ಬೆಂಗಳೂರು : ಬೆಂಗಳೂರಿನ ಬ್ಯಾಟರಾಯನಪುರದ ವಿಶ್ವೇಶ್ವರಯ್ಯ ಲೇಔಟ್ನಲ್ಲಿ PSI ನಾಗರಾಜ್ ಸಂಪ್ಗೆ ಬಿದ್ದ ಮಗುವಿನ ಪಾಲಿಗೆ ರಕ್ಷಕರಾಗಿದ್ದಾರೆ. ನಿನ್ನೆ ಮಧ್ಯಾಹ್ನ 10 ಅಡಿ ಆಳದ ಸಂಪಿಗೆ 2 ವರ್ಷದ ಮಗು ಬಿದ್ದಿತ್ತು.
ಬಿಇಎಲ್ ಬಳಿಯ ಮನೆಯೊಂದರಲ್ಲಿ ಮಗು ಆಟ ಆಡುತ್ತ ಸಂಪ್ನಲ್ಲಿನ ನೀರಿಗೆ ಬಿದ್ದಿತ್ತು. ಈ ವೇಳೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆ PSI ನಾಗರಾಜ್ ಅದೇ ಮಾರ್ಗದಲ್ಲಿ ಕೆಲಸಕ್ಕೆ ಹಾಜರಾಗಲು ಹೋಗುತ್ತಿದ್ದರು. ಜನರ ಕೂಗಾಟ ಕೇಳಿ ಮಗುವಿನ ರಕ್ಷಣೆಗೆ PSI ನಾಗರಾಜ್ ಧಾವಿಸಿದರು.
ಹಿಂದೆ ಮುಂದೆ ಆಲೋಚಿಸದೇ ಸಂಪಿಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. PSI ನಾಗರಾಜ್ ಕಾರ್ಯಕ್ಕೆ ಪೊಲೀಸ್ ಕಮಿಷನರ್ ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ – ಬಾಂಬರ್ನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿದ NIA..!
Post Views: 160