Download Our App

Follow us

Home » ಮೆಟ್ರೋ » ಬೆಂಗಳೂರಿನಲ್ಲಿ ಸ್ಯಾಂಡಲ್​​ವುಡ್​ ನಿರ್ಮಾಪಕ ಸೌಂದರ್ಯ ಜಗದೀಶ್ ಆ*ತ್ಮಹತ್ಯೆ..!

ಬೆಂಗಳೂರಿನಲ್ಲಿ ಸ್ಯಾಂಡಲ್​​ವುಡ್​ ನಿರ್ಮಾಪಕ ಸೌಂದರ್ಯ ಜಗದೀಶ್ ಆ*ತ್ಮಹತ್ಯೆ..!

ಬೆಂಗಳೂರು : ಸ್ಯಾಂಡಲ್​​ವುಡ್​​ನ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿಗೆ ಸೌಂದರ್ಯ ಜಗದೀಶ್ ಅವರಿಗೆ ಬ್ಯುಸಿನೆಸ್​​ನಲ್ಲಿ ಲಾಸ್​ ಆಗಿತ್ತು. ಕೆಲ ತಿಂಗಳಿನ ಹಿಂದೆ ಜೆಟ್ಲಾಗ್​ ಪಬ್​​ನಲ್ಲಿ ಕಾಟೇರ ಸಿನಿಮಾ ಪಾರ್ಟಿ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ವಿವಾದದ ಬಳಿಕ ಜೆಟ್ಲಾಗ್ ರೆಸ್ಟೋ ಬಾರ್‌ ಲೈಸನ್ಸ್ 25 ದಿನಗಳ ರದ್ದು ಮಾಡಲಾಗಿತ್ತು. ಪತ್ನಿ ರೇಖಾ ಜಗದೀಶ್ ಈ ಬಾರ್‌ನ ಸಂಸ್ಥಾಪಕರು ಮತ್ತು ಡೈರೆಕ್ಟರ್ ಆಗಿದ್ದಾರೆ.

ಉದ್ಯಮದ ಜೊತೆಗೆ ಚಿತ್ರ ನಿರ್ಮಾಪಕ ಕೂಡ ಆಗಿದ್ದ, ಸೌಂದರ್ಯ ಜಗದೀಶ್ ಅವರು ಅಪ್ಪು ಮತ್ತು ಪಪ್ಪು, ಮಸ್ತ್ ಮಜಾ ಮಾಡಿ, ರಾಮ್‌ಲೀಲಾ, ಸ್ನೇಹಿತರು ಮುಂತಾದ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಸೌಂದರ್ಯ ಜಗದೀಶ್ ಇತ್ತಿಚೇಗಷ್ಟೇ ಮಗಳ ಮದ್ವೆ ಮಾಡಿದ್ದು, ವಿವಾಹಕ್ಕಾಗಿ ಸಾಲ ಕೂಡ ಮಾಡಿದ್ದರು.

ಜಗದೀಶ್ ಅವರ ಮೃತದೇಹವನ್ನು ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪತ್ನಿ ರೇಖಾ ಜಗದೀಶ್ ಮಗ ನಟ ಸ್ನೇಹಿತ್, ಓರ್ವ ಪುತ್ರಿ ಸೇರಿ ಅಪಾರ ಬಂಧು ಬಳಗದವರನ್ನು, ಚಿತ್ರರಂಗದ ಸ್ನೇಹಿತರನ್ನು ಅಗಲಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಕೊಲೆ ಮಾಡಿದ ಪತಿ ಅರೆಸ್ಟ್..!

Leave a Comment

DG Ad

RELATED LATEST NEWS

Top Headlines

ರಾಜ್ಯ ಕಾಂಗ್ರೆಸ್​ನಲ್ಲಿ ಮತ್ತೆ ಭಾರೀ ಬಿರುಗಾಳಿ – ಫಾರಿನ್​ನಲ್ಲಿ ಡಿಸಿಎಂ..ಆಪ್ತರ ಜೊತೆ ಸಿಎಂ..!

ಬೆಂಗಳೂರು : ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ವಿದೇಶ ಪ್ರವಾಸ ಕೈಗೊಂಡಿರುವ ಸಮಯದಲ್ಲೇ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ನಡೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ

Live Cricket

Add Your Heading Text Here