‘ಬಿಗ್ ಬಾಸ್’ ಕನ್ನಡ ಸೀಸನ್ 11ರಲ್ಲಿ ಅತೀ ಕಡಿಮೆ ಅವಧಿ ಇದ್ದರೂ ಕೂಡ ಜಾಸ್ತಿ ಜನಪ್ರಿಯತೆ ಗಳಿಸಿದ್ದು ‘ವಕೀಲ್ ಸಾಬ್’ ಖ್ಯಾತಿಯ ಕೆ ಎನ್ ಜಗದೀಶ್. ಹೌದು..’ಬಿಗ್ ಬಾಸ್’ ಮನೆಗೆ ಎಂಟ್ರಿ ಕೊಟ್ಟ ದಿನದಿಂದಲೇ ಜಗದೀಶ್ ತಮ್ಮ ಹವಾ ಏನು ಅಂತ ತೋರಿಸಿದ್ದರು. ಕೊನೆಗೆ ಇಡೀ ಮನೆಯನ್ನೇ ಎದುರಾಕಿಕೊಂಡಿದ್ದರು. ಸದ್ಯ ‘ಬಿಗ್ ಬಾಸ್’ ಶೋನಿಂದ ಹೊರ ಬಂದಿರುವ ಅವರು, ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.
ಡಿಕೆಡಿಗೆ ಹೆಜ್ಜೆ ಹಾಕುತ್ತ ಜಗದೀಶ್ ಎಂಟ್ರಿಕೊಟ್ಟಿದ್ದು, ದರ್ಶನ್ ನಟನೆಯ ಜಗ್ಗುದಾದ ಸಿನಿಮಾದ ಹಾಡಿಗೆ ಥೇಟ್ ಸಿನಿಮಾದಲ್ಲಿ ದರ್ಶನ್ ಹಾಕಿದ ಕಾಸ್ಟ್ಯೂಮ್ ಅನ್ನೇ ಹೋಲುವ ಉಡುಗೆಯಲ್ಲಿ ಆಗಮಿಸಿ ಸಖತ್ತಾಗಿಯೇ ಡಾನ್ಸ್ ಮಾಡಿದ್ದಾರೆ. ಜಗದೀಶ್ ಅವರ ಈ ಡಾನ್ಸ್ ನೋಡಿ, ವೆಲ್ಕಮ್ ಜಗದೀಶ್, ಡಾನ್ಸು ಸೂಪರ್ ಆಗಿಯೇ ಮಾಡಿದ್ರಿ” ಎಂದು ಶಿವಣ್ಣ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ.
ನಟಿ ರಕ್ಷಿತಾ ಪ್ರೇಮ್ ಕೂಡ ಡಿಕೆಡಿ ವೇದಿಕೆಗೆ ಜಗದೀಶ್ ಅವರನ್ನ ವೆಲ್ಕಮ್ ಮಾಡಿದ್ದಾರೆ. ಈ ವೇಳೆ ಜಗದೀಶ್ ಅವರು ಕ್ರೇಜಿ ಕ್ವೀನ್ ಸೌಂದರ್ಯದ ಬಗ್ಗೆ ವರ್ಣನೆ ಮಾಡಿದ್ದು, ರೊಮ್ಯಾಂಟಿಕ್ ಮೂಡಿಗೆ ಜಾರಿದ್ದಾರೆ. “ರಕ್ಷಿತಾ ಅವರನ್ನು ನೋಡಿ ಎಲ್ಲಾ ಮರೆತು ಹೋಗಿಬಿಟ್ಟೆ. ನೀವು, ನಿಮ್ಮ ಲುಕ್ಕು. ನಾನು ಶಾರುಖ್ ಖಾನ್ ಆಗಿಬಿಟ್ಟಿದ್ದೀನಿ ಇವತ್ತು” ಎಂದು ರಕ್ಷಿತಾ ಅವರನ್ನ ಜಗದೀಶ್ ಹಾಡಿ ಹೊಗಳಿದ್ದರು. ಜಗದೀಶ್ ಮಾತುಗಳಿಗೆ ರಕ್ಷಿತಾ ಪ್ರೇಮ್ ಕೂಡ ನಾಚಿ ನೀರಾಗಿದ್ದಾರೆ. ಬಳಿಕ ರಕ್ಷಿತಾ “ನೀವು ನಾಟಿ ಎಟ್ ಫಾರ್ಟಿ ಸರ್ ನೀವು” ಎಂದು ತಮಾಷೆ ಮಾಡಿದ್ದಾರೆ.
ಸದ್ಯ ಲಾಯರ್ ಜಗದೀಶ್ ಡ್ಯಾನ್ ಕರ್ನಾಟಕ ಡ್ಯಾನ್ಸ್ಗೆ ಎಂಟ್ರಿ ಕೊಟ್ಟಿರುವ ವಿಡಿಯೋ ವೈರಲ್ ಆಗಿದ್ದು, ಇಂದಿನ ಎಪಿಸೋಡ್ನಲ್ಲಿ ಪ್ರಸಾರ ಆಗಲಿದೆ. ಇನ್ನು ಡಿಕೆಡಿ ಶೋಗೆ ಜಗದೀಶ್ ಗೆಸ್ಟ್ ಆಗಿ ಬಂದಿದ್ದಾರಾ? ಅಥವಾ ಶೋನಲ್ಲಿ ಸ್ಪರ್ಧಿಯಾಗಿದ್ದಾರಾ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಇದನ್ನೂ ಓದಿ : ‘ನಿಮ್ಮೊಂದಿಗೆ ನಾನಿದ್ದೇನೆ’.. ತಂದೆ-ತಾಯಿ ಇಲ್ಲದ ಐಶ್ವರ್ಯಾಗೆ ಬಿಗ್ಬಾಸ್ನಿಂದ ಭರವಸೆಯ ಪತ್ರ..!