ತುಮಕೂರು : ಹೃದಯಾಘಾತದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರಿನ ವಿನಾಯಕ ಕಾಲೇಜಿನಲ್ಲಿ ನಡೆದಿದೆ. 17 ವರ್ಷದ ಶಮಂತ್ ಮೃತ ವಿದ್ಯಾರ್ಥಿ.
ಪ್ರಥಮ ಪಿಯುಸಿ ಓದುತ್ತಿದ್ದ ಶಮಂತ್ ಎಂದಿನಂತೆ ಇಂದು ಬೆಳಗ್ಗೆ ಕಾಲೇಜಿಗೆ ಬಂದಿದ್ದ. ಕಾಲೇಜು ಮುಂದೆ ಸ್ನೇಹಿತರ ಜೊತೆ ಮಾತನಾಡುತ್ತಿರುವಾಗಲೇ ಶಮಂತ್ ಹಠಾತ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ರವಾನಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಈ ಘಟನೆ ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಮೈಸೂರಿನಲ್ಲಿ ಹರಕೆ ಗೂಳಿಯ ಮೇಲೆ ಕಿಡಿಗೇಡಿಗಳಿಂದ ದಾಳಿ – ಮಾರಕಾಸ್ತ್ರದಿಂದ ಬಾಲ ಕತ್ತರಿಸಿ ವಿಕೃತಿ..!
Post Views: 473