ಬೆಂಗಳೂರು : ಇತ್ತೀಚೆಗೆ, ಬೆಂಗಳೂರಿನ ಮೆಜೆಸ್ಟಿಕ್ನಲ್ಲಿರುವ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರಾಜಸ್ಥಾನದಿಂದ ನಾಯಿ ಮಾಂಸ ತುಂಬಿರುವ ಬಾಕ್ಸ್ಗಳು ಬಂದಿವೆ ಎಂದು ಹೇಳಿ ಹಿಂದೂ ಪರ ಸಂಘಟನೆಗಳ ನಾಯಕ ಪುನೀತ್ ಕೆರೆಹಳ್ಳಿ ಪ್ರತಿಭಟನೆ ಮಾಡಿದ್ದನು. ಈ ಸಂಬಂಧ ಪೊಲೀಸರು ಈತನನ್ನು ಬಂಧಿಸಿ ಲಾಕಪ್ನಲ್ಲಿ ಬಟ್ಟೆ ಬಿಚ್ಚಿ ಮನಸ್ಸು ಇಚ್ಛೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದೀಗ ಈ ಬಗ್ಗೆ ಭೈರಪ್ಪ ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುನೀತ್ ಕೆರೆಹಳ್ಳಿ ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ ಪ್ರಕರಣದ ಬಗ್ಗೆ ಗುಡುಗಿದ ಭೈರಪ್ಪ ಹರೀಶ್ ಕುಮಾರ್ ಅವರು, ಕುರಿ ಮಾಂಸದ ವಿಚಾರವಾಗಿ ಮೊನ್ನೆ ನಡೆದ ಹೋರಾಟದಲ್ಲಿ ಪುನೀತ್ ನಡೆ ಅರ್ಧ ಸರಿ ಇದೆ ಅರ್ಧ ತಪ್ಪಿದೆ. ಮಾಂಸದ ಸ್ವಚ್ಛತೆ ಕಾಪಾಡದೇ ಕಾನೂನು ಬಾಹಿರವಾಗಿ ಹೊರರಾಜ್ಯದಿಂದ ಮಾಂಸವನ್ನು ತರಿಸಿಕೊಳ್ಳುವುದು ಗಟ್ಟಿಯಾಗಿ ಪ್ರಶ್ನೆ ಮಾಡಬಹುದು ಆದರೆ ಈತ ಅದರ ನೆಪದಲ್ಲಿ ಒಂದು ಸಮುದಾಯವನ್ನು ಟಾರ್ಗೆಟ್ ಮಾಡಿ ಈ ಸಮುದಾಯವೇ ಮೋಸ ಮಾಡುವ ಜನ ಎನ್ನುವ ರೀತಿ ಸುಳ್ಳು ಪ್ರಚಾರ ಮಾಡಲು ಹೊರಟಿದ್ದು ಖಂಡನಿಯ. ಕತ್ತೆ ಬೆಳೆದ ಹಾಗೆ ಬೆಳೆದಿದ್ದಾನೆ ಆದರೆ ಸ್ವಲ್ಪವೂ ತಲೆಯಲ್ಲಿ ಬುದ್ಧಿ ಇಲ್ಲ.
ಹಾಗೆಯೇ ಪುನೀತ್ ಅನ್ನು, ಅವನ ಕೋಮುವಾದವನ್ನು ಬಹಳ ಗಟ್ಟಿಯಾಗಿ ವಿರೋಧಿಸೋಣ ,ಪ್ರಶ್ನಿಸೋಣ, ಟೀಕಿಸೋಣ ಕೊನೆಯಲ್ಲಿ ಫೀಲ್ಡ್ಗೆ ಇಳಿದು ಮುಲಾಜಿಲ್ಲದೆ ಪ್ರತಿಭಟಿಸೋಣ ಆದರೆ ಇವನ ಮೇಲೆ ಅಮಾನವೀಯವಾಗಿ ನಡೆಸಿಕೊಂಡ ಪೊಲೀಸರ ನಡೆ ನಾನು ಖಂಡಿಸುತ್ತೇನೆ.
ಪೊಲೀಸರು ಈತನನ್ನು ಕಾನೂನಿನ ಅಡಿಯಲ್ಲಿ ಎಲ್ಲಾ ರೀತಿಯಲ್ಲಿ ಶಿಕ್ಷಿಸಲಿ ಆದರೆ ಕಾನೂನಿನ ವಿರುದ್ಧ ಠಾಣೆಗೆ ಕರೆದೊಯ್ದು ಬಟ್ಟೆ ಬಿಚ್ಚುವುದು ಮನಸ್ಸು ಇಚ್ಛೆ ಹಲ್ಲೆ ಮಾಡುವುದು ಅದನ್ನು ಚಿತ್ರೀಕರಿಸಿ ಬೆದರಿಸುವುದು ಇವೆಲ್ಲ ಮಾನವ ಹಕ್ಕುಗಳ ಉಲ್ಲಂಘನೆ.
ನಮ್ಮ ವಿರೋಧಿ ಆದ ತಕ್ಷಣ ಅವನನ್ನು ಈ ರೀತಿ ಮಾನವ ಹಕ್ಕು ಉಲ್ಲಂಘನೆ ಮಾಡಿ ಅವಮಾನಿಸಬೇಕು ಎಂದು ನಾನು ಕನಸಿನಲ್ಲೂ ಬಯಸುವುದಿಲ್ಲ, ಬಯಸಲು ಬಾರದು. ನಾನು ಮಾಧ್ಯಮಗಳಲ್ಲಿ ಗಮನಿಸಿದಂತೆ ಪೊಲೀಸರು ಪುನೀತ್ ಅನ್ನು ಬಟ್ಟೆ ಬಿಚ್ಚಿ ಸೆಲ್ ಒಳಗಡೆ ಹಾಕಿ ಹಲ್ಲೆ ಮಾಡಿ ವಿಡಿಯೋ ಚಿತ್ರೀಕರಿಸಿ ದಮಕಿ ಹಾಕಿದ್ದರೆ ಎಂದು ಸುದ್ದಿಯಾಗಿದೆ ಒಂದು ವೇಳೆ ಇದು ನಿಜವಾದರೆ ಇದು ನಾಗರೀಕ ಸಮಾಜ ತಲೆತಗ್ಗಿಸುವ ವಿಚಾರ.
ಕಾನೂನಿನ ಚೌಕಟ್ಟಿನಲ್ಲಿ ಪುನೀತನನ್ನು ಬಗ್ಗು ಬಡಿಯಬೇಕೇ ಹೊರತು ಈ ನಡೆ ಸರಿಯಲ್ಲ. ಪೊಲೀಸರ ಈ ಕೆಟ್ಟ ವರ್ತನೆ ಇಂದು ನಾವು ಸಮರ್ಥಿಸಿದರೆ ನಾಳೆ ಇದೇ ವರ್ತನೆ ನಮಗೂ ಮುಂದುವರೆಯುತ್ತದೆ. ಸಾಮಾಜಿಕ ಕಳಕಳಿಯುಳ್ಳ ಎಲ್ಲರೂ ಇದನ್ನು ಖಂಡಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಪಾದಯಾತ್ರೆ ಬಿಕ್ಕಟ್ಟಿನ ಮಧ್ಯೆ ವಿಜಯೇಂದ್ರಗೆ ಹೈಕಮಾಂಡ್ ಬುಲಾವ್ – ನಿನ್ನೆ ದಿಢೀರ್ ದೆಹಲಿಗೆ ಹೊರಟ ವಿಜಯೇಂದ್ರ ಟೀಮ್..!