ಬೆಂಗಳೂರು : ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ಮಾಲೀಕರಿಗೆ ವಂಚನೆ ಮಾಡಿದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಐಶ್ವರ್ಯ ಗೌಡ ಮತ್ತು ಪತಿ ಹರೀಶ್ಗೆ ಹೈಕೋರ್ಟ್ ಜಾಮೀನು ನೀಡಿದೆ. ಬೆಂಗಳೂರಿನ ಚಂದ್ರಾ ಲೇಔಟ್ ಪೊಲೀಸರು ವಂಚನೆ ಪ್ರಕರಣದ ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ ಕಳೆದ ದಿನ ಹೈಕೋರ್ಟ್ ಜಾಮೀನು ನೀಡಿದ ಬೆನ್ನಲ್ಲೆ ಆರೋಪಿಗಳನ್ನು ನಿನ್ನೆ ರಾತ್ರಿಯೇ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಇದೀಗ ಚಿನ್ನದ ರಾಣಿ ಐಶ್ವರ್ಯಾ ಗೌಡ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಬ್ಯಾಟರಾಯನಪುರ ACP ಭರತ್ ರೆಡ್ಡಿ ನೇತೃತ್ವದಲ್ಲಿ R R ನಗರದ ಐಶ್ವರ್ಯ ಗೌಡ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಐಶ್ವರ್ಯಾ ವಿರುದ್ಧ ಚೀಟಿ, ಚಿನ್ನ ಸೇರಿ ಹಲವು ವಿಧದ ವಂಚನೆ ಮಾಡಿರೋ ಆರೋಪ ಕೇಳಿಬಂದಿದ್ದು, ಈ ಸಂಬಂಧ ಐಶ್ವರ್ಯಾ ಗೌಡ ಕಳೆದ ಶನಿವಾರ ಅರೆಸ್ಟ್ ಆಗಿದ್ದರು. ಐಶ್ವರ್ಯಾ ಗೌಡ ಚಿನ್ನಾಭರಣ ಇಟ್ಟಿದ್ದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಹಾಗಾಗಿ ಪೊಲೀಸರು ಕೋರ್ಟ್ನಿಂದ ಸರ್ಚ್ ವಾರೆಂಟ್ ಪಡೆದು ದಾಖಲೆಗಳು ಮತ್ತು ಚಿನ್ನಾಭರಣಕ್ಕಾಗಿ ರೇಡ್ ಮಾಡಿದ್ದಾರೆ.
ಇದನ್ನೂ ಓದಿ : ನಿರಂಜನ್ ಶೆಟ್ಟಿ ನಟನೆಯ “31 DAYS” ಚಿತ್ರದ ಒಪೇರ ಸಾಂಗ್ ರಿಲೀಸ್..!