ಬಾಗಲಕೋಟೆ : 2025ರ ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ನ್ಯೂಇಯರ್ಗೆ ರಾಜ್ಯದಲ್ಲಿಯೂ ಪಾರ್ಟಿ ಸಂಭ್ರಮ ಜೋರಾಗಲಿದೆ. ಈಗಾಗಲೇ ಸೆಲೆಬ್ರೇಷನ್ಗೆ ಹಲವರು, ಹೋಟೆಲ್ ರೆಸಾರ್ಟ್ ಬುಕ್ ಮಾಡಿದ್ದಾರೆ. ಹೊಸ ವರ್ಷ ಸೆಲೆಬ್ರೇಟ್ ಮಾಡುವವರಿಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿ, ಹಿಂದು ಸಂಪ್ರದಾಯ ಸಂಸ್ಕೃತಿ, ಧರ್ಮದ ಪ್ರಕಾರ, ವೈಜ್ಞಾನಿಕ ಹಾಗೂ ಪಂಚಾಂಗದ ಪ್ರಕಾರ ನಮಗೆ ಯುಗಾದಿ ಹೊಸ ವರ್ಷ. ಆದ್ರೆ ಬ್ರಿಟಿಷರು, ಕ್ರಿಶ್ಚಿಯನ್ಸ್ ಹಾಕಿದ ಈ ಪರಂಪರೆ ಜನವರಿ 1 ಹೊಸ ವರ್ಷ ಅನ್ನೋದು ಅವೈಜ್ಞಾನಿಕ. ಆದರೆ ನಮಗೆ ಯುಗಾದಿ ಹೊಸವರ್ಷ. ಆದ್ದರಿಂದ ಈ ರೀತಿಯ ಪಾರ್ಟಿಗಳನ್ನು ತಕ್ಷಣ ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಇನ್ನು ಡಿಸೆಂಬರ್ 31 ರಂದು ಕುಡಿದು ಕುಪ್ಪಳಸಿ, ಡ್ರಗ್ಸ್, ರೇಪ್, ಅಶ್ಲೀಲವಾಗಿ ಆಚರಣೆ ಮಾಡುವಂತಹದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಇದರ ವಿರುದ್ದ ಹೋರಾಟ ಮಾಡ್ತೇವೆ ಎಂದು ಮುತಾಲಿಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹಾಗೆಯೇ ಮಾಜಿ ಪ್ರಧಾನಿಯಾಗಿದ್ದ ಮನಮೋಹನ ಸಿಂಗ್ ಅವರ ನಿಧನದಿಂದ ಈಗ ದೇಶದಲ್ಲಿ 7 ದಿದ ಶೋಕಾಚರಣೆ ಇದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಲ್ಲಿ, ಇಡೀ ಕರ್ನಾಕದಲ್ಲಾಗಲಿ, ದೇಶದಲ್ಲಿ ಹೇಗೆ ಹೊಸ ವರ್ಷಾಚರಣೆ ಮಾಡ್ತೀರಿ? ಆದ್ದರಿಂದ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಇದನ್ನು ಕೂಡಲೇ ನಿಲ್ಲಿಸಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಚಿಕ್ಕೋಡಿಯಲ್ಲಿ ಭೀಕರ ರಸ್ತೆ ಅಪಘಾತ – ತಾಯಿ ಸಾವು, ಮಗನಿಗೆ ಗಂಭೀರ ಗಾಯ..!