Download Our App

Follow us

Home » ರಾಜ್ಯ » ಪೊಲೀಸ್ ಇಲಾಖೆಗೆ ನಕಲಿ ಜನ್ಮ ದಿನಾಂಕ ನೀಡಿದ್ದ ಕೇಸ್ – PSI ಕಾಶಿಲಿಂಗೇಗೌಡ ಸಸ್ಪೆಂಡ್..!

ಪೊಲೀಸ್ ಇಲಾಖೆಗೆ ನಕಲಿ ಜನ್ಮ ದಿನಾಂಕ ನೀಡಿದ್ದ ಕೇಸ್ – PSI ಕಾಶಿಲಿಂಗೇಗೌಡ ಸಸ್ಪೆಂಡ್..!

ಬೆಂಗಳೂರು : ನಕಲಿ ಜನ್ಮ ದಿನಾಂಕ ನೀಡಿ ಸರ್ಕಾರಿ ಕೆಲಸ ಪಡೆದಿದ್ದ ಬ್ಯಾಡರಹಳ್ಳಿ ಠಾಣೆ PSI ಕಾಶಿಲಿಂಗೇಗೌಡರನ್ನು ಅಮಾನತು ಮಾಡಿ, ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್​ ಆದೇಶ ಹೊರಡಿಸಿದ್ದಾರೆ.

PSI ಕಾಶಿಲಿಂಗೇಗೌಡ ಅವರು ನಕಲಿ ದಾಖಲೆ ನೀಡಿದ ಸಂಬಂಧ ವಿಧಾನಸೌಧ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಸಬ್​ಇನ್ಸ್​​ಪೆಕ್ಟರ್​ ಕಾಶಿಲಿಂಗೇಗೌಡ ಜಾಮೀನು‌ ಪಡೆದುಕೊಂಡಿದ್ದರು. ನಂತರ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಇದೀಗ ಪಿಎಸ್​ಐ ಅಮಾನತು ಮಾಡಲಾಗಿದೆ.

PSI ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ ವಯಸ್ಸು 30 ವರ್ಷ ಮೀರಿರಬಾರದೆಂದು ಸರ್ಕಾರದ ನಿಯಮ ಇದೆ. ಹೀಗಿರುವಾಗ ಅರ್ಹ‌‌ ಅಭ್ಯರ್ಥಿ ಅಲ್ಲದಿದ್ದರು ಕೂಡ ಕಾಶಿಲಿಂಗೇಗೌಡ ತಮ್ಮ ಜನ್ಮ ದಿನಾಂಕವನ್ನು 1988 ಏಪ್ರಿಲ್ 15 ಎಂದು ನೀಡುವ ಮೂಲಕ 2017-18ರ ಸಾಲಿನ ಸಬ್​ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕಾಶಿಲಿಂಗೇಗೌಡ ವಿರುದ್ದ FIR ದಾಖಲಾಗಿತ್ತು.

ಇದನ್ನೂ ಓದಿ : ಭಾರತದಲ್ಲೂ ಜೋರಾಯ್ತು ಹೊಸ ವೈರಸ್​ ಕಾಟ – ಒಂದಲ್ಲ..ಎರಡಲ್ಲ 6 HMPV ಕೇಸ್ ಪತ್ತೆ..!

Leave a Comment

DG Ad

RELATED LATEST NEWS

Top Headlines

ಸುನಾಮಿ ಕಿಟ್ಟಿ ಅಭಿನಯದ “ಕೋರ” ಚಿತ್ರದ ಟ್ರೇಲರ್ ರಿಲೀಸ್ – ಫೆಬ್ರವರಿ 7 ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ!

ಬೆಂಗಳೂರು : ರತ್ನಮ್ಮ‌ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ ಒರಟ ಶ್ರೀ ನಿರ್ದೇಶನದ ಹಾಗೂ ರಿಯಾಲಿಟಿ ಶೋ ಮೂಲಕ ನಾಡಿನ ಜನರ ಗಮನ ಸೆಳೆದಿದ್ದ ಸುನಾಮಿ ಕಿಟ್ಟಿ ನಾಯಕನಾಗಿ

Live Cricket

Add Your Heading Text Here