ಬೆಂಗಳೂರು : ಪಿಎಸ್‌ಐ ಪರಶುರಾಮ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಹಾಗೂ ಪುತ್ರ ಪಂಪನಗೌಡ (ಸನ್ನಿ ಗೌಡ) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೀಗ ಪಿಎಸ್‌ಐ ಪರುಶುರಾಮ್ ಸಾವಿನ ಬಗ್ಗೆ ತನಿಖೆ ನಡೆಸಲು ರಾಜ್ಯಪಾಲರಿಗೆ ಕರ್ನಾಟಕ ಆಮ್‌ಆದ್ಮಿ ಯುವ ಘಟಕದಿಂದ ಪತ್ರ ಬರೆಯಲಾಗಿದೆ.
ಯುವ ಘಟಕದ ಅಧ್ಯಕ್ಷ, ವಕೀಲ ಲೋಹಿತ್ರಿಂದ ಪತ್ರ ಬರೆದಿದ್ದು ವರ್ಗಾವಣೆ ಸಂಬಂಧ ಹಣಕ್ಕೆ ಪೀಡಿಸುತ್ತಿದ್ದರು ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಆರೋಪಿಸಿರುವ ವ್ಯಕ್ತಿಯು ವಿಧಾನಭೆ ಸದಸ್ಯ ಹೀಗಾಗಿ ಕೂಡಲೇ ತನಿಖೆಗೆ ಸೂಚಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪರಶುರಾಮ್ ಅವರ ಪತ್ನಿ, MLA ಚನ್ನಾರೆಡ್ಡಿ ಹಾಗೂ ಪುತ್ರ ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ದೂರಿನ ಅನ್ವಯ ಇಬ್ಬರ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ IPC 352, 102, 108 (3) (5) ಸೆಕ್ಷನ್ಗಳಡಿ FIR ದಾಖಲಾಗಿದೆ. ಈ ಪ್ರಕರಣದಲ್ಲಿ ಯಾದಗಿರಿಯ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ A1 ಆರೋಪಿಯಾಗಿದ್ದು, ಶಾಸಕರ ಪುತ್ರ ಪಂಪನಗೌಡ ಅಲಿಯಾಸ್ ಸನ್ನಿಗೌಡ 2ನೇ ಆರೋಪಿಯಾಗಿದ್ದಾರೆ.
ಇದನ್ನೂ ಓದಿ : ವಯನಾಡು ಜನರ ನೆರವಿಗೆ ನಿಂತ ಕರ್ನಾಟಕ ಸರ್ಕಾರ – 100 ಮನೆ ನಿರ್ಮಾಣದ ಭರವಸೆ ಕೊಟ್ಟ ಸಿಎಂ ಸಿದ್ದರಾಮಯ್ಯ..!