ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ & ಗ್ಯಾಂಗ್ ಪೊಲೀಸರ ವಶದಲ್ಲಿದ್ದು, ಇದೀಗ ಯೂಟ್ಯೂಬರ್ ರಜನಿ ಅರೆಸ್ಟ್ ಆಗೋದು ಕೂಡ ಗ್ಯಾರೆಂಟಿಯಾಗಿದೆ. ರಜನಿ ವಿರುದ್ಧ ನಟ ಒಳ್ಳೇ ಹುಡುಗ ಪ್ರಥಮ್ ದೂರು ನೀಡಿದ್ದಾರೆ.
ನಟ ದರ್ಶನ್ ಫ್ಯಾನ್ಸ್ ನನಗೆ ಜೀವ ಬೆದರಿಕೆ ಹಾಕ್ತಿದ್ದಾರೆ, ರಜನಿ ಎಲ್ಲರನ್ನೂ ಎತ್ತಿಕಟ್ಟಿ ಬೆದರಿಕೆ ಹಾಕಿಸ್ತಿದ್ದಾರೆ. ಎಲ್ಲಾ ದರ್ಶನ್ ಫ್ಯಾನ್ಸ್ ಗ್ಯಾಂಗ್ಗೆ ಫೋನ್ ನಂಬರ್ ಕೊಟ್ಟಿದ್ದಾರೆ, ರಜನಿ ಮತ್ತು ದರ್ಶನ್ ಫ್ಯಾನ್ಸ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಜ್ಞಾನಭಾರತಿ ಪೊಲೀಸ್ ಠಾಣೆಗೆ ನಟ ಪ್ರಥಮ್ ದೂರು ನೀಡಿದ್ದಾರೆ.
ಠಾಣೆ ಮುಂದೆ ಗಲಾಟೆ ಮಾಡ್ತಿದ್ದ D ಫ್ಯಾನ್ಸ್ಗೆ ಜೀವನ ದೊಡ್ಡದು, ಹಾಳು ಮಾಡಿಕೊಳ್ಳಬೇಡಿ ಎಂದು ಪ್ರಥಮ್ ಬುದ್ಧಿ ಹೇಳಿದ್ದಾರೆ. ದರ್ಶನ್ ಬಗ್ಗೆ ಮಾತನಾಡಿದ್ದಕ್ಕೆ ಪ್ರಥಮ್ ಗೆ ಜೀವ ಬೆದರಿಕೆ ಹಾಕಿದ್ದು, ಜ್ಞಾನಭಾರತಿ ಠಾಣೆಯಲ್ಲಿ NCR 210/2024 ದಾಖಲಾಗಿದೆ.
ದೂರು ಕೊಟ್ಟ ಬಳಿಕ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ನಾನು ಶಾಂತಿಯಿಂದಲೇ ಇದ್ದೆ, ನೀವು ಅತೀಯಾಗಿ ಆಡ್ತಿದ್ದೀರಿ, ನಮ್ಮ #ಕರ್ನಾಟಕದ ಅಳಿಯ ತಂಡದ office noಗೆ ಬೆದರಿಕೆ ಹಾಕ್ತಿದ್ದೀರಿ. msg, social media Warning ಎಲ್ಲವೂ ಪೋಲೀಸರು ನೋಡಿಕೊಳ್ತಾರೆ, ಬದುಕು ಸುಂದರವಾದದ್ದು, ಅಂಧಾಭಿಮಾನಿಗಳೇ, ಬದುಕನ್ನು ತಂದೆ ತಾಯಿಗೆ ಮೀಸಲಿಡಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ದರ್ಶನ್ ಅಭಿಮಾನಿ ಸಂಘಗಳ ಮೇಲೆ ಕಣ್ಣಿಟ್ಟ ಪೊಲೀಸರು – ಗೂಂಡಾ ಚೇಲಾಗಳು ಗಪ್ಚುಪ್..!