ಬೆಂಗಳೂರು : ಹಾಸನ ಅಶ್ಲೀಲ ವಿಡಿಯೋ ಬೆಳಕಿಗೆ ಬಂದು ಬರೋಬ್ಬರಿ ಒಂದು ತಿಂಗಳು ಕಳೆದ ನಂತರ ಪ್ರಜ್ವಲ್ ರೇವಣ್ಣರ ಬಂಧನವಾಗಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ 34 ದಿನಗಳ ಬಳಿಕ ಬೆಂಗಳೂರು ಏರ್ಪೋರ್ಟ್ಗೆ ಬಂದಿಳಿಯುತ್ತಿದ್ದಂತೆಯೇ SIT ಮಹಿಳಾ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ.
ಇದೀಗ ಪ್ರಜ್ವಲ್ ರೇವಣ್ಣ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ನನ್ನನ್ನ ಸ್ವಲ್ಪ ಹೊತ್ತು ಸುಮ್ಮನೆ ಬಿಟ್ಟುಬಿಡಿ, ನಾನು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದೇನೆ. ಈಗಾಗಲೆ ನಾನು ಡಿಪ್ರೆಷನ್ಗೆ ಹೋಗಿದ್ದೆ, ಸದ್ಯಕ್ಕೆ ನನ್ನನ್ನು ಏನೂ ಕೇಳಬೇಡಿ. ನಾನು ಏನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ, ಸ್ವಲ್ಪ ಸಮಯ ಕೊಡಿ ನಿಮ್ಮ ತನಿಖೆಗೆ ಸಹಕಾರ ಕೊಡ್ತೀನಿ ಎಂದು SIT ಸೆಲ್ನಲ್ಲಿ ಪ್ರಜ್ವಲ್ ರೇವಣ್ಣ ಚಿಂತಾಕ್ರಾಂತರಾಗಿ ಕುಳಿತಿದ್ದಾರೆ.
ತಮ್ಮನ್ನು ಭೇಟಿಯಾದ ವಕೀಲರ ಬಳಿ ಪ್ರಜ್ವಲ್ ಮಾತ್ನಾಡಿ, ನಾನು ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ. ಅಷ್ಟು ದೂರದಿಂದ ಜರ್ನಿ ಮಾಡಿ ಬಳಲಿದ್ದೇನೆ, ಎಲ್ಲಾ ರೀತಿಯಲ್ಲೂ ಸ್ಪಂದಿಸಲು ಸಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಪ್ರಜ್ವಲ್ ಅರೆಸ್ಟ್ ಆಗ್ತಿದ್ದಂತೆ ಹೊಸ ಮೊಬೈಲ್ ವಶಕ್ಕೆ ಪಡೆದ SIT : ಹಾಗಾದ್ರೆ ಪ್ರಜ್ವಲ್ ಹಳೆ ಮೊಬೈಲ್ ಏನಾಯ್ತು?