ್​​​​ ಈ ದೃಶ್ಯದಲ್ಲೂ ಪತ್ತೆಯಾಗಿದೆ. ಬಸ್ ಇಳಿದ ಸ್ಥಳದ ಮಾರ್ಗ ಐಟಿಪಿಎಲ್ ಕಡೆಯಿಂದ ಬರುವ ಮಾರ್ಗವಾಗಿದೆ. ಹಾಗಾಗಿ ಐಟಿಪಿಎಲ್ ಕಡೆಯಿಂದ ಶಂಕಿತ ಬಸ್​​ನಲ್ಲಿ ಬಂದಿರುವ ಸಾಧ್ಯತೆಯಿದೆ. ಈ ದೃಶ್ಯ ಆಧರಿಸಿ ಪೊಲೀಸರು ಆರೋಪಿಯ ಹುಡುಕಾಟ ನಡೆಸ್ತಿದ್ದಾರೆ.

ರಾಮೇಶ್ವರಂ ಕೆಫೆ ಬಾಂಬ್​​​ ಸ್ಪೋಟ ಪ್ರಕರಣವನ್ನು NIA ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಅಧಿಕೃತವಾಗಿ ತನಿಖೆ‌ ನಡೆಯಲಿದೆ.
ಈ ಸಂಬಂಧ HAL ಪೊಲೀಸ್​ ಠಾಣೆಯಲ್ಲಿ UAPA ಅಡಿ ಕೇಸ್​ ದಾಖಲಾಗಿತ್ತು. ಇದೀಗ ಪ್ರಕರಣದ ಗಂಭೀರತೆ ಅರಿತು NIAನಿಂದ ಕೇಸ್​ ದಾಖಲಿಸಿಕೊಂಡಿದೆ.

ಇದನ್ನೂ ಓದಿ : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ : ನಾಲ್ಕನೇ ದಿನವೂ ಬಾಂಬರ್​ಗಾಗಿ ಪೊಲೀಸರ ಶೋಧ..!

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here