ಸುಕುಮಾರ್ ನಿದೇರ್ಶನದ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ಬಹುನೀರಿಕ್ಷಿತ ‘ಪುಷ್ಪ 2’ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ಇದೀಗ ಬರೋಬ್ಬರಿ ಎರಡು ವರ್ಷಗಳ ಬಳಿಕ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಜೊತೆಗೆ ಸಿನಿಮಾದ ಪ್ರಚಾರಕ್ಕೆ ಮುನ್ನ ಹಕ್ಕುಗಳ ಮಾರಾಟ ಆರಂಭವಾಗಿದೆ.
ಹೌದು, ‘ಪುಷ್ಪ 2’ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದೆ. ಇದರ ನಡುವೆ ಸಿನಿಮಾದ ಮಾರಾಟ ಕಾರ್ಯಕ್ಕೂ ಚಾಲನೆ ದೊರೆತಿದ್ದು, ಸಿನಿಮಾದ ಒಟಿಟಿ ಹಕ್ಕುಗಳನ್ನು ಭಾರಿ ದೊಡ್ಡ ಮೊತ್ತಕ್ಕೆ ‘ಪುಷ್ಪ 2’ ಸಿನಿಮಾದ ನಿರ್ಮಾಣ ಸಂಸ್ಥೆಯಾಗಿರುವ ಮೈತ್ರಿ ಮೂವಿ ಮೇಕರ್ಸ್ ಮಾರಾಟ ಮಾಡಿದೆ. ಈ ಹಿಂದೆ ‘ಪುಷ್ಪ’ ಸಿನಿಮಾವನ್ನು ಅಮೆಜಾನ್ ಪ್ರೈಂ ಒಟಿಟಿಗೆ ಮಾರಾಟ ಮಾಡಲಾಗಿತ್ತು. ಆದರೆ ಈಗ ಇನ್ನೂ ದೊಡ್ಡ ಒಟಿಟಿಗೆ ಮಾರಾಟ ಮಾಡಲಾಗಿದೆ.
ಈ ಚಿತ್ರದ OTT ಹಕ್ಕುಗಳನ್ನು ನೆಟ್ಫ್ಲಿಕ್ಸ್ ಪಡೆದುಕೊಂಡಿದೆ. ಇದರ ಮಧ್ಯೆ ತೆಲುಗು ಸೇರಿದಂತೆ ಎಲ್ಲಾ ಭಾಷೆಗಳ ಪತ್ರಗಳು ಸೇರಿದಂತೆ 270 ಕೋಟಿ ರೂ.ಗೆ ಡೀಲ್ ಲಾಕ್ ಆಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಟ್ರೆಂಡ್ ಒಂದು ಸೃಷ್ಟಿಯಾಗಿದ್ದು, ಒಂದು ಸಿನಿಮಾಗಳನ್ನು ನೆಟ್ಫ್ಲಿಕ್ಸ್ ಹಾಗೂ ಅಮೆಜಾನ್ ಎರಡೂ ವೇದಿಕೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ‘ಪುಷ್ಪ 2’ ಸಿನಿಮಾವನ್ನು ಹಾಗೆ ಮಾಡಿಲ್ಲ ಬದಲಿಗೆ ಕೇವಲ ನೆಟ್ಫ್ಲಿಕ್ಸ್ಗೆ ಮಾತ್ರವೇ ಮಾರಾಟ ಮಾಡಲಾಗಿದೆ.
ಇಷ್ಟು ದೊಡ್ಡ ಮೊತ್ತದ ಹಣವನ್ನು ಇತ್ತೀಚೆಗಿನ ಇನ್ಯಾವುದೇ ಸಿನಿಮಾಕ್ಕೆ ನೀಡಲಾಗಿಲ್ಲ ಎನ್ನಲಾಗುತ್ತಿದೆ. ಇತ್ತೀಚೆಗೆ ಒಟಿಟಿಗೆ ಬಂದ ‘ಕಲ್ಕಿ 2898 ಎಡಿ’ ಸಿನಿಮಾದ ಹಕ್ಕುಗಳಿಗೂ ಸಹ ಇಷ್ಟು ದೊಡ್ಡ ಮೊತ್ತವನ್ನು ನೀಡಲಾಗಿಲ್ಲ ಎನ್ನಲಾಗುತ್ತಿದೆ. ‘ಪುಷ್ಪ’ ಸಿನಿಮಾ 2021ರಲ್ಲಿ ಸುಮಾರು 50 ಕೋಟಿ ಮೊತ್ತಕ್ಕೆ ಒಟಿಟಿಗೆ ಮಾರಾಟವಾಗಿತ್ತು, ಆದರೆ ‘ಪುಷ್ಪ 2’ 270 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, ಈ ಮೂಲಕ ಹೊಸ ದಾಖಲೆ ಸೃಷ್ಠಿ ಮಾಡಿದೆ.
ಇದನ್ನೂ ಓದಿ : ಕುಮಾರಸ್ವಾಮಿ ಫೈಲ್ ಇನ್ನೂ ರಾಜ್ಯಪಾಲರ ಮುಂದಿದೆ.. ಇನ್ನೂ ಯಾಕೆ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿಲ್ಲ – ಡಾ.ಜಿ.ಪರಮೇಶ್ವರ್..!