ಬೆಂಗಳೂರು : ಕಾಂಟ್ರಾಕ್ಟರ್ ಸೂಸೈಡ್ ಅಸ್ತ್ರ ಬಿಟ್ಟ ಬಿಜೆಪಿಗೆ ಪ್ರಿಯಾಂಕ್ ತಿರುಗೇಟು ನೀಡಿದ್ದಾರೆ. ಆಡಿಯೋ ಬಾಂಬ್ ಎಸೆದು ಬಿಜೆಪಿ ನಾಯಕರಿಗೆ ಸವಾಲ್ ಎಸೆದಿದ್ದಾರೆ. ನಿಮ್ಮ ಸಂಸ್ಕೃತಿ ಎಂಥಾದ್ದು ಅಂತಾ ಈ ಆಡಿಯೋನೇ ಹೇಳುತ್ತೆ. ವಿಜಯೇಂದ್ರ, ನಾರಾಯಣಸ್ವಾಮಿ ನೀವು ಸರಿಯಾಗಿ ಹೋಂ ವರ್ಕ್ ಮಾಡಿ. ಆರೋಪ ಮಾಡೋ ಮುನ್ನ ಎಲ್ಲವನ್ನೂ ಸರಿಯಾಗಿ ತಿಳ್ಕೊಳಿ ಎಂದು ಗುಡುಗಿದ್ದಾರೆ.
ನಿಮ್ಮದೇ ಪರಾಜಿತ ಅಭ್ಯರ್ಥಿ ಏನ್ ಮಾತಾಡಿದ್ದಾರೆ ನೋಡಿ. ಖರ್ಗೆ ಕುಟುಂಬವನ್ನೇ ಮುಗಿಸ್ತೀನಿ ಅಂತಾ ಹೇಳಿದ್ದಾರೆ. ಮೊದಲು ನಿಮ್ಮವರ ನಾಲಿಗೆ ಶುದ್ಧ ಮಾಡಿಕೊಳ್ಳಿ ಎಂದು ಚಿತ್ತಾಪುರ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಪ್ರಿಯಾಂಕ್ ಖರ್ಗೆ ಸಿಡಿಸಿದ್ದಾರೆ.
ಮಣಿಕಂಠ ರಾಥೋಡ್ ಅವರು ಫೋನ್ನಲ್ಲಿ ರವಿ ಎಂಬಾತನ ಜೊತೆ ತಮ್ಮ ಕುಟುಂಬದ ಬಗ್ಗೆ ಮಾತ್ನಾಡಿರುವ ಆಡಿಯೋವನ್ನು ಪ್ರಿಯಾಂಕ್ ಖರ್ಗೆ ರಿಲೀಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ, ಸಿಬಿಐ ತನಿಖೆಗಾಗಿ ಪ್ರಧಾನಿಗೆ ಪತ್ರ ಬರೆಯುತ್ತೇವೆ : ಸಚಿನ್ ಸಹೋದರಿ..!