ಬೆಂಗಳೂರು : ರಾಜ್ಯಾದ್ಯಂತ ಭಾರೀ ವಿವಾದಕ್ಕೀಡಾಗಿದ್ದ ಹಾಸನದ ಅಶ್ಲೀಲ ವೀಡಿಯೋ ವೈರಲ್ ಪ್ರಕರಣದ ಸಂಬಂಧ ಜಿ.ಪಂ. ಮಾಜಿ ಸದಸ್ಯೆಯೊಬ್ಬರ ಮೇಲೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಎಸಗಿದ್ದಾರೆ ಎನ್ನಲಾದ ಅತ್ಯಾಚಾರ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (SIT) ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ 1,691 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದೆ. ಚಾರ್ಜ್ಶೀಟ್ನಲ್ಲಿ 120 ಸಾಕ್ಷಿಗಳನ್ನು ಉಲ್ಲೇಖೀಸಲಾಗಿದೆ.
ಚಾರ್ಜ್ಶೀಟ್ನಲ್ಲಿ ಸಂತ್ರಸ್ಥೆಯ ಹೇಳಿಕೆ ಉಲ್ಲೇಖ : ಮಾಜಿ ಪ್ರಧಾನಿ ದೇವೇಗೌಡರಿಗೆ ಹಂಚಿಕೆಯಾಗಿದ್ದ ಹಾಸನದ ರೇಸ್‌ಕೋರ್ಸ್ ರಸ್ತೆಯಲ್ಲಿರುವ MP ಗೆಸ್ಟ್ಹೌಸ್ಗೆ ಪ್ರಜ್ವಲ್ ರೇವಣ್ಣ ಬರಲು ಹೇಳಿದ್ದರು. 2020 ಫೆಬ್ರವರಿಯಲ್ಲಿ ಕ್ಷೇತ್ರದ ಕೆಲಸದಕ್ಕೆ ಸಂಸದರನ್ನು ಭೇಟಿಯಾಗಿದ್ದೆ. ಅಲ್ಲಿದ್ದ ಎಲ್ಲರೂ ಹೋದ್ಮೇಲೆ ಪ್ರಜ್ವಲ್ ಕೈ ಹಿಡಿದು ನನ್ನ ಎಳೆದು ಮೊದಲನೇ ಮಹಡಿಯ ಕೊಠಡಿಗೆ ಕರೆದೊಯ್ದಿದ್ದರು.
ರೂಂ ಬಾಗಿಲ ಚಿಲಕ ಹಾಕಿ ಬಲವಂತಪಡಿಸಿದ್ದರು. ಬಟ್ಟೆ ಬಿಚ್ಚಲು ಹೇಳಿದಾಗ ನಾನು ನಿರಾಕರಿಸಿದೆ. ಆಗ ಗನ್ ತೋರಿಸಿ ನಿನ್ನ ಗಂಡನನ್ನು ಮುಗಿಸುತ್ತೇನೆಂದು ಕೊಲೆ ಬೆದರಿಕೆ ಒಡ್ಡಿದ್ದರು. ಸಂತ್ರಸ್ತೆ ಬೇಡವೆಂದು ಹೇಳಿ ಬಿಡಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದೆ ಬಲತ್ಕಾರ ಮಾಡಿ ತಮ್ಮ ಮೊಬೈಲ್‌ನಿಂದ ವೀಡಿಯೋ ಮಾಡಿದ್ದರು. 2020ರಿಂದ 2023ರವರೆಗೆ ಹೀಗೆ ಬೆದರಿಕೆಗೆ ಒಡ್ಡಿಯೇ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ವಿಡಿಯೋ ಕಾಲ್ ಮಾಡಿ ಆಗಾಗ ನಗ್ನವಾಗಿ ದೃಶ್ಯ ರೆಕಾರ್ಡ್ ಮಾಡಿದ್ದಾರೆ. ಸಂತ್ರಸ್ಥೆಯ ಈ ಎಲ್ಲಾ ಹೇಳಿಕೆಯನ್ನು ಪೊಲೀಸರು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದ್ದು, ಇದೀಗ ಪ್ರಜ್ವಲ್ ವಿರುದ್ದ 376(2),(N) ,506,354,(a),(1)(11),354(b) 354(c), ಐಟಿ ಕಾಯ್ದೆ 66(E) ಅಡಿಯಲ್ಲಿ ಪ್ರಕರಣ ದಾಖಲಿಸಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಇದನ್ನೂ ಓದಿ : ಬೂದಿ ಮುಚ್ಚಿದ ಕೆಂಡದಂತಿದ್ದ ನಾಗಮಂಗಲ ಸಹಜ ಸ್ಥಿತಿಯತ್ತ.. ಇಂದು ಶಾಂತಿ ಸಭೆ..!