ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೋಟಿ ಹಣಕ್ಕೆ ಡಿಮ್ಯಾಂಡ್ ಹಿನ್ನೆಲೆ ಕಾಂಟ್ರಾಕ್ಟರ್ ಸಚಿನ್ ಎಂಬುವವರು ರೈಲ್ವೆ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಿಯಾಂಕ್ ಖರ್ಗೆ ಆಪ್ತರಾಗಿರುವ ರಾಜು ಕಪನೂರ್ ವಿರುದ್ಧ 7 ಪುಟಗಳ ಸುದೀರ್ಘ ಲೆಟರ್ ಬರೆದು 26 ವರ್ಷದ ಕಾಂಟ್ರಾಕ್ಟರ್ ಸಚಿನ್ ಸೂಸೈಡ್ ಮಾಡಿಕೊಂಡಿದ್ದರು. ಆತ್ಮಹತ್ಯೆ ಘಟನೆ ತೀವ್ರ ಸ್ವರೂಪ ಪಡೆದುಕೊಳ್ತಿದ್ದಂತೆ ಪ್ರಕರಣದ ಪ್ರಮುಖ ಆರೋಪಿ ರಾಜು ಕಪನೂರ್ ಅವರು ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಬೀದರ್ ಜಿಲ್ಲೆಯ ಸಚಿನ್ ಪಂಚಾಳ್ ಅವರು ನನಗೆ 1 ವರ್ಷದಿಂದ ಪರಿಚಯ ಇದೆ. ಇವರು ನನ್ನ ಬಳಿ ಬಂದು ಸಿವಿಲ್ ಇಂಜಿನಿಯರಿಂಗ್ ಮುಗಿದಿದೆ. ನಮ್ ಸಾಹೇಬರದು ಬಿ.ಇ. ಎಂ.ಟೆಕ್ ಮುಗಿದಿದ್ದು ಕ್ಲಾಸ್ ಒನ್ ಗುತ್ತಿಗೆದಾರರಾಗಿದ್ದೇವೆ. ನಿಮ್ಮದು ಏನೇ ಕೆಲಸ ಇದ್ರು ನಮ್ ಲೈಸೆನ್ಸ್ ಮೇಲೆ ಕೆಲಸ ಮಾಡಿ ಅಂತಾ ನನ್ ಬಳಿ ಬಂದಿದ್ದರು. ನನ್ ಬಳಿಯೂ ಲೈಸೆನ್ಸ್ ಇಲ್ಲ ಓಡಾಡಿ ಟೆಂಡರ್ ಹಾಕೋರು ಇಲ್ಲ ಅಂತಾ ಹೇಳಿದೆ. ಮೊದಲನೇಯದು ಏರ್ಪೋರ್ಟ್ ಟೆಂಡರ್ ಹಾಕಿದ್ರು ಅದು ಕೂಡ ಫೇಕ್ ಮಾಡಿ ವಿತೌಟ್ ಟೆಂಡರ್ ಹಾಕಿದರು. ನಾಲ್ಕೈದು ತಿಂಗಳು ನಮ್ಮ ಹಣ ಜಾಮ್ ಆಗಿ ಹೋಯ್ತು. ಅದಾದ ಬಳಿಕ KIADB ಒಂದು ಟೆಂಡರ್ ಹಾಕಿದ್ದರು. ಆ ದುಡ್ಡು ಸಹ ಅವನ ಅಕೌಂಟ್ಗೆ ಹಾಕಿದ್ವಿ, ಒಟ್ಟು 65 ಲಕ್ಷ ಹಣ ಹಾಕಿದ್ದೇವೆ. 15 ಲಕ್ಷ ಕ್ಯಾಶ್ ಕೊಟ್ಟಿದ್ದೇವೆ ಆ ನಂತರ ಟೆಂಡರ್ ಆರೇಳು ತಿಂಗಳು ಸಚಿನ್ ಸತಾಯಿಸಿದ,ಬಳಿಕ ನಾವು ಬೆಂಗಳೂರು ಹೋದೆವು ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಈ ಬಗ್ಗೆ ಸಚಿನ್ ಅವರಲ್ಲಿ ಕೇಳಿದಾಗ ಇಲ್ಲಣ್ಣ ಅದು ಆಗಿದೆ ನಮ್ ತಂದೆ ಬಳಿ ಹೋಗಿ ದುಡ್ಡು ಕೊಡ್ತೀನಿ ಎಂದರು. ಬಳಿಕ ನಾನು ಅವರ ಮನೆಗೆ ಹೋಗಿದ್ದೆ, ಅವನ ಸಹೋದರಿಯರಿಗೆ ನಿಮ್ ತಮ್ಮ ಹಣ ತಗೊಂಡು ಹೋಗಿದ್ದಾನೆ ಅಂತಾ ಹೇಳಿದೆ. ನಮಗೆ ಸ್ವಲ್ಪ ಕಾಲಾವಕಾಶ ಕೊಡಿ, ಸಚಿನ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಹೋಗಿ 15 ದಿನ ಆಯ್ತು.. ತಿಂಗಳವರೆಗೂ ನಮಗೂ ಕಾಲ್ ಮಾಡಿಲ್ಲ ಎಂದು ಸಿಸ್ಟರ್ಸ್ ಹೇಳಿದ್ರು. ಕಾಲ್ ಮಾಡಿದ ತಕ್ಷಣ ನಿಮಗೆ ತಿಳಿಸುವೆ ಸ್ವಲ್ಪ ದಿನ ತಾಳ್ಮೆ ವಹಿಸಿ ಎಂದ್ರು.
ಇದಾದ ಬಳಿಕ ನಿನ್ನೆ ಸಚಿನ್ ಫೇಸ್ಬುಕ್ನಲ್ಲಿ ಈ ರೀತಿ ನನಗೆ ಟಾರ್ಚರ್ ಆಗಿದೆ ಅಂತಾ ಹಾಕಿದ್ದಾರೆ. ಇದನ್ನು ನೋಡಿ ಕಲಬುರಗಿ ಸಬ್ ಅರ್ಬನ್ ಠಾಣೆಗೆ ದೂರು ಕೊಡಲು ಹೋಗಿದ್ದೆ. ನಾಳೆ ಒಂದು ದಿನ ಕಾಯಿರಿ ಅಂದ್ರು. ಇಲ್ಲಾಂದ್ರೆ FIR ಮಾಡೋಣ ಅಂತಾ ಪೊಲೀಸರು ಹೇಳಿದ್ರು. ನಾನು ಸಚಿನ್ಗೆ ಟಾರ್ಚರ್ ಮಾಡಿಲ್ಲ, ಬಡ್ಡಿ ವ್ಯವಹಾರ ಮಾಡಿಲ್ಲ, ಬಡ್ಡಿಗೂ ದುಡ್ಡು ಕೊಟ್ಟಿಲ್ಲ, ನಾನು ಅವನಿಗೆ ಲೈಸೆನ್ಸ್ ಇರೋ ಕಾರಣಕ್ಕಾಗಿ ಅವನ ಅಕೌಂಟ್ಗೆ ಹಣ ಹಾಕಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಘಟನೆಗೆ ಬೇರೆ ಬೇರೆ ಬಣ್ಣ ಹಚ್ಚುತ್ತಿದ್ದಾರೆ. ದಯವಿಟ್ಟು ಘಟನೆ ಬಗ್ಗೆ ಸತ್ಯಾಸತ್ಯತೆ ಆಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೋಟಿ ಡಿಮ್ಯಾಂಡ್? – ಕಾಂಟ್ರಾಕ್ಟರ್ ಸೂಸೈಡ್..!